Short News

ಮತ್ತೆ ಕಣ್ ಹೊಡೆದ ಪ್ರಿಯಾ ಪ್ರಕಾಶ್ ವಾರಿಯರ್

ಮತ್ತೆ ಕಣ್ ಹೊಡೆದ ಪ್ರಿಯಾ ಪ್ರಕಾಶ್ ವಾರಿಯರ್

ಒಂದೇ ಒಂದು ಬಾರಿ ಕಣ್ಣು ಹೊಡೆದು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಕೇರಳದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಐಪಿಎಲ್ ಅಂಗಳಕ್ಕೆ ಇಳಿದಿದ್ದಾರೆ. ಐಪಿಎಲ್‌ ಋತುವಿಗಾಗಿ ಮಾಡಿದ ಜಾಹೀರಾತೊಂದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದಾರೆ. ಒರು ಆಡರ್ ಲವ್ ಸ್ಟೋರಿ ಸಿನಿಮಾದ ಹಾಡಿನ ಒಂದು ಸಣ್ಣ ತುಣುಕುನಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಇದು ಮೊದಲ ಜಾಹೀರಾತಾಗಿದ್ದು. 25 ಸೆಕೆಂಡ್‌ನ ಮಂಚ್ ಜಾಹಿರಾತಿನಲ್ಲಿ ಪ್ರಿಯಾ ಪ್ರಕಾಶ್‌ ಗಮನ ಸೆಳೆಯುತ್ತಾರೆ.
ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.63 / ಲೀಟರ್, ಡೀಸೆಲ್: 65.93 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.32 / ಲೀಟರ್ , ಡೀಸೆಲ್: 68.63 / ಲೀಟರ್. ಮುಂಬೈ: ಪೆಟ್ರೋಲ್: 82.48/ ಲೀಟರ್ , ಡೀಸೆಲ್: 70.20 / ಲೀಟರ್. ಚೆನ್ನೈ: ಪೆಟ್ರೋಲ್: 77.43 / ಲೀಟರ್ , ಡೀಸೆಲ್: 69.56 / ಲೀಟರ್. ಬೆಂಗಳೂರು: ಪೆಟ್ರೋಲ್: 75.82 / ಲೀಟರ್, ಡೀಸೆಲ್: 67.05/ ಲೀಟರ್. ಹೈದರಾಬಾದ್: ಪೆಟ್ರೋಲ್: 79.04/ ಲೀಟರ್, ಡೀಸೆಲ್: 71.63 / ಲೀಟರ್.
ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ಮೇಷ:ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲಾರರು. ವೃಷಭ:ಪತ್ನಿ ಕಡೆಯಿಂದ ತೊಂದರೆ ಉಂಟಾಗಲಿದೆ. ಮಿಥುನ:ಸ್ನೇಹಿತರು ನಿಮ್ಮನ್ನು ಅವಮಾನ ಮಾಡಬಹುದು. ಕಟಕ:ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಸಿಂಹ:ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ನಷ್ಟವಾಗುವ ಸಾಧ್ಯತೆಗಳಿವೆ. ತುಲಾ:ಅತ್ತಿಗೆ-ನಾದಿನಿ ಯರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ವೃಶ್ಚಿಕ:ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಧನುಸ್ಸು:ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು. ಮಕರ:ಸಹೋದರರಿಂದ ತೊಂದರೆಯಾಗಲಿದೆ. ಕುಂಭ:ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೀನ:ಪ್ರೇಮಿಗಳಿಗೆ ತೊಂದರೆಯಾಗಲಿದೆ.
ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ಕರ್ನಾಟಕದ ಬಿಜೆಪಿ ಘಟಕದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂವಾದ ನಡೆಸಲಿದ್ದಾರೆ. ತಮ್ಮ ವಿಶಿಷ್ಟ ನಮೋ ಆ್ಯಪ್ ಮೂಲಕ ಅವರು ಸಂವಾದ ನಡೆಸಲಿದ್ದಾರೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರ ಜೊತೆಗೆ ಅವರು ಸಂವಾದ ನಡೆಸಲಿದ್ದಾರೆ. ಸಂವಾದದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರಿಗೆ ಅವರು ಸಲಹೆ, ಮಾರ್ಗದರ್ಶನವನ್ನೂ ನೀಡಲಿದ್ದಾರೆ.