Short News

ಹಿಮಾ ಐತಿಹಾಸಿಕ  ಸಾಧನೆ, ಪ್ರಧಾನಿ ಮೋದಿ ಶ್ಲಾಘನೆ

ಹಿಮಾ ಐತಿಹಾಸಿಕ ಸಾಧನೆ, ಪ್ರಧಾನಿ ಮೋದಿ ಶ್ಲಾಘನೆ

ಫಿನ್ಲೆಂಡ್‌ನ ಟ್ಯಾಂಪರ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಉದಯೋನ್ಮುಖ ಓಟಗಾರ್ತಿ ಹಿಮಾ ದಾಸ್‌ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದು, ಇವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಐತಿಹಾಸಿಕ ಸ್ವರ್ಣ ಪದಕ ಗೆದ್ದ ಹಿಮಾ ದಾಸ್ ಅವರ ಬಗ್ಗೆ ಭಾರತಕ್ಕೆ ಹೆಮ್ಮೆಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ. ಇವರ ಜೊತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಂಧಿ ಕೂಡ ಅಭಿನಂದಿಸಿದ್ದಾರೆ. ಐಎಎಎಫ್‌ 20ರ ವಯೋಮಿತಿಯ ಮಹಿಳೆಯರ 400ಮೀ. ಓಟದಲ್ಲಿ 18ರ ಹರೆಯದ ಅಸ್ಸಾಂ ಓಟಗಾರ್ತಿ ಹಿಮಾ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.
ಕ್ರಿಮಿನಲ್‌ಗಳು ಹೀಗೂ ಮೋಸ ಮಾಡಲು ಯತ್ನಿಸುತ್ತಾರೆ ಅಂತ ಇವತ್ತೆ ಗೊತ್ತಾಗಿದ್ದು!!

ಕ್ರಿಮಿನಲ್‌ಗಳು ಹೀಗೂ ಮೋಸ ಮಾಡಲು ಯತ್ನಿಸುತ್ತಾರೆ ಅಂತ ಇವತ್ತೆ ಗೊತ್ತಾಗಿದ್ದು!!

ಆನ್‌ಲೈನ್ ಮೂಲಕ ಜನರನ್ನು ಮೋಸಗೊಳಿಸಲು ಸೈಬರ್‌ಕ್ರಿಮಿನಲ್‌ಗಳು ಯಾವ ಯಾವ ದಾರಿಗಳನ್ನು ಹುಡುಕುತ್ತಾರೆ ಎಂಬುದನ್ನು ಕೆಲವೊಮ್ಮೆ ಹೂಹಿಸಲು ಕಷ್ಟವಾಗಬಹುದು. ಅಂತಹದೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಸೈಬರ್‌ ಕ್ರಿಮಿನಲ್‌ಗಳೂ ಹೀಗೂ ಮೋಸ ಮಾಡಬಹುದಾ ಎಂದು ಆಶ್ಚರ್ಯ ಮೂಡಿಸುತ್ತದೆ.!

ನೀವು ಜಾಕ್‌ಪಾಟ್ ಗೆದ್ದಿರುವುದಾಗಿ , ಹಣ ಡಬಲ್ ನೀಡುವುದಾಗಿ ಹೇಳಿ ವಂಚಿಸುವುದು ಸಾಮಾನ್ಯವಾಗಿರುವ ನಡುವೆಯೇ, ಹೊಸ ವಿಧಾನದ ಮೂಲಕ ಮಹಿಳೆಯೊಬ್ಬರನ್ನು ವಂಚಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ ಘಟನೆ ಕುರಿತು ಸ್ಕೂಪ್‌ವೂಪ್ ವೆಬ್‌ಸೈಟ್ ವರದಿ ಒಂದು ವರದಿ ಮಾಡಿದೆ.

ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಇಹಲೋಕ ತ್ಯಜಿಸಿದ ಶಿರೂರು ಲಕ್ಷ್ಮೀವರತೀರ್ಥ ಸ್ವಾಮೀಜಿ

ಉಡುಪಿಯ ಅಷ್ಠಮಠಾಧೀಶರಲ್ಲೊಬ್ಬರಾದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು(55) ಇಂದು ಇಹಲೋಕ ತ್ಯಜಿಸಿದರು. ಬುಧವಾರ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು.ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶೀರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ  ತರಬೇತಿ!

ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ ತರಬೇತಿ!

ಜೈಶ್​-ಎ-ಮೊಹಮ್ಮದ್ ಉಗ್ರಸಂಘಟನೆ ಸಮುದ್ರಕ್ಕಿಳಿದು ಭಾರತದ ನೌಕಾದಳದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಆಘಾತಕಾರಿ ಸ್ಫೋಟಕ ಮಾಹಿತಿ ಹರಿದಾಡುತ್ತಿದೆ. ಈ ಸಂಬಂಧ ಭಾರತದ ಇಂಟೆಲಿಜೆನ್ಸ್​ ವಿಂಗ್​ ನೌಕಾದಳಕ್ಕೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದೆ. ಇಂಟೆಲಿಜೆನ್ಸ್​ಗೆ ದೊರೆತಿರುವ ಮಾಹಿತಿಯಂತೆ ಜೈಶ್ ಉಗ್ರರು ಪಾಕಿಸ್ತಾನದ ಬಹವಲ್ಪುರದಲ್ಲಿ ಸಾಗದಾಳಕ್ಕಿಳಿಯುವ ತಂತ್ರಗಾರಿಕೆ ಕುರಿತಂತೆ ತರಬೇತಿ ಪಡೆಯುತ್ತಿದೆ. ಎಂದು ತಿಳಿದುಬಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more