Short News

ಮಗಳಿಂದ ನಾನೊಬ್ಬ ಪರಿಪೂರ್ಣ ವ್ಯಕ್ತಿ: ಮಹೇಂದ್ರ ಸಿಂಗ್‌ ದೋನಿ

ಮಗಳಿಂದ ನಾನೊಬ್ಬ ಪರಿಪೂರ್ಣ ವ್ಯಕ್ತಿ: ಮಹೇಂದ್ರ ಸಿಂಗ್‌ ದೋನಿ

ಕ್ರಿಕೆಟ್ ನಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ಮಗಳು ಝೀವಾ ನನ್ನನ್ನು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ಬದಲಿಸಿದಳು ಎಂದಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಝೀವಾ ಹುಟ್ಟಿದ್ದಾಗ ನಾನು ಅಲ್ಲಿ ಇರಲು ಸಾಧ್ಯವಾಗಿರಲಿಲ್ಲ. ಓರ್ವ ಕ್ರಿಕೆಟರ್ ಆಗಿ ನಾನು ಹೆಚ್ಚು ಕಾಲ ಕಳೆದಿದ್ದೇನೆ. ಇದೀಗ ನಾನು ನನ್ನ ಕುಟುಂಬದ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದು ಝೀವಾ ನನಗೆ ತುಂಬಾ ಹತ್ತಿರವಾಗಿದ್ದಾಳೆ ಎಂದಿದ್ದಾರೆ. ಐಪಿಎಲ್ ಸಮಯದಲ್ಲಿ ಝೀವಾ ಹಲವು ಬಾರಿ ನನ್ನ ಜೊತೆ ಮೈದಾನದಲ್ಲಿ ಕಾಲ ಕಳೆದಿದ್ದಳು. ನಿಜಕ್ಕೂ ಆ ಕ್ಷಣಗಳು ನನ್ನ ಜೀವನದಲ್ಲಿ ಅವಿಸ್ಮರಣೀಯ ಎಂದಿದ್ದಾರೆ.
ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು

ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು

ವರ್ಗಾವಣೆ ಆದ ಮೆಚ್ಚಿನ ಶಿಕ್ಷಕನನ್ನು ತಬ್ಬಿ ಅಳುತ್ತಿರುವ ವಿದ್ಯಾರ್ಥಿಗಳ ಪೊಟೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಅಧಿಕಾರಿಗಳು ಕರಗಿದ್ದು, ಆ ಶಿಕ್ಷಕನ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ. ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ವೇಲಿಯಾಗಾರಂ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಭಗವಾನ್‌ (26) ಗೆ ವರ್ಗಾವಣೆ ಆಗಿತ್ತು. ಆದರೆ ವಿಷಯ ತಿಳಿದ ವಿದ್ಯಾರ್ಥಿಗಳು ಶಿಕ್ಷಕನನ್ನು ಹೋಗಲು ಬಿಡದೆ ತಬ್ಬಿಕೊಂಡು ಅಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳು ಯಾವುವು ಗೊತ್ತಾ!?

ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳು ಯಾವುವು ಗೊತ್ತಾ!?

ಮೌಲ್ಯಯುತ ಬ್ರಾಂಡ್‌ ಎಂದರೇ ಏನು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡುತ್ತಿರುತ್ತೆ. ಪ್ರತಿವರ್ಷ ವಿಶ್ವದ ಪ್ರಸಿದ್ಧ ನಿಯತಕಾಲಿಕೆಯಾದ ಫೋರ್ಬ್ಸ್ ವಿಶ್ವದ ಟಾಪ್ ಮೌಲ್ಯಯುತ ಬ್ರಾಂಡ್‌ಗಳನ್ನು ಪಟ್ಟಿ ಮಾಡುತ್ತೆ. ಆ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಪ್ರತಿ ಜಾಗತಿಕ ಕಂಪನಿಗಳ ಕನಸಾಗಿರುವುದಂತೂ ನಿಜ. ಬ್ರಾಂಡ್‌ ನೇಮ್‌ಗಿಂತಲೂ ಕಂಪನಿಯ ವಾರ್ಷಿಕ ಆದಾಯ ಬಹಳಷ್ಟು ಇರುತ್ತೆ. ಆದರೆ ಫೋರ್ಬ್ಸ್ ಜನರು ಯಾವ ಬ್ರಾಂಡ್‌ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ, ಯಾವುವು ಜನರ ನಂಬಿಕೆ ಉಳಿಸಿಕೊಂಡು ಗ್ರಾಹಕರಿಂದ ಮೌಲ್ಯಯುತ ಎನಿಸಿಕೊಂಡಿವೆ ಎಂಬುದನ್ನು ಪರಿಗಣಿಸುತ್ತೆ.

ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಆಹಾರಗಳು

ಇಲ್ಲಿ ಪಟ್ಟಿಮಾಡಲಾದ ಆಹಾರ ಪದಾರ್ಥಗಳು ನಿಮ್ಮ ಜನನಾಂಗಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಜೊತೆಗೆ ಇವುಗಳು ನಿಮ್ಮ ರಕ್ತದೊತ್ತಡವನ್ನು ಅಧಿಕಗೊಳಿಸುತ್ತವೆ ಮತ್ತು ಅದರ ಜೊತೆಗೆ ನಿಮ್ಮ ಜನನಾಂಗವನ್ನು ಸಹ ಶಕ್ತಿಯುತವಾಗಿ ನಿಮಿರುವಂತೆ ಮಾಡುತ್ತವೆ. ಹಾಗಾಗಿ ಇಲ್ಲಿ ವರ್ಗೀಕರಿಸಲಾಗಿರುವ ಆಹಾರಗಳು ವಯಾಗ್ರದಂತೆಯೇ ವರ್ತಿಸುತ್ತವೆ. ಅವು ಯಾವುದೆಂದರೆ ಬಾದಾಮಿ, ಚಾಕಲೇಟ್, ಬೆಳ್ಳುಳ್ಳಿ, ಕುಂಬಳಕಾಯಿ ಬೀಜಗಳು, ಕಲ್ಲಂಗಡಿ ಹಣ್ಣು, ಶುಂಠಿ, ರಸ್ಬೆರಿ, ಬಾಳೆ ಹಣ್ಣು ಸೇವಿಸಿ, ಪಾಲಕ್ ಸೊಪ್ಪು, ಒಣಫಲಗಳು

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more