Short News

ಒಡಿಶಾ ವಿರುದ್ಧ ಕರ್ನಾಟಕ ಗೆಲುವು, ಕ್ವಾಟರ್‌ಫೈನಲ್‌ ಹಾದಿ ಸುಗಮ

ಒಡಿಶಾ ವಿರುದ್ಧ ಕರ್ನಾಟಕ ಗೆಲುವು, ಕ್ವಾಟರ್‌ಫೈನಲ್‌ ಹಾದಿ ಸುಗಮ

ವಿಜಯ್ ಹಜಾರೆ ಟ್ರೋಫಿಯ ಎ ಗುಂಪಿನ ಕರ್ನಾಟಕ ಮತ್ತು ಒಡಿಶಾ ತಂಡದ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಗೆಲವು ಪಡೆದಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಗೆಲ್ಲಲು ಒಡಿಶಾಗೆ 354 ರನ್ ಗುರಿ ನೀಡಿತು. ಆದರೆ ಕರ್ನಾಟಕದ ಬೌಲರ್‌ಗಳ ಅತ್ಯುತ್ತಮ ದಾಳಿಯ ಮುಂದೆ ಮುಗ್ಗರಿಸಿದ ಒಡಿಶಾ ಕೇವಲ 220 ರನ್‌ಗಳಿಗೆ ಆಲ್‌ಔಟ್ ಆಗಿದೆ. ಕರ್ನಾಟಕ ತಂಡವು 133 ರನ್‌ಗಳ ಅಂತರದಿಂದ ಜಯ ಗಳಿಸುವ ಮೂಲಕ ಕ್ವಾಟರ್‌ಫೈನಲ್ ಪ್ರವೇಶಿಸುವ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ವೇಗವಾಗ ಬಂದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ, ಪವಾಡದಂತೆ ಪಾರಾದ ಮೂವರು

ವೇಗವಾಗ ಬಂದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ, ಪವಾಡದಂತೆ ಪಾರಾದ ಮೂವರು

ಗುಜರಾತ್ ನಲ್ಲಿ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಮಹಿಳೆ ಹಾಗೂ ಮಗುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಕ್ರಾಸ್ ಮಾಡುವ ವೇಳೆ ಅಡ್ಡಾದಿಡ್ಡಿಯಾಗಿ ಚಲಿಸುತ್ತ ವೇಗವಾಗ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಮೂವರು ಕೆಳಕ್ಕೆ ಬಿದ್ದರೂ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗುಜರಾತಿನ ಬನಸ್ಕಾಂತದಲ್ಲಿ ಫೆಬ್ರವರಿ 14 ರಂದು ಬೆಳಿಗ್ಗೆ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ ಐಸ್‌ ಫಿಗರ್ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ನ ಗ್ಯಾಬ್ರಿಯೆಲಾ ಪಾಪ್‌ಡಕಿನ್ಸ್‌ ಅವರ ಮೇಲುಡುಪಿನ ಒಂದು ಭಾಗ ಕಳಚಿತು. ಇದರಿಂದಾಗಿ ಗ್ಯಾಬ್ರಿಯೆಲಾ ಮತ್ತು ಅವರ ಜೊತೆಗಾರ ಗಲೆಮ್ ಸಿಜೋರ್ ಜೋಡಿಯು ಚಿನ್ನದ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ. ಆರಂಭದಿಂದಲೂ ಉತ್ತಮ ಫ್ರದರ್ಶನ ನೀಡಿದ್ದ ಜೋಡಿ ಕೊನೆಯ ಹಂತದಲ್ಲಿ ಗ್ಯಾಬ್ರಿಯೆಲಾ ಎದೆಯ ಎಡಭಾಗದ ಪೋಷಾಕು ಕಳಚಿತು. ಇದು ಟಿವಿಯ ನೇರಪ್ರಸಾರದಲ್ಲಿಯೂ ಕಂಡುಬಂತು. ಇದರ ಅರಿವಿದ್ದರೂ ಗ್ಯಾಬ್ರಿಯೆಲಾ ಜೋಡಿಯು ಶಾಂತಚಿತ್ತದಿಂದಲೇ ಸ್ಪರ್ಧೆಯನ್ನೂ ಪೂರ್ತಿಗೊಳಿಸಿದರು.
2018ರಲ್ಲಿ ಅತಿ ವೇಗವಾಗಿ ಅಭಿವೃದ್ದಿಯಾಗುತ್ತಿರುವ ಭಾರತದ 10 ರಾಜ್ಯಗಳು

2018ರಲ್ಲಿ ಅತಿ ವೇಗವಾಗಿ ಅಭಿವೃದ್ದಿಯಾಗುತ್ತಿರುವ ಭಾರತದ 10 ರಾಜ್ಯಗಳು

  • ಭಾರತವು ನಿಸಂಶಯವಾಗಿ ಏಷಿಯಾದಲ್ಲೇ ಅತಿಹೆಚ್ಚು ಜಿಡಿಪಿ ಮೌಲ್ಯ ಹೊಂದಿರುವ ದೇಶವಾಗಿದೆ.
  • ಕಳೆದ ಹಲವು ವರ್ಷಗಳಲ್ಲಿ ಭಾರತವು ಅತಿ ಹೆಚ್ಚು ರಾಜ್ಯವಾರು ಜಿಡಿಪಿ ಸಾಧಿಸಿದೆ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳು ಹಾಗೂ ದೇಶಾದ್ಯಂತ ಹೆಚ್ಚುತ್ತಿರುವ ಜಾಗತೀಕರಣದಿಂದಾಗಿ ಅದ್ಭುತ ರೀತಿಯಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತಿದೆ. ಆದ್ದರಿಂದ ಪ್ರಸ್ತುತ ನಾವು ಉತ್ತಮವಾಗಿ ಅಭಿವೃದ್ದಿ ಹೊಂದುವ ಭಾರತ ನಿರ್ಮಿಸುವ ನಿಟ್ಟಿನಲ್ಲಿ ತಮ್ಮ ಕಾರ್ಯಯೋಜನೆಗಳಿಂದ ಶ್ರಮಿಸುತ್ತಿರುವ ಹಾಗು ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಭಾರತದ ಅಗ್ರ 10 ರಾಜ್ಯಗಳ ಪಟ್ಟಿ ಮಾಡಿದ್ದೇವೆ.