Short News

ಜ್ಯೋತಿಷ್ಯದ ಪ್ರಕಾರ, ಈ 5 ರಾಶಿಯವರ ತುಂಬಾನೇ ಚಂಚಲ ಮನಸ್ಸಿನವರು!

ಜ್ಯೋತಿಷ್ಯದ ಪ್ರಕಾರ, ಈ 5 ರಾಶಿಯವರ ತುಂಬಾನೇ ಚಂಚಲ ಮನಸ್ಸಿನವರು!

ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಕುರಿತು ಮಾತನಾಡಬೇಕು ಎಂದರೆ ಅನೇಕ ವಿಚಾರಗಳು ಇರುತ್ತವೆ. ಕೆಲವೊಂದು ಉತ್ತಮ ಗುಣಗಳು, ಕೆಟ್ಟ ಗುಣಗಳು ಹಾಗೂ ಕೆಲವು ಮೊಂಡುತನದ ಸ್ವಭಾವ ಸೇರಿದಂತೆ ಎಲ್ಲವೂ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ. ಮೇಲ್ನೋಟಕ್ಕೆ ವ್ಯಕ್ತಿಯ ವ್ಯಕ್ತಿತ್ವವು ಪರಿಸರ ಮತ್ತು ಕುಟುಂಬದ ವಾತಾವರಣದ ಆಧಾರದ ಮೇಲೆ ವಿಕಸನವನ್ನು ಕಾಣುತ್ತದೆ ಎಂದು ಹೇಳಲಾಗುವುದು. ಆದರೆ ನಿಜಾರ್ಥದಲ್ಲಿ ಹೇಳುವುದಾದರೆ ಎಲ್ಲವೂ ಅವರ ಜಾತಕ ಹಾಗೂ ರಾಶಿಚಕ್ರದ ಪ್ರಭಾವವೇ ಆಗಿರುತ್ತದೆ ಎನ್ನಲಾಗುವುದು.

ವೈರಲ್ ಆಯ್ತು ವೆಡ್ಡಿಂಗ್ ಫೋಟೋ ಶೂಟ್: ವಾಟ್ಸ್‌ಆಪ್ -ಫೇಸ್‌ಬುಕ್‌ನಲ್ಲಿ ಫುಲ್ ಹವಾ..!

ವೈರಲ್ ಆಯ್ತು ವೆಡ್ಡಿಂಗ್ ಫೋಟೋ ಶೂಟ್: ವಾಟ್ಸ್‌ಆಪ್ -ಫೇಸ್‌ಬುಕ್‌ನಲ್ಲಿ ಫುಲ್ ಹವಾ..!

ಕೇರಳದಲ್ಲಿ ನಡೆದ ಫೋಟೋ ಶೂಟ್ ವೊಂದರಲ್ಲಿ ಪೋಟೋಗ್ರಾಫರ್ ಏರಿಯಲ್​ ಶಾಟ್​ನಂತಹ ಚಿತ್ರ ತೆಗೆಯುವ ಸಲುವಾಗಿ ತಾನೇ ಮರಕ್ಕೆ ಜೋತು ಬಿದ್ದು, ಕೋತಿಯ ಹಾಗೇ ನೇತಾಡಿ ಮುದ್ದಾದ ಫೋಟೋವೊಂದನ್ನು ಕ್ಲಿಕ್ ಮಾಡಿದ್ದಾನೆ.,ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ವಾಟ್ಸ್​ಆ್ಯಪ್​ ಸೇರಿದಂತೆ ಇತರೆ ತಾಣಗಳಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ನೀವು ಒಮ್ಮೆ ನೋಡಿ.
ರೈಲ್ವೆ ಇಲಾಖೆ ಆದಾಯ ವೃದ್ಧಿಗೆ ಬೆಸ್ಟ್ ಐಡಿಯಾ ಕೊಡಿ, 10 ಲಕ್ಷ ಗೆಲ್ಲಿ

ರೈಲ್ವೆ ಇಲಾಖೆ ಆದಾಯ ವೃದ್ಧಿಗೆ ಬೆಸ್ಟ್ ಐಡಿಯಾ ಕೊಡಿ, 10 ಲಕ್ಷ ಗೆಲ್ಲಿ

ಭಾರತೀಯ ರೈಲ್ವೆ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಈ ಬಾರಿ ಪ್ರಯಾಣಿಕರನ್ನು ನೆಚ್ಚಿಕೊಂಡಿದೆ. ಮುಖ್ಯವಾಗಿ ಯಾರು ಇಲಾಖೆಯ ಆದಾಯ ಹೆಚ್ಚಿಸುವ ಐಡಿಯಾ ನೀಡುತ್ತಾರೋ ಅವರಿಗೆ 10 ಲಕ್ಷ ರೂ. ಬಹುಮಾನ ನೀಡುವ ಮೂಲಕ ಬೆನ್ನು ತಟ್ಟುವ ಜನ್ ಭಾಗೀದಾರ್ ಯೋಜನೆ ರೂಪಿಸಿದೆ. ಆದಾಯ ವೃದ್ಧಿಗೆ ವಿಶೇಷ ಐಡಿಯಾಗಳು,ವ್ಯವಹಾರ ವೃದ್ಧಿಯ ಹೊಸ ಚಿಂತನೆ,ಪ್ರಯಾಣಿಕರನ್ನು ಸೆಳೆಯುವ ಯೋಜನೆಗಳು ಇದ್ದರೆ ರೈಲ್ವೆ ಇಲಾಖೆಯ ಜತೆ ಹಂಚಿಕೊಂಡು ಆದಾಯ ಹೆಚ್ಚಿಸುವ ಮೂಲಕ ಬಹುಮಾನ ಗೆಲ್ಲಿ ಎಂದು ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. mygovt.in ವೆಬ್ ಸೈಟ್ ಮೂಲಕ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಲು ಮೇ19 ಕಡೆ ದಿನ.
ಉನ್ನಾವೋ ರೇಪ್ ಪ್ರಕರಣ: ಬಂಧನಕ್ಕೊಳಗಾದ ಬಿಜೆಪಿ ಶಾಸಕನ ವೈ ಶ್ರೇಣಿ ಭದ್ರತೆ ಹಿಂಪಡೆದ ಯುಪಿ ಸರ್ಕಾರ

ಉನ್ನಾವೋ ರೇಪ್ ಪ್ರಕರಣ: ಬಂಧನಕ್ಕೊಳಗಾದ ಬಿಜೆಪಿ ಶಾಸಕನ ವೈ ಶ್ರೇಣಿ ಭದ್ರತೆ ಹಿಂಪಡೆದ ಯುಪಿ ಸರ್ಕಾರ

ಉನ್ನಾವೋದಲ್ಲಿ 18ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ನೀಡಲಾಗಿದ್ದ ವೈ ಶ್ರೇಣಿ ಭದ್ರತೆಯನ್ನು ಉತ್ತರಪ್ರದೇಶ ಸರ್ಕಾರ ಶುಕ್ರವಾರ ಹಿಂತೆಗೆದುಕೊಂಡಿದೆ. 11ಭದ್ರತಾ ಸಿಬ್ಬಂದಿಗಳಿದ್ದ ವೈ ಶ್ರೇಣಿಯ ಭದ್ರತೆಯನ್ನು ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ನೀಡಲಾಗಿತ್ತು. ಪ್ರಸ್ತುತ ಬಂಧನದಲ್ಲಿರುವ ಶಾಸಕನ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ಶಾಸಕನ ಭದ್ರತೆ ಕುರಿತಂತೆ ತೀವ್ರ ಟೀಕೆಗಳು ವ್ಯಕ್ತವಾದ ಕಾರಣ ಯುಪಿ ಸರ್ಕಾರ ಭದ್ರತೆಯನ್ನು ಹಿಂಪಡೆದಿದೆ.