Short News

ವಿಶ್ವಕಪ್: ಅಟ್ಯಾಕಿಂಗ್ ಸ್ಟಾರ್ ಗಳಿಂದ ಆಕರ್ಷಿಸಿದೆ ಎಚ್ ಗ್ರೂಪ್

ವಿಶ್ವಕಪ್: ಅಟ್ಯಾಕಿಂಗ್ ಸ್ಟಾರ್ ಗಳಿಂದ ಆಕರ್ಷಿಸಿದೆ ಎಚ್ ಗ್ರೂಪ್

ವಿಶ್ವಕಪ್ ಕಾದಾಟಕ್ಕಾಗಿ ಸಜ್ಜಾಗಿರುವ ವಿವಿಧ ಗ್ರೂಪ್ ಗಳಲ್ಲಿ ಅಟ್ಯಾಕಿಂಗ್ ಆಟಗಾರರಿರುವ ಗ್ರೂಪ್ ಆಗಿ ಎಚ್ ಗುರುತಿಸಿಕೊಂಡಿದೆ. ಪೋಲ್ಯಾಂಡ್, ಕೊಲಂಬಿಯಾ, ಸೆನೆಗಲ್ ಮತ್ತು ಜಪಾನ್ ತಂಡಗಳು ಗ್ರೂಪ್ ಎಚ್ ನಲ್ಲಿದ್ದು, ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಬಲ್ಲ ಗುಂಪಿದು. ಇಂದಿನಿಂದ ಆರಂಭವಾಗಿರುವ ಫುಡ್‌ಬಾಲ್ ವಿಶ್ವಕಪ್ ಜುಲೈ 15ರ ವರೆಗೆ ಒಟ್ಟು 32 ತಂಡಗಳು ಫುಟ್ಬಾಲ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರೀಡಾಭಿಮಾನಿಗಳಿಗೆ ಒಂದು ತಿಂಗಳವರೆಗೆ ಫುಟ್ಬಾಲ್ ರಸದೌತಣ ದೊರೆಯಲಿದೆ. ಗ್ರೂಪ್ ಎಚ್ ಪಂದ್ಯಾಟಗಳಲ್ಲಿ ಸೆನೆಗಲ್-ಕೊಲಂಬಿಯಾ ಕಾದಾಟ ಹೆಚ್ಚು ಕುತೂಹಲಕಾರಿಯಾದುದು.
ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್

ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್

ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಪೇಟಿಎಂ. ಒನ್97 ಕಮ್ಯುನಿಕೇಷನ್ ಒಡೆತನದಲ್ಲಿರುವ ಪೇಟಿಎಂ ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ತನ್ನ ಪೇಟಿಎಂ ಆಪ್ ನ ಇನ್ ಬಾಕ್ಸ್ ಮೋಡ್ ನಲ್ಲಿ ಭರಪೂರ ಮನರಂಜನೆ ಒದಗಿಸಲು ಮುಂದಾಗಿದೆ. ಪೇಟಿಎಂ ಇನ್ ಬಾಕ್ಸ್ ನಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಇದ್ದು, ನ್ಯೂಸ್, ಲೈವ್ ಟಿವಿ, ಕ್ರಿಕೆಟ್, ಮನರಂಜನಾ ವಿಡಿಯೋಗಳು ಮತ್ತು ಗೇಮ್ಸ್ ಟ್ಯಾಬ್ಸ್ ಅಳವಡಿಸಲಾಗಿದೆ. ಇನ್ ಬಾಕ್ಸ್ ಪೇಟಿಎಂನಡಿಯಿರುವ ಮೇಸೆಂಜಿಂಗ್ ಸೇವೆಯಾಗಿದೆ. ಈಗ ಮೇಸೆಂಜಿಂಗ್ ಸೇವೆ ಜೊತೆ ಮನರಂಜನೆಯು ಉಚಿತವಾಗಿ ದೊರಕಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಶಿಫಾರಸ್ಸು

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಶಿಫಾರಸ್ಸು

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರುವರೆ ವರ್ಷಗಳಿಂದ ಪಿಡಿಪಿಯ ಮೆಹಬೂಬಾ ಮುಫ್ತಿ ಸರಕಾರದ ಭಾಗವಾಗಿದ್ದ ಬಿಜೆಪಿ ತನ್ನ ಬೆಂಬಲವನ್ನು ಇಂದು ಹಿಂತೆಗೆದುಕೊಂಡಿದೆ. ಈ ಮೂಲಕ ಮುಫ್ತಿ ಸರಕಾರ ಪತನವಾಗಿದ್ದು, ಅಲ್ಲಿ ಈಗ ರಾಷ್ಟ್ರಪತಿ ಆಡಳಿತ ಹೇರುವ ದಿನಗಳು ಸಮೀಪಿಸಿವೆ.
ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಳ್ಳುತ್ತಿದ್ದಂತೆ, ರಾಜ್ಯಪಾಲರನ್ನು ಭೇಟಿಯಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ನಾವು ಸರಕಾರ ರಚಿಸುತ್ತಿಲ್ಲ ಎಂದಿದ್ದರು. ಜೊತೆಗೆ ಕಾಂಗ್ರೆಸ್ ಕೂಡ ಮೈತ್ರಿ ಸರಕಾರ ರಚನೆಯಿಂದ ಹಿಂದೆ ಸರಿದಿತ್ತು.

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 21, 2018 ಕೊನೆಯ ದಿನಾಂಕ. ಜರ್ನಲಿಸಂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 15 ವರ್ಷ ಅನುಭವ, ಮತ್ತು ಕಮ್ಯುನಿಕೇಶನ್ ಸ್ಕಿಲ್ ಹೊಂದಿರುವವರಿಗೆ ಮೊದಲ ಆದ್ಯತೆ. ಹುದ್ದೆ 75 ಸಾವಿರ ವೇತನ ನಿಗದಿ ಪಡಿಸಲಾಗಿದೆ. https://www.isro.gov.in/ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more