Short News

ಕಾಮನ್‌ವೆಲ್ತ್ ನಿಂದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್ ಹೊರಕ್ಕೆ

ಕಾಮನ್‌ವೆಲ್ತ್ ನಿಂದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್ ಹೊರಕ್ಕೆ

ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಡುವುದಿಲ್ಲ ಎಂದು ಕೋಚ್‌ ವಿಶ್ವೇಶ್ವರ್‌ ನಂದಿ ಹೇಳಿದ್ದಾರೆ.ಆ.18ರಿಂದ ಸೆ.2ರ ತನಕ ನಡೆಯುವ ಏಷ್ಯನ್‌ ಕ್ರೀಡಾಕೂಟವನ್ನು ಗುರಿಯಾಗಿರಿಸಿಕೊಂಡು ಸಂಪೂರ್ಣ ಫಿಟ್ನೆಸ್‌ ಸಾಧಿಸುವುದು ಅವರ ಗುರಿ' ಹೀಗಾಗಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ದೀಪಾ ಸಜ್ಜಾಗಿಲ್ಲ ಎಂದಿದ್ದಾರೆ. ಫಿಟ್ನೆಸ್ ಇದ್ದರೂ ಪೂರ್ಣಪ್ರಮಾಣದಲ್ಲಿ ತಯಾರಾಗಲು ಇನ್ನಷ್ಟು ಸಮಯ ಬೇಕಿದೆ. ಹೀಗಾಗಿ ಇದನ್ನು ಹಿನ್ನಡೆ ಎಂದು ಭಾವಿಸುವುದಿಲ್ಲ ಎಂದಿದ್ದಾರೆ.
ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ಮೇಷ:ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ. ವೃಷಭ:ಮಕ್ಕಳ ಪ್ರಗತಿಯಿಂದ ಸಂತಸ. ಮಿಥುನ:ಪ್ರವಾಸ ಮುಂದೂಡುವುದು ಒಳಿತು. ಕಟಕ:ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು. ಸಿಂಹ:ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ. ಕನ್ಯಾ:ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ. ತುಲಾ:ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವೃಶ್ಚಿಕ:ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ. ಧನುಸ್ಸು:ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ. ಮಕರ:ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ. ಕುಂಭ:ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ. ಮೀನ:ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.
ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾನವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಸಾವಂತ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಡಿಸಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದ ಪ್ರಕಾರ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರಂದು ಗಡುವು ನೀಡಲಾಗಿದ್ದು, ಇದನ್ನು ಸಂವಿಧಾನಾತ್ಮಕ ಪೀಠದ ತೀರ್ಪು ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಮೊದಲಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ಗಡುವು ನೀಡಲಾಗಿತ್ತು. ಕಲ್ಯಾಣ ಯೋಜನೆಗಳಿಗೆ ಜೂನ್ 30 ರೊಳಗೆ ಆಧಾರ್ ಲಿಂಕ್ ಮಾಡಬೇಕಿದೆ.