Short News

ಭಾರತ ಧಿಡೀರ್ ಕುಸಿತ, ಸಾಧಾರಣ ಗುರಿ ಬೆನ್ನತ್ತಿದ ದ.ಆಫ್ರಿಕಾ

ಭಾರತ ಧಿಡೀರ್ ಕುಸಿತ, ಸಾಧಾರಣ ಗುರಿ ಬೆನ್ನತ್ತಿದ ದ.ಆಫ್ರಿಕಾ

ಉತ್ತಮವಾಗಿ ಆಡುತ್ತಿದ್ದ ಭಾರತ ತಂಡ ಲುಂಗಿ ನಿಡಿ ದಾಳಿಗೆ ಸಿಲುಕಿ ಧಿಡೀರ್ ಕುಸಿತ ಕಂಡಿತು. 300ರ ಗಡಿಯನ್ನು ಸುಲಭವಾಗಿ ದಾಟುತ್ತದೆಂಬ ನಿರೀಕ್ಷೆ ಇದ್ದ ಭಾರತ ಕೇವಲ 274 ರನ್‌ಗಳಿಗೆ ತನ್ನ ಇನ್ನಿಂಗ್ಸ್‌ ಮುಗಿಸಿತು. ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ 42 ಓವರ್‌ಗಳಿಗೆ 236 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಭಾರತವನ್ನು ಲುಂಗಿ ಗಿಡಿ ತಮ್ಮ ಕರಾರುವಕ್ ದಾಳಿಯಿಂದ ಕಾಡಿದರು. ಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಅವರ ವಿಕೆಟ್ ಕಬಳಿಸಿದ ಲುಂಗಿ ಗಿಡಿ ಆ ಭಾರತದ ಇನ್ನಿಂಗ್ಸ್‌ಗೆ ಭಾರಿ ಪೆಟ್ಟು ನೀಡಿದರು.
60 ಮೀ. ಓಟದಲ್ಲಿ ವಿಶ್ವ ದಾಖಲೆ ಬರೆದ ಕೋಲ್ಮನ್

60 ಮೀ. ಓಟದಲ್ಲಿ ವಿಶ್ವ ದಾಖಲೆ ಬರೆದ ಕೋಲ್ಮನ್

ಅಮೆರಿಕದ "ರೈಸಿಂಗ್‌ ಸ್ಟಾರ್‌' ಕ್ರಿಸ್ಟಿಯನ್‌ ಕೋಲ್ಮನ್‌ ಅಲುಕರ್ಕ್‌ನಲ್ಲಿ ನಡೆದ ಯುಎಸ್‌ ಚಾಂಪಿಯನ್‌ಶಿಪ್‌ನ ಒಳಾಂಗಣ ಕ್ರೀಡಾಂಗಣದ 60 ಮೀ. ಓಟವನ್ನು 6.34 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. 60 ಮೀ. ವೇಗದ ಓಟದ ಸ್ಪರ್ಧೆಯಲ್ಲಿ 1998ರಲ್ಲಿ ಅಮೆರಿಕದ ಮೌರಿಸ್‌ ಗ್ರೀನ್‌ 6.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. 21ರ ಹರೆಯದ ಕೋಲ್ಮನ್‌ ಹಳೆ ದಾಖಲೆಗಿಂತ 0.05 ಸೆಕೆಂಡ್‌ ವೇಗವಾಗಿ ಓಟ ಮುಗಿಸಿದರು. 6.40 ಸೆಕೆಂಡ್‌ನ‌ಲ್ಲಿ ಗುರಿ ತಲುಪಿದ ರೋನಿ ಬೇಕರ್‌ ದ್ವಿತೀಯ ಸ್ಥಾನ ಗಳಿಸಿದರು.
ನಿಮ್ಮ ಟಿವಿಯನ್ನು ಸ್ಮಾರ್ಟ್‌ಟಿವಿ ಮಾಡಲಿದೆ ಈ ಚಿಕ್ಕ ವೈಫೈ ಡಿವೈಸ್!!

ನಿಮ್ಮ ಟಿವಿಯನ್ನು ಸ್ಮಾರ್ಟ್‌ಟಿವಿ ಮಾಡಲಿದೆ ಈ ಚಿಕ್ಕ ವೈಫೈ ಡಿವೈಸ್!!

ಟಿವಿಯಲ್ಲಿ USB ಮತ್ತು ಎಚ್‌ಡಿಎಂಐ ಸಾಕೆಟ್‌ಗಳಿದ್ದರೆ ಯುಎಸ್‌ಬಿ ಡ್ರೈವ್ ಅನ್ನು ಟಿ.ವಿ.ಯಲ್ಲಿರುವ ಯುಎಸ್‌ಬಿ ಕಿಂಡಿಗೆ ಚುಚ್ಚಿ ಅಲ್ಲಿಂದ ಪ್ಲೇ ಮಾಡುವುದು ಕಿರಿಕಿರಿಯ ಕೆಲಸ. ಪ್ರತಿ ಸಲವೂ ಫೈಲುಗಳನ್ನು ನಕಲಿ ಟಿವಿಗೆ ಯುಎಸ್‌ಬಿ ಕನೆಕ್ಟ್ ಮಾಡದಂತೆ ನೇರವಾಗಿ ಮೊಬೈಲ್ ಕನೆಕ್ಟ್ ಮಾಡಲು ವೈಫೈ ಡಾಂಗಲ್ ಒಂದು ಕೇವಲ 1,500 ರೂಪಾಯಿಗಳಿಗೆ ಲಭ್ಯವಿದೆ.!! ಟಿ.ವಿ.ಯಲ್ಲಿ ಎಚ್‌ಡಿಎಂಐ ಕಿಂಡಿ ಇದೆ ಆದರೆ ಅದರಲ್ಲಿ ವೈಫೈ ಆಯ್ಕೆ ಇಲ್ಲವೆಂದಾದಲ್ಲಿ ಯುಎಸ್‌ಬಿಗೆ ಜೋಡಿಸುವ ವೈಫೈ ಡಾಂಗಲ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅಂತಹ ಒಂದು ಡಾಂಗಲ್ ಈ ಝೆಬ್ರೋನಿಕ್ಸ್ ಝೆಡ್‌ಇಬಿ-ಕಾಸ್ಟ್ 100 ಒಂದಾಗಿದ್ದು, ಇದು ಉತ್ತಮವಾಗಿದೆ.
'ಗಾಡ್, ಸೆಕ್ಸ್, ಟ್ರೂಥ್' ಎಂದ ವರ್ಮಾಗೆ ಪೊಲೀಸರಿಂದ ಡ್ರಿಲ್

'ಗಾಡ್, ಸೆಕ್ಸ್, ಟ್ರೂಥ್' ಎಂದ ವರ್ಮಾಗೆ ಪೊಲೀಸರಿಂದ ಡ್ರಿಲ್

ಭಾರತೀಯ ಚಿತ್ರರಂಗದ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಗಾಡ್ ಸೆಕ್ಸ್ ಅಂಡ್ ಟ್ರೂಥ್' (ಜಿಎಸ್ಟಿ) ಮತ್ತೆ ಸುದ್ದಿಯಲ್ಲಿದೆ. ಅಮೆರಿಕದ ನೀಲಿಚಿತ್ರ ತಾರೆ ಮಲ್ಕೋವಾ ಅವರು ಯಾವ ದೇಶದಲ್ಲಿದ್ದಾರೆ? ಚಿತ್ರದ ನಿರ್ದೇಶಕರು ಯಾರು? ಚಿತ್ರೀಕರಣ ನಡೆದಿದ್ದು ಎಲ್ಲಿ? ನೀವು ಭಾರತದಿಂದ ಅಲ್ಲಿನ ತಂತ್ರಜ್ಞರು ಮತ್ತು ನಟರು ಹೇಗೆ ಹಣ ಪಾವತಿಸುತ್ತಾರೆ ಎಂಬುದರ ಕುರಿತು ಹೈದರಾಬಾದಿನ ಸೆಂಟ್ರಲ್ ಕೈಂ ವಿಭಾಗ ಪೊಲೀಸರು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಇದೆ.

ಆದರೆ, ಈಗ ಇದ್ದಕ್ಕಿದ್ದಂತೆ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬಿದ್ದಿದ್ದು, ಅವರನ್ನು ಪೋರ್ನ್ ಸ್ಟಾರ್ ಎಂದು ಕರೆದಿದ್ದಾರೆ.