Short News

ಗಾಯಗೊಂಡ ಹದ್ದನ್ನು ಉಪಚರಿಸಿದ ಸಚಿನ್‌ , ವಿಡಿಯೋ ವೈರಲ್

ಗಾಯಗೊಂಡ ಹದ್ದನ್ನು ಉಪಚರಿಸಿದ ಸಚಿನ್‌ , ವಿಡಿಯೋ ವೈರಲ್

ನಿವಾಸದ ಬಳಿ ಗಾಯಗೊಂಡು ಕುಳಿತಿದ್ದ ಹದ್ದನ್ನು ಉಪಚರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾನವೀಯತೆ ಮೆರೆದಿದ್ದಾರೆ. ಸಚಿನ್ ಹದ್ದನ್ನು ಉಪಚರಿಸಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈಯ ಬಾಂದ್ರಾದಲ್ಲಿನ ತಮ್ಮ ನಿವಾಸದ ಬಳಿ ಹದ್ದೊಂದು ಗಾಯಗೊಂಡು ಕುಳಿತಿರುವುದನ್ನು ಸಚಿನ್ ಗಮನಿಸಿದರು. ಕ್ರಿಕೆಟ್ ಗೆ ಹೊರತಾಗಿ ಇನ್ನೊಂದಿಷ್ಟು ಒಳ್ಳೆಯತನಗಳಿಗೂ ಗುರುತಿಸಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್ ಸ್ವತಃ ತಾವೇ ಮುಂದಾಗಿ ಗಾಯಗೊಂಡಿದ್ದ ಹದ್ದಿಗೆ ನೀರು, ಆಹಾರ ನೀಡಿ ಉಪಚರಿಸಿದರು.
ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಈಗಾಗಲೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಇನ್ನೂ ಎರಡು ಸಚಿವ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ಕೊಡಬೇಕೆಂಬ ಬೇಡಿಕೆಯಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಮೊದಲ ಹಂತದಲ್ಲಿ ನಾನು, ತುಕಾರಾಂ ಮತ್ತು ನಾಗೇಂದ್ರ ಹೆಸರು ಇತ್ತು. ಕೊನೆ ಗಳಿಗೆಯಲ್ಲಿ ಅವರಿಬ್ಬರ ಹೆಸರು ಕೈ ಬಿಡಲಾಯಿತು.
ಡಾ ರಾಜ್ ಯುವಜನಾಂಗಕ್ಕೆ ಸ್ಫೂರ್ತಿಯಾಗಬೇಕು : ದೊಡ್ಡಣ್ಣ

ಡಾ ರಾಜ್ ಯುವಜನಾಂಗಕ್ಕೆ ಸ್ಫೂರ್ತಿಯಾಗಬೇಕು : ದೊಡ್ಡಣ್ಣ

ಚಿತ್ರರಂಗದಲ್ಲಿ ಕಿರುಚಾಡಿದರೆ, ಕಾಲೆಳೆದರೆ ಏನು ಮಾಡುವುದಕ್ಕೆ ಆಗೋದಿಲ್ಲವೆಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯಪಟ್ಟಿದ್ದಾರೆ. 'ನವರಸ ನಟನ ಅಕಾಡಮಿ ಪ್ರೈ.ಲಿಮಿಟಿಡ್' ಸಂಸ್ಥೆಯಿಂದ ಮೊದಲ ಬ್ಯಾಚ್ ನಲ್ಲಿ ತರಬೇತಿ ಪಡೆದ 104 ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ದೊಡ್ಡಣ್ಣ ಡಾ ರಾಜ್ ಕುಮಾರ್ ಅವರನ್ನ ಸ್ಮರಿಸಿದರು. ಡಾ.ರಾಜ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದು ನೋಡುವುದೇ ಚೆಂದ. ಅವರ ಶ್ರದ್ದೆ, ವಿನಯ, ಶಿಸ್ತು ಇವೆಲ್ಲವನ್ನು ನಾವುಗಳು ಕಲಿತಿದ್ದೇವೆ. ಅವರಂತೆ ನೀವುಗಳು ಕೆಲವನ್ನು ಅಳವಡಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತನ್ನು ಹೇಳಿದರು.
262 ಅಂಕ ನಷ್ಟದೊಂದಿಗೆ ಕೊನೆಗೊಂಡ ಮುಂಬೈ ಸೆನ್ಸೆಕ್ಸ್

262 ಅಂಕ ನಷ್ಟದೊಂದಿಗೆ ಕೊನೆಗೊಂಡ ಮುಂಬೈ ಸೆನ್ಸೆಕ್ಸ್

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 262 ಅಂಕ ನಷ್ಟದೊಂದಿಗೆ ಎರಡು ವಾರಗಳ ಕನಿಷ್ಠವಾಗಿ 35,286.74 ಅಂಕ ಮಟ್ಟದಲ್ಲಿ ಕೊನೆಗೊಳಿಸಿತು. ಹಾಗೇ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 89.40 ಅಂಕ ನಷ್ಟದೊಂದಿಗೆ ದಿನದ ವಹಿವಾಟನ್ನು 10,710.45 ಅಂಕ ಮಟ್ಟದಲ್ಲಿ ಕೊನೆಗೊಳಿಸಿತು. ಒಟ್ಟು 2,776 ಕಂಪೆನಿಗಳ ಶೇರುಗಳಲ್ಲಿ 703 ಶೇರುಗಳು ಮಾತ್ರ ಮುನ್ನಡೆ ಸಾಧಿಸಿದ್ದು, 1,923 ಶೇರುಗಳಿಗೆ ಹಿನ್ನಡೆಯಾಯಿತು. 150 ಶೇರುಗಳು ತಟಸ್ಥವಾಗಿದ್ದವು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more