Short News

ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಆಫ್ಘಾನಿಸ್ತಾನ ವಿರುದ್ಧದ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂಲಕ ಆಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದೆ. ದಟ್ಟನೆಯ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಭೀತಿ ಮೂಡಿದೆ. ಕೊನೆಯ ಇನ್ನಿಂಗ್ಸ್‌ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುವ ಸಾಧ್ಯತೆ ಇರುವುದರಿಂದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮಹತ್ವದ ಸಿನಿಮಾ ಹಾಗೂ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ 'ನಾಗರಹಾವು' ಚಿತ್ರ ಮತ್ತೆ ಬರುತ್ತಿದೆ. ಪುಟ್ಟಣ್ಣ ಕಣಗಾಲ್ ಅವರ ಶ್ರೇಷ್ಟ ಸಿನಿಮಾ ಈಗ ಮತ್ತೆ ರೀ ರಿಲೀಸ್ ಆಗುತ್ತಿದೆ. ನಿನ್ನೆ 'ನಾಗರಹಾವು' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ನಟ ಸುದೀಪ್ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಆದರೆ ಈಗ ಆ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ 14ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಬರೀ 13 ಗಂಟೆಗಳಲ್ಲಿ 1 ಲಕ್ಷದ 88 ಸಾವಿರಕ್ಕಿಂತ ಅಧಿಕ ಜನರು ವೀಕ್ಷಿಸಿದ್ದಾರೆ.
ಕಿಚ್ಚ ಬಿಡುಗಡೆ ಮಾಡಿದ ಹೊಸ ನಾಗರಹಾವು ಟೀಸರ್

ಕಿಚ್ಚ ಬಿಡುಗಡೆ ಮಾಡಿದ ಹೊಸ ನಾಗರಹಾವು ಟೀಸರ್

ಸಾಹಸಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯದ ಚೊಚ್ಚಲ 'ನಾಗರಹಾವು' ಸಿನಿಮಾ ಹೊಸ ಅವತರಣಿಕೆಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹಳೆ ಸಿನಿಮಾವನ್ನು ಹೊಸ ತಂತ್ರಜ್ಙಾನದಲ್ಲಿ ಬೆಳ್ಳೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದು ಇಂದು ಟ್ವಿಟ್ಟರ್ ಮೂಲಕ ಕಿಚ್ಚ ಸುದೀಪ್ ಹೊಸ ತಂತ್ರಜ್ಙಾನದಲ್ಲಿ ಸಿದ್ದವಾರುವ 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಹೊಸ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಚಿತ್ರದ ಟೀಸರ್ ಝಲಕ್ ಅಭಿಮಾನಿಗಳ ಮುಂದೆ ಬಂದಿದೆ.
ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು

ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು

ವರ್ಗಾವಣೆ ಆದ ಮೆಚ್ಚಿನ ಶಿಕ್ಷಕನನ್ನು ತಬ್ಬಿ ಅಳುತ್ತಿರುವ ವಿದ್ಯಾರ್ಥಿಗಳ ಪೊಟೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಅಧಿಕಾರಿಗಳು ಕರಗಿದ್ದು, ಆ ಶಿಕ್ಷಕನ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ. ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ವೇಲಿಯಾಗಾರಂ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಭಗವಾನ್‌ (26) ಗೆ ವರ್ಗಾವಣೆ ಆಗಿತ್ತು. ಆದರೆ ವಿಷಯ ತಿಳಿದ ವಿದ್ಯಾರ್ಥಿಗಳು ಶಿಕ್ಷಕನನ್ನು ಹೋಗಲು ಬಿಡದೆ ತಬ್ಬಿಕೊಂಡು ಅಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more