Short News

ಶತಕವನ್ನು ಪತ್ನಿಗೆ ವ್ಯಾಂಟೈನ್ಸ್ ಡೇ ಉಡುಗೊರೆಯಾಗಿ ಕೊಟ್ಟ ರೋಹಿತ್ ಶರ್ಮಾ

ಶತಕವನ್ನು ಪತ್ನಿಗೆ ವ್ಯಾಂಟೈನ್ಸ್ ಡೇ ಉಡುಗೊರೆಯಾಗಿ ಕೊಟ್ಟ ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಏಕದಿನ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಐದನೇ ಏಕದಿನದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು. ಈ ಸಾಧನೆಗಾಗಿ ಅವರು ನಿನ್ನೆಯ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಹೀಗೆ ತಾವು ಶ್ರೇಷ್ಠ ಪ್ರದರ್ಶನ ನಿಡಿ ಗಳಿಸಿದ ಪ್ರಶಸ್ತಿಯನ್ನು ರೋಹಿತ್ ಶರ್ಮಾ ತಮ್ಮ ಪತ್ನಿಗೆ ವ್ಯಾಲೆಂಟೈನ್ಸ್ ದಿನದ ಉಡುಗೊರೆಯಾಗಿ ನೀಡಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಡಿಸಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದ ಪ್ರಕಾರ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರಂದು ಗಡುವು ನೀಡಲಾಗಿದ್ದು, ಇದನ್ನು ಸಂವಿಧಾನಾತ್ಮಕ ಪೀಠದ ತೀರ್ಪು ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಮೊದಲಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ಗಡುವು ನೀಡಲಾಗಿತ್ತು. ಕಲ್ಯಾಣ ಯೋಜನೆಗಳಿಗೆ ಜೂನ್ 30 ರೊಳಗೆ ಆಧಾರ್ ಲಿಂಕ್ ಮಾಡಬೇಕಿದೆ.
ಮಾಧ್ಯಮಗಳ ಎದುರು ಹೇಳಿಕೆ ನೀಡುವುದಕ್ಕೂ ಮುನ್ನ ಸ್ಪಷ್ಟತೆ ಇರಲಿ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

ಮಾಧ್ಯಮಗಳ ಎದುರು ಹೇಳಿಕೆ ನೀಡುವುದಕ್ಕೂ ಮುನ್ನ ಸ್ಪಷ್ಟತೆ ಇರಲಿ ಖಡಕ್ ವಾರ್ನಿಂಗ್ ಕೊಟ್ಟ ಮೋದಿ

ಬಿಜೆಪಿಯ ಕೆಲವು ಸಂಸದರು, ಸಚಿವರು, ಶಾಸಕರು ನೀಡುತ್ತಿರುವ ಹೇಳಿಕೆಗಳು ಬಿಜೆಪಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಪ್ ಮೂಲಕ ಎಚ್ಚರಿಕೆ ನೀಡಿ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದಿದ್ದಾರೆ. ನಾವು ತಪ್ಪು ಮಾಡಿ ಮಾಧ್ಯಮಗಳಿಗೆ ಚರ್ಚೆಯ ಸರಕನ್ನು ಒದಗಿಸುತ್ತೇವೆ, ಕ್ಯಾಮರಾಗಳನ್ನು ನೋಡುತ್ತಿದ್ದಂತೆಯೇ ನಾವು ದೊಡ್ಡ ಸಮಾಜ ವಿಜ್ಞಾನಿಗಳು, ತಜ್ಞರು ಎಂಬಂತೆ ಹೇಳಿಕೆ ನೀಡಲು ಪ್ರಾರಂಭಿಸುತ್ತೇವೆ. ಇದರಿಂದ ಆಗುವ ಪ್ರಮಾದವನ್ನು ಮಾಧ್ಯಮಗಳು ಬಳಸಿಕೊಳ್ಳುತ್ತವೆ, ಆದರೆ ಅದು ಮಾಧ್ಯಮಗಳ ತಪ್ಪೂ ಅಲ್ಲ, ಹೇಳಿಕೆ ನೀಡಬೇಕಾದರೆ ಸ್ಪಷ್ಟತೆ ಇರಲಿ ಎಂದಿದ್ದಾರೆ ಮೋದಿ.
2019ರ ಏಕದಿನ ವಿಶ್ವಕಪ್‌ ನಮ್ದೇ ಎಂದ ವೀರೂ...

2019ರ ಏಕದಿನ ವಿಶ್ವಕಪ್‌ ನಮ್ದೇ ಎಂದ ವೀರೂ...

ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ ಎಂದು ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 1983ರಲ್ಲಿ ಕಪಿಲ್ ದೇವ್ ಮುಂದಾಳತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಿತ್ತು. 26 ವರ್ಷಗಳ ಬಳಿಕ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡಿತ್ತು. ಸೆಹ್ವಾಗ್ ಕೂಡ ಭಾರತದ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. 2007ರಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆಲ್ಲುವುದರಲ್ಲಿ ವೀರೂ ಪಾತ್ರವಿತ್ತು.