Short News

ಶ್ರೀರಾಮ ನವಮಿ ಪ್ರೀತಿ ಪಾತ್ರರಿಗೆ ಕಳುಹಿಸುವಂತಹ ಶುಭಾಶಯ ಸಂದೇಶಗಳು

ಶ್ರೀರಾಮ ನವಮಿ ಪ್ರೀತಿ ಪಾತ್ರರಿಗೆ ಕಳುಹಿಸುವಂತಹ ಶುಭಾಶಯ ಸಂದೇಶಗಳು

ರಾಮ ನವಮಿ ಹಿಂದೂ ಹಬ್ಬವಾಗಿದ್ದು, ಇದು ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ಆಚರಣೆಯಾಗಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನ ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ನಡುವೆ ಬರುತ್ತದೆ. ಈ ಬಾರಿ ಇದನ್ನು ಏಪ್ರಿಲ್‌ 10ರಂದು ಆಚರಿಸಲಾಗುತ್ತದೆ. ಅನೇಕ ಹಿಂದೂಗಳು ರಾಮನವಮಿಯ ಸಂದರ್ಭದಲ್ಲಿ ಉಪವಾಸ ಮಾಡುತ್ತಾರೆ. ಇದರಿಂದ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮನ ಆಶೀರ್ವಾದ ಸಿಗಲಿದೆ ಎನ್ನುವ ನಂಬಿಕೆ ಇದೆ.

 

 

ಪೆಟ್ರೋಲ್ ಎಂಜಿನ್‌ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್‌ ಡಸ್ಟರ್

ಪೆಟ್ರೋಲ್ ಎಂಜಿನ್‌ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್‌ ಡಸ್ಟರ್

ಬಹು ನಿರೀಕ್ಷಿತ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ, ರೆನಾಲ್ಟ್-ನಿಸ್ಸಾನ್ ಮೈತ್ರಿಯು ಜಂಟಿ ಟೀಸರ್ ಅನ್ನು ಹಂಚಿಕೊಳ್ಳುವ ಮೂಲಕ ಎರಡು ಹೊಸ ಎಸ್‍ಯುವಿಗಳನ್ನ್ನು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಇದರಲ್ಲಿ ಒಂದು ರೆನಾಲ್ಟ್ ಡಸ್ಟರ್ ಆಗಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್ ಭಾರೀ ಜನಪ್ರಿಯತೆ ಗಳಿಸಿದ ಎಸ್‍ಯುವಿಗಳಲ್ಲಿ ಒಂದಾಗಿದೆ.
Nissan Magnite: ನಿಸ್ಸಾನ್ ಮ್ಯಾಗ್ನೆಟ್‌ನ ಈ ಮಾದರಿಗಳನ್ನು..

Nissan Magnite: ನಿಸ್ಸಾನ್ ಮ್ಯಾಗ್ನೆಟ್‌ನ ಈ ಮಾದರಿಗಳನ್ನು..

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಕ ಕಂಪನಿ ನಿಸ್ಸಾನ್ (Nissan), ದೇಶೀಯ ಮಾರುಕಟ್ಟೆಯಲ್ಲಿ ಮ್ಯಾಗ್ನೈಟ್ (Magnite) ಎಸ್‌ಯುವಿಯನ್ನು ಮಾರಾಟಗೊಳಿಸುತ್ತಿದೆ. ಇದರ ಮುಂಭಾಗದ ಡೋರ್ (ಬಾಗಿಲು) ಹ್ಯಾಂಡಲ್ ಸೇನಾರ್ಸ್ ನಲ್ಲಿ ದೋಷ ಕಂಡುಬಂದಿದೆ. ಮುನ್ನೆಚ್ಚರಿಕೆಯಾಗಿ ಅದನ್ನು ಸರಿಪಡಿಸಲು ಈ ಕಾರನ್ನು ಹಿಂಪಡೆಯಲು ಕಂಪನಿಯು ತೀರ್ಮಾನಿಸಿದೆ. ನಿಸ್ಸಾನ್ ಇಂಡಿಯಾ (Nissan India), ನವೆಂಬರ್ 2020 ರಿಂದ ಡಿಸೆಂಬರ್ 2023 ರವರಿಗೆ ತಯಾರಿಸಿದ ಆರಂಭಿಕ ಆವೃತ್ತಿ ಎಕ್ಸ್ಇ ಹಾಗೂ ಮಧ್ಯಮ ಶ್ರೇಣಿ ಎಕ್ಸ್ಎಲ್ ರೂಪಾಂತರಗಳನ್ನು ವಾಪಸ್ ಪಡೆಯಲಿದೆ. ಡಿಸೆಂಬರ್ 2023ರ ನಂತರ ಉತ್ಪಾದಿಸಿರುವ ಈ ರೂಪಾಂತರಗಳಿಗೆ ಹಿಂಪಡೆಯುವಿಕೆ ಅನ್ವಯಿಸುವುದಿಲ್ಲ. ಸ್ವತಃ ಕಂಪನಿ ಸಿಬ್ಬಂದಿಯೇ ಶೀಘ್ರದಲ್ಲಿ ಕಾರುಗಳು ಮಾಲೀಕರನ್ನು ಸಂಪರ್ಕಿಸಲಿದ್ದಾರೆ.
ಶ್ರೀ ರಾಮ ನವಮಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು

ಶ್ರೀ ರಾಮ ನವಮಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು

ಏಪ್ರಿಲ್ 21ರಂದು ರಾಮ ನವಮಿ ಆಚರಿಸಲಾಗುವುದು. ಭಾರತದಲ್ಲಿ ಶ್ರೀರಾಮನನ್ನು ಕೋಟ್ಯಾಂತರ ಮಂದಿ ಪೂಜಿಸುತ್ತಾರೆ. ಶ್ರೀ ರಾಮ ಆದರ್ಶ ಪುರುಷ, ಶ್ರೀರಾಮ ಜನಿಸಿದ ದಿನವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.

ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ .

ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು.