Short News

ಫುಟ್ಬಾಲ್ ಹಬ್ಬದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ

ಫುಟ್ಬಾಲ್ ಹಬ್ಬದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ

ಒಂದು ತಿಂಗಳ ಕಾಳ ಕಾಲ್ಚೆಂಡಿನಾಟದ ಮನರಂಜನೆಗೆ ಕ್ಷಣಗಣನೆ ಆರಂಭವಾಗಿದೆ. ಫುಟ್ಬಾಲ್ ಹಬ್ಬದ ಆತಿಥ್ಯ ವಹಿಸಿರುವ ರಷ್ಯಾದಲ್ಲಿ ಈಗ ಎಲ್ಲೆಡೆ ಆಟದ್ದೇ ಮಾತು. ಉದ್ಘಾಟನೆಯ ಪಂದ್ಯ ಆತಿಥೇಯ ರಷ್ಯಾ ಮತ್ತು ಸೌದಿ ಅರೇಬಿಯಾಗಳ ನಡುವೆ ನಡೆಯಲಿದೆ. ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಮಾತುಕತೆಯನ್ನು ನಡೆಸಲು ಫುಟ್ಬಾಲ್ ವಿಶ್ವಕಪ್‌ಅನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ. 21ನೇ ವಿಶ್ವಕಪ್ ಮಹಾಸಮರದ ಉದ್ಘಾಟನಾ ಸಮಾರಂಭದಲ್ಲಿ ಫುಟ್ಬಾಲ್ ಆಡುವ ದೇಶಗಳ ವಿವಿಧ ಗಣ್ಯರು ಆಗಮಿಸಿದ್ದಾರೆ. ಸಮಾರಂಭದ ನೆಪದಲ್ಲಿಯೇ ರಷ್ಯಾ ತನ್ನ ತೈಲ ಪೂರೈಕೆಯ ಸಮಸ್ಯೆಯನ್ನು ನೀಗಿಸಿಕೊಳ್ಳಲು ಸೌದಿ ಅರೇಬಿಯಾ ಜತೆ ಮಾತುಕತೆ ನಡೆಸಲಿದೆ.
ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಈಗಾಗಲೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಇನ್ನೂ ಎರಡು ಸಚಿವ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ಕೊಡಬೇಕೆಂಬ ಬೇಡಿಕೆಯಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಮೊದಲ ಹಂತದಲ್ಲಿ ನಾನು, ತುಕಾರಾಂ ಮತ್ತು ನಾಗೇಂದ್ರ ಹೆಸರು ಇತ್ತು. ಕೊನೆ ಗಳಿಗೆಯಲ್ಲಿ ಅವರಿಬ್ಬರ ಹೆಸರು ಕೈ ಬಿಡಲಾಯಿತು.
ಪ್ರತಿ ರಾಶಿಚಕ್ರದವರಲ್ಲಿ ಕಂಡು ಬರುವ ನಕಾರಾತ್ಮಕ ಗುಣಗಳು

ಪ್ರತಿ ರಾಶಿಚಕ್ರದವರಲ್ಲಿ ಕಂಡು ಬರುವ ನಕಾರಾತ್ಮಕ ಗುಣಗಳು

ಈ ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಭಿನ್ನವಾಗಿರುತ್ತಾರೆ. ಒಬ್ಬರ ವ್ಯಕ್ತಿತ್ವ ಮತ್ತೊಬ್ಬರಂತಿರುವುದಿಲ್ಲ. ಇದರಿಂದಾಗಿಯೇ ಕೆಲವೊಮ್ಮೆ ಕಲಹ ಹಾಗೂ ಇತರ ಮನಸ್ತಾಪಗಳು ನಡೆಯುತ್ತಿರುತ್ತದೆ. ಹುಟ್ಟಿದ ಸಮಯ, ಗ್ರಹಗತಿ ಹಾಗೂ ಇತರ ಕೆಲವೊಂದು ಅಂಶಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.ಇಂತಹ ವ್ಯಕ್ತಿತ್ವವು ಕೇವಲ ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲದೆ ಸಂಬಂಧದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪ್ರತಿಯೊಂದು ರಾಶಿಯಲ್ಲೂ ಕೆಲವೊಂದು ವಿಶಿಷ್ಟ ಹಾಗೂ ವಿಚಿತ್ರವಾದ ನಕಾರಾತ್ಮಕ ಗುಣಲಕ್ಷಣಗಳು ಇರುತ್ತದೆ.

ಡಾ ರಾಜ್ ಯುವಜನಾಂಗಕ್ಕೆ ಸ್ಫೂರ್ತಿಯಾಗಬೇಕು : ದೊಡ್ಡಣ್ಣ

ಡಾ ರಾಜ್ ಯುವಜನಾಂಗಕ್ಕೆ ಸ್ಫೂರ್ತಿಯಾಗಬೇಕು : ದೊಡ್ಡಣ್ಣ

ಚಿತ್ರರಂಗದಲ್ಲಿ ಕಿರುಚಾಡಿದರೆ, ಕಾಲೆಳೆದರೆ ಏನು ಮಾಡುವುದಕ್ಕೆ ಆಗೋದಿಲ್ಲವೆಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ. 'ನವರಸ ನಟನ ಅಕಾಡಮಿ ಪ್ರೈ.ಲಿಮಿಟಿಡ್' ಸಂಸ್ಥೆಯಿಂದ ಮೊದಲ ಬ್ಯಾಚ್ ನಲ್ಲಿ ತರಬೇತಿ ಪಡೆದ 104 ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ದೊಡ್ಡಣ್ಣ ಡಾ ರಾಜ್ ಕುಮಾರ್ ಅವರನ್ನ ಸ್ಮರಿಸಿದರು. ಡಾ.ರಾಜ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದು ನೋಡುವುದೇ ಚೆಂದ. ಅವರ ಶ್ರದ್ದೆ, ವಿನಯ, ಶಿಸ್ತು ಇವೆಲ್ಲವನ್ನು ನಾವುಗಳು ಕಲಿತಿದ್ದೇವೆ. ಅವರಂತೆ ನೀವುಗಳು ಕೆಲವನ್ನು ಅಳವಡಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತನ್ನು ಹೇಳಿದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more