Short News

ಎಂ.ಎಸ್. ದೋನಿಯ ಕೀಪಿಂಗ್‌ ಶೈಲಿ ಸಂಶೋಧನೆಗೆ ಅರ್ಹ: ಕೋಚ್‌ ಆರ್.ಶ್ರೀಧರ್‌

ಎಂ.ಎಸ್. ದೋನಿಯ ಕೀಪಿಂಗ್‌ ಶೈಲಿ ಸಂಶೋಧನೆಗೆ ಅರ್ಹ: ಕೋಚ್‌ ಆರ್.ಶ್ರೀಧರ್‌

ಭಾರತ ತಂಡದ ಫೀಲ್ಡಿಂಗ್ ಕೋಚ್‌ ಆರ್.ಶ್ರೀಧರ್‌ ರವರು ದೋನಿ ಅವರ ವಿಕೆಟ್ ಕೀಪಿಂಗ್ ಶೈಲಿಯ ಬಗ್ಗೆ ಅಧ್ಯಯ ನಡೆಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಂಪ್ರದಾಯಿಕ ಶೈಲಿಯ ವಿಕೆಟ್ ಕೀಪಿಂಗ್ ಅನ್ನು ಧೋನಿಯವರು ಮಾಡುವುದಿಲ್ಲ. ಅವರು ತಮ್ಮದೇ ಆದ ವಿಶಿಷ್ಟ ಬಗೆಯ ವಿಕೆಟ್ ಕೀಪಿಂಗ್ ಮಾಡುತ್ತಾರೆ. ಹಾಗೂ ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆಂದುಕೊಂಡಾಡಿದ್ದಾರೆ. ಹಾಗೇ ಧೋನಿಯವರ ವಿಕೆಟ್ ಕೀಪಿಂಗ್ ನಿಂದ ಸಾಕಷ್ಟು ಕಲಿಯಬಹುದಾಗಿದೆ ಎಂದಿದ್ದಾರೆ.
ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ನೀರವ್ 6 ಫ್ಲ್ಯಾಟ್ ಬೆಲೆ ಜಸ್ಟ್ 900ಕೋಟಿ!

ಮುಂಬೈನ ವರ್ಲಿಯಲ್ಲಿರುವ ಸಮುದ್ರ ಮಹಲ್ ನಲ್ಲಿ ಸಮುದ್ರಾಭಿಮುಖವಾಗಿರುವ 6 ಫ್ಲ್ಯಾಟ್ ಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಮೋದಿ ಹೆಸರಿನಲ್ಲಿದೆ. ಈ ಪ್ರತೀ ಫ್ಲ್ಯಾಟ್ ಗಳ ಬೆಲೆ ತಲಾ 150 ಕೋಟಿ ರೂಪಾಯಿ ಎಂದು ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದರಲ್ಲಿ ಕೇವಲ ಈ 6 ಫ್ಲ್ಯಾಟ್ ಗಳ ಬೆಲೆಯೇ 900 ಕೋಟಿ ರೂಪಾಯಿ ದಾಟುತ್ತದೆ ಎಂದು ಐಟಿ ಅಂದಾಜಿಸಿದೆ.

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

'ಕಾಂಗ್ರೆಸ್ ದೀಪ ರಾಜ್ಯವನ್ನೇ ಸುಡುತ್ತಿದೆ':

ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

ಪಿಎನ್ ಬಿ ಹಗರಣವನ್ನಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬೆಳಿಗ್ಗೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಹೈದರಾಬಾದ್ ಎದುರು ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

ಹೈದರಾಬಾದ್ ಎದುರು ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

ವಿಜಯ್ ಹಜಾರೆ ಟೂರ್ನಿಯ ನಾಕೌಟ್‌ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಕರ್ನಾಟಕ ತಂಡವು ಬೃಹತ್ ಮೊತ್ತ ಪೇರಿಸಿದೆ. ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ಅವರ ಅದ್ಬುತ ಶತಕದ ನೆರವಿನಿಂದ 347 ರನ್‌ ಗುರಿಯನ್ನು ಹೈದರಾಬಾದ್ ತಂಡದ ಎದುರು ಕರ್ನಾಟಕ ತಂಡ ಇರಿಸಿದೆ. ನವದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಆರಂಭದಲ್ಲಿಯೇ ನಾಯರ್ (10) ವಿಕೆಟ್ ಕಳೆದುಕೊಂಡಿತಾದರೂ ಆ ನಂತರ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ದ್ವಿಶತಕದ ದಾಖಲೆ ಜೊತೆಯಾಟ ಆಡಿದರು.