ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮರಳಿದ ಶೇನ್ ವಾರ್ನ್!
ಕ್ರೀಡೆ
- 2 month, 13 days ago
ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ಮತ್ತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮರಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಪ್ ಎತ್ತಿ ಹಿಡಿದಿದ್ದರು. ಈಗ ತಂಡದ ಮಾರ್ಗದರ್ಶಿಯಾಗಿ ಮತ್ತೊಮ್ಮೆ ತಂಡಕ್ಕೆ ಬಲ ತುಂಬಲಿದ್ದಾರೆ. 2008ರಲ್ಲಿ ಕ್ಯಾಪ್ಟನ್ ಕಮ್ ಕೋಚ್ ಆಗಿ ಎಲ್ಲರೂ ಅಚ್ಚರಿ ಪಡುವಂತೆ ತಂಡವನ್ನು ಮುನ್ನಡೆಸಿ, ಕಪ್ ಗೆಲ್ಲುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ರಾಜಸ್ಥಾನ್ ತಂಡ ಸೇರುವುದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.