Short News

ಇಟಾಲಿಯನ್ ಓಪನ್: ಓಸ್ಟಪೆನ್ಕೊ ಕ್ವಾರ್ಟರ್ ಫೈನಲ್ ಪ್ರವೇಶ

ಇಟಾಲಿಯನ್ ಓಪನ್: ಓಸ್ಟಪೆನ್ಕೊ ಕ್ವಾರ್ಟರ್ ಫೈನಲ್ ಪ್ರವೇಶ

ಲ್ಯಾಟ್ವಿಯನ್ ಆಟಗಾರ್ತಿ ಜೆಲೆನಾ ಓಸ್ಟೆಪೆನ್ಕೊ ಅವರು ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಇಟಾಲಿಯನ್ ಓಪನ್ ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಜೆಲೆನಾ ಚೀನಾದ ಜಾಂಗ್ ಶುಯಿ ಅವರನ್ನು 6-2, 7-5 ಅಂತರದಿಂದ ಸೋಲಿಸಿದರು. ಹಾಲಿ ಫ್ರೆಂಚ್ ಚಾಂಪಿಯನ್ ಓಸ್ಟಪೆನ್ಕೊ ಅವರು ಕಳೆದ 11 ಸೀಸನ್ ಗಳಲ್ಲಿ 11 ಪಂದ್ಯಗಳಲ್ಲಿ 11 ಗೆಲುವುಗಳನ್ನು ದಾಖಲಿಸಿದ್ದಾರೆ. ವಿಶ್ವ ನಂ. 5 ಆಟಗಾರ್ತಿಯಾಗಿರುವ ಜೆಲೆನಾ ಮುಂದಿನ ಹಂತದಲ್ಲಿ ಒಂದೋ ಬ್ರಿಟನ್ ನ ಜೊಹನ್ನ ಕೊಂಟ ಅವರನ್ನು ಅಥವಾ ತೈವಾನ್ ನ ಹೈಸೀ ಸೂ-ವೈ ಅವರನ್ನು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಎದುರಿಸಲಿದ್ದಾರೆ.  
ಜಯನಗರ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಪ್ರಹ್ಲಾದ್ ಬಾಬು ಕಣಕ್ಕೆ

ಜಯನಗರ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಪ್ರಹ್ಲಾದ್ ಬಾಬು ಕಣಕ್ಕೆ

ಜಯನಗರದ ಮಾಜಿ ಶಾಸಕ ಬಿಎನ್ ವಿಜಯ್ ಕುಮಾರ್ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ವಿಧಾನಸಭಾ ಕ್ಷೇತ್ರಕ್ಕೆ ಅವರ ಸೋದರ ಪ್ರಹ್ಲಾದ್ ಬಾಬು ಅವರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಪ್ರಹ್ಲಾದ್ ಬಾಬು ಹೆಸನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ನಿಂದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಸ್ಪರ್ಧಿಸಿದ್ದರೆ ಸಾಮಾಜಿಕ ಹೋರಾಟಗಾರ ರವಿಕೃಷ್ಣ ರೆಡ್ಡಿ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಜೂನ್ 11ರಂದು ಮತದಾನ ನಡೆಯಲಿದ್ದು, ಜೂನ್ 13ಕ್ಕೆ ಮತ ಎಣಿಕೆ ನಡೆಯಲಿದೆ.
ಯೋಧ ತಂದೆಯ ಮೃತದೇಹದ ಎದುರು ಕಣ್ಣೀರಿಟ್ಟ ಬಾಲಕಿ

ಯೋಧ ತಂದೆಯ ಮೃತದೇಹದ ಎದುರು ಕಣ್ಣೀರಿಟ್ಟ ಬಾಲಕಿ

ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ವೀರಯೋಧನ ಮಗಳು ತಂದೆಯ ಮೃತದೇಹಕ್ಕೆ ಪುಷ್ಪನಮನ ಅರ್ಪಿಸಿ ದುಃಖಿಸುತ್ತಿರುವ ಮನಕಲಕುವ ಚಿತ್ರ ಜನರನ್ನು ಭಾವುಕರನ್ನಾಗಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಏಪ್ರಿಲ್ 10ರಂದು ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಯ್ಕ್ ದೀಪಕ್ ನೈನ್ವಾಲ್ ಅವರ ದೇಹಕ್ಕೆ ಎರಡು ಗುಂಡುಗಳು ಹೊಕ್ಕಿದ್ದರಿಂದ ತೀವ್ರ ಗಾಯಗೊಂಡಿದ್ದರು. ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮೃತಪಟ್ಟಿದ್ದರು. ತಂದೆಯ ಮೃಹದೇಹಕ್ಕೆ ಬಾಲಕಿ ಪುಷ್ಪನಮನ ಸಲ್ಲಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

  • ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ 2018 ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 7,720 ಕೋಟಿ ನಷ್ಟ ಅನುಭವಿಸಿದೆ. ಇದು ಸತತ ಎರಡನೇ ತ್ರೈಮಾಸಿಕ ನಷ್ಟವಾಗಿದೆ.
  • ಡಿಸೆಂಬರ್ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ರೂ. 2416.37 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಎರಡುಪಟ್ಟು ಸಾಲ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 11,740 ಕೋಟಿ ಇತ್ತು. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 10.35% ರಿಂದ 10.9% ಕ್ಕೆ ಏರಿದೆ.