Short News

ಪೆಂಟಾಲ ಹರಿಕೃಷ್ಣ ಗೆ ಚೆಕ್ ಮೆಟ್ ಆದ ಸರ್ಬಿಯಾದ ಆಟಗಾರ್ತಿ, ಮಾರ್ಚ್ ನಲ್ಲಿ ವಿವಾಹ

ಪೆಂಟಾಲ ಹರಿಕೃಷ್ಣ ಗೆ ಚೆಕ್ ಮೆಟ್ ಆದ ಸರ್ಬಿಯಾದ ಆಟಗಾರ್ತಿ, ಮಾರ್ಚ್ ನಲ್ಲಿ ವಿವಾಹ

ಭಾರತದ ಅಗ್ರ ಶ್ರೇಯಾಂಕಿತ ಚೆಸ್‌ ಗ್ರ್ಯಾಂಡ್‌ ಮಾಸ್ಟರ್ ಪೆಂಟಾಲ ಹರಿಕೃಷ್ಣ ಸರ್ಬಿಯಾದ ಚೆಸ್‌ ಆಟಗಾರ್ತಿ ನಡ್ಜಾ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮಾರ್ಚ್‌ 3ರಂದು ವಿವಾಹ ನಡೆಯಲಿದ್ದು, ಈ ಬಗ್ಗೆ ಹರಿಕೃಷ್ಣ ಅವರ ತಂದೆ ನಾಗೇಶ್ವರರಾವ್‌ ಮಾಹಿತಿ ನೀಡಿದ್ದಾರೆ. ಕಿರಿಯರ ಪಂದ್ಯಾವಳಿಗಳಲ್ಲಿ ಆಡುತ್ತಿದ್ದಾಗಿನಿಂದಲೂ ಹರಿಕೃಷ್ಣ ಮತ್ತು ನಡ್ಜಾ ಆತ್ಮೀಯರಾಗಿದ್ದರು. ಮೊದಲಿಗೆ ಸ್ನೇಹಿತರಾಗಿದ್ದ ಇಬ್ಬರಿಗೂ ನಂತರ ಪ್ರೇಮಿಗಳಾಗಿ ಈಗ ಸಪ್ತಪದಿ ತುಳಿಯಲಿದ್ದಾರೆ.
ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ವಾಟರ್ ಮಾರ್ಕ್ ಹಾಕಿ ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಬಹುದಾದರೂ ವಾಟರ್‌ ಮಾರ್ಕ್ ಅನ್ನು ಸಹ ತೆಗೆಯುವ ತಂತ್ರಜ್ಞಾನಗಳು ಇವೆ. ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಆ ವಿಷಯವನ್ನು ಆ ತಕ್ಷಣವೇ ನಮ್ಮ ಗಮನಕ್ಕೆ ತಂದು, ಪರಿಹಾರವನ್ನು ಸಹ ಒದಗಿಸುವ ವೆಬ್‌ಸೈಟ್ ಒಂದಿದೆ. ಅದುವೇ www.pixsy.com ವೆಬ್‍ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಮೇಲೆ ಲಾಗಿನ್ ಆಗಿ. ನಮ್ಮ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ತಿಳಿಯಲು ಆ ಫೋಟೊವನ್ನು ಪಿಕ್ಸಿಯಲ್ಲಿ ಅಪ್‍ಲೋಡ್ ಮಾಡಿ. ಆಗ ಫೋಟೊ ಬೇರೆ ಕಡೆ ಬಳಕೆಯಾಗಿದೆಯೇ ಎಂಬುದು ತಿಳಿಯಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3: ಮಾರಾಟದಲ್ಲಿ ಜಿಯೋ-ಏರ್ಟೆಲ್ ಸ್ಪರ್ಧೆ!

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3: ಮಾರಾಟದಲ್ಲಿ ಜಿಯೋ-ಏರ್ಟೆಲ್ ಸ್ಪರ್ಧೆ!

ಜಿಯೋ ಮತ್ತು ಏರ್ ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವನ್ನು ನಡೆಸುತ್ತಿರುವ ಮಾದರಿಯಲ್ಲಿಯೇ, ಆಪಲ್ ವಾಚ್ ಸಿರೀಸ್ 3 (GPS + ಸೆಲ್ಯೂಲರ್) ಯನ್ನು ಬಿಡುಗಡೆ ಮಾಡಲು ಸಹ ಸ್ಪರ್ಧೇಯನ್ನು ನಡೆಸುತ್ತಿವೆ. ಮೇ 4ನೇ ತಾರೀಖಿನಿಂದ ಮಾರುಕಟ್ಟೆಯಲ್ಲಿ ಇದು ಲಭ್ಯವಿರಲಿದ್ದು, ಜಿಯೋ .ಕಾಮ್, ರಿಲಯನ್ಸ್ ಡಿಜಿಟಲ್, ಜಿಯೋ ಸ್ಟೋರ್ ಮತ್ತು ಏರ್ಟೆಲ್ ವೆಬ್ ಸೈಟ್ ಗಳಲ್ಲಿ ಮಾರಾಟವಾಗಲಿದೆ. ಇದಲ್ಲದೇ ಮೇ 11 ರಿಂದ ಸಾಮಾನ್ಯ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್ ವಾಚ್ ಲಭ್ಯವಿರಲಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3 ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.
ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL, ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಿ

ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL, ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಿ

ವಿಶ್ವದ 3ನೇ ಅತೀ ದೊಡ್ಡ ಟಿವಿ ಬ್ರಾಂಡ್ ಆಗಿರುವ TCLಕಂಪನಿಯೂ ಭಾರತದಲ್ಲಿ ಹಲವು ಟಿವಿಗಳನ್ನು ಮಾರಾಟ ಮಾಡುತ್ತಿದ್ದು,ಸದ್ಯ ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಸ್ಮಾರ್ಟ್TVಯನ್ನು ಪರಿಚಯಿಸಿದೆ. TCLಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ iFFALCONಸರಣಿಯಲ್ಲಿ ಮೂರು ಸ್ಮಾರ್ಟ್‌TVಗಳನ್ನು ಲಾಂಚ್ ಮಾಡಿದೆ. iFFALCON,iFFALCON F2 ಮತ್ತು iFFALCON 55K2A ಸ್ಮಾರ್ಟ್‌TVಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿವೆ, ಇದರಲ್ಲಿ HD ರೆಡಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಮೋಷನ್ ಸೆನ್ಸಾರ್ ಸೇರಿದಂತೆ ವಿವಿಧ ಆಯ್ಕೆಗಳನ್ನು ನೀಡಲಾಗಿದೆ. ಬಿಲ್ಟ್ ಇನ್ WiFi ಸಹ ಇದರಲ್ಲಿದೆ.