Short News

ಒಡಿಶಾ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

ಒಡಿಶಾ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಕರ್ನಾಟಕ

ಇಂದು ನಗರದ ಹೊರ ವಲಯದ ಆಲೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ಕರ್ನಾಟಕ ತಂಡವು ಭಾರಿ ಮೊತ್ತ ಪೇರಿಸಿದೆ. ಎರಡು ಶತಕ ಮತ್ತು ಒಂದು ಅರ್ಧ ಶತಕ ದಾಖಲಿಸಿರುವ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಒಡಿಸ್ಸಾಗೆ ಗೆಲ್ಲಲು 354 ರನ್‌ಗಳ ಗುರಿ ನೀಡಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಒಡಿಶಾ ತಂಡ ತನ್ನ ನಿರ್ಣಯಕ್ಕೆ ಹಣೆ ಚಚ್ಚಿಕೊಳ್ಳುವಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಬಾಲ್‌ಗಳನ್ನು ಬೌಂಡರಿಗೆ ಚಚ್ಚಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕರುಣ್ ನಾಯರ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಶತಕ ಗಳಿಸಿದರು.
ಶಿಯೋಮಿ ಬಜೆಟ್ ಫೋನ್‌ಗಳ ಕಥೆ ಮುಗಿತು: ಬಂದಿದೆ 5000mAh ಬ್ಯಾಟರಿಯ ಮೊಟೊ E5 ಸ್ಮಾರ್ಟ್‌ಫೋನ್‌..!

ಶಿಯೋಮಿ ಬಜೆಟ್ ಫೋನ್‌ಗಳ ಕಥೆ ಮುಗಿತು: ಬಂದಿದೆ 5000mAh ಬ್ಯಾಟರಿಯ ಮೊಟೊ E5 ಸ್ಮಾರ್ಟ್‌ಫೋನ್‌..!

ಮೊಟೊ E5 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಮೊಟೊರೊಲ ಬ್ರೆಜಿಲ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮೊಟೊ ಈ ವರ್ಷದಿಂದ ಹೊಸ ಸಂಪ್ರದಾಯವನ್ನು ಅನುಸರಿಸುತ್ತಿದ್ದು ಒಂದು ಸರಣಿಯಲ್ಲಿಯೇ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೊಟೊ E5, ಮೊಟೊ E5 ಪ್ಲಸ್‌ ಮತ್ತು ಮೊಟೊ E5 ಪ್ಲೇ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ.  ಮೊಟೊ E5 ಬೆಲೆ ಸುಮಾರು ರೂ.12,000 ಆಗಲಿದ್ದು, ಮೊಟೊ E5 ಪ್ಲಸ್‌ ಬೆಲೆ ಸ್ಮಾರ್ಟ್‌ಫೋನ್‌ ಬೆಲೆ ರೂ.13,700 ಮತ್ತು ಮೊಟೊ E5 ಪ್ಲೇ ಬೆಲೆಯನ್ನು ತಿಳಿಸಿಲ್ಲ.
ಐಫೋನ್ ಬೇಕಾಗಿಲ್ಲ..? ಆಪಲ್‌ ವಾಚ್‌ಗೆ ಸಿಮ್ ಹಾಕಿ, ಫೋನ್ ಮಾಡಿ..!

ಐಫೋನ್ ಬೇಕಾಗಿಲ್ಲ..? ಆಪಲ್‌ ವಾಚ್‌ಗೆ ಸಿಮ್ ಹಾಕಿ, ಫೋನ್ ಮಾಡಿ..!

ಆಪಲ್ ಇದೇ ಮೊದಲ ಬಾರಿಗೆ ತನ್ನ ಸ್ಮಾರ್ಟ್‌ ಆಪಲ್ ವಾಚ್‌ನಲ್ಲಿ LET ಸೇವೆಯನ್ನು ನೀಡಲಿದ್ದು, ಅಂದರೆ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ. ಈ ಮೂಲಕ ಸ್ಮಾರ್ಟ್ ವಾಚಿನಲ್ಲಿಯೇ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಆಪಲ್ ವಾಚ್ ಸರಣಿ 3 ಅನ್ನು ಭಾರತೀಯ ಮಾರುಕಟ್ಟೆಗೆ ಮೇ.4ರಂದು ಲಾಂಚ್ ಮಾಡಲಿದೆ. ಮೇ.11ರಿಂದ ಮಾರಾಟವಾಗಲಿದೆ. ಇದನ್ನು ಕೊಳ್ಳುವವರಿಗೆ ಜಿಯೋ ಮತ್ತು ಏರ್‌ಟೆಲ್‌ ಆಫರ್ ಘೋಷಣೆ ಮಾಡಿದೆ. ಸೆಲ್ಯೂಲರ್ ಕನೆಷನ್ ಇಲ್ಲದ 38mm ಆಪಲ್ ವಾಚ್ ಸರಣಿ 3 ರೂ.32,380ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ GPS ಹೊಂದಿರುವ 42mm ಆಪಲ್ ವಾಚ್ ಸರಣಿ 3 ರೂ.32,380ಕ್ಕೆ ದೊರೆಯಲಿದೆ ಎನ್ನಲಾಗಿದೆ.
ಚಿನ್ನಸ್ವಾಮಿ  ಸ್ಟೇಡಿಯಂ ನಲ್ಲಿಂದು ಹೈವೋಲ್ಟೇಜ್ ಪಂದ್ಯ: 2 ವರ್ಷಗಳ ಬಳಿಕ ಕೊಹ್ಲಿ VS ಧೋನಿ ಫೈಟ್

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿಂದು ಹೈವೋಲ್ಟೇಜ್ ಪಂದ್ಯ: 2 ವರ್ಷಗಳ ಬಳಿಕ ಕೊಹ್ಲಿ VS ಧೋನಿ ಫೈಟ್

ಟಿ -20 ಟೂರ್ನಿಯ 11ನೇ ಆವೃತ್ತಿಯಲ್ಲಿ ಇಂದು ಹೈವೊಲ್ಟೇಜ್ ಪಂದ್ಯವೊಂದು ನಡೆಯಲಿದೆ. ನಿಷೇಧದ ಬಳಿಕ ಧೋನಿ ನಾಯಕತ್ವದ ಚೆನ್ನೈ ಮರಳಿದ್ದು ಇಂದು ಕೊಹ್ಲಿ ನಾಯಕತ್ವದ ಬೆಂಗಳೂರು ತಂಡದ ವಿರುದ್ಧ ಸೆಣೆಸಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ 8ಗಂಟೆಗೆ ಪಂದ್ಯ ನಡೆಯಲಿದ್ದು, ಉಭಯ ತಂಡಗಳಿಂದ ರೋಚಕ ಹೋರಾಟ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಕೊಹ್ಲಿ ಬಳಗವೂ ಐದು ಪಂದ್ಯ ಆಡಿದ್ದು, ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ.