Short News

25 ವರ್ಷಗಳ ಬಳಿಕ ಹರಿಣಗಳ ನಾಡಲ್ಲಿ ಏಕದಿನ ಸರಣಿ ಗೆದ್ದ ಕೊಹ್ಲಿ ಪಡೆಯ ಸಾಧನೆಗಳು

25 ವರ್ಷಗಳ ಬಳಿಕ ಹರಿಣಗಳ ನಾಡಲ್ಲಿ ಏಕದಿನ ಸರಣಿ ಗೆದ್ದ ಕೊಹ್ಲಿ ಪಡೆಯ ಸಾಧನೆಗಳು

ದಕ್ಷಿಣಆಫ್ರಿಕಾದ ಪೋರ್ಟ್ ಎಲಿಜಬೆತ್ ಮೈದಾನದಲ್ಲಿ ಇಲ್ಲಿಯವರೆಗೂ ಟೀಂ ಇಂಡಿಯಾ ಒಂದೂ ಪಂದ್ಯವನ್ನೂ ಗೆದ್ದಿಲ್ಲ. ಈ ಹಿಂದೆ ಟೀಂ ಇಂಡಿಯಾ ಈ ಕ್ರೀಡಾಂಗಣದಲ್ಲಿ ಒಟ್ಟು 4ಪಂದ್ಯಗಳನ್ನು ಆಡಿತ್ತು. ಈ ಪಂದ್ಯಗಳಿಗೆ ಮೊಹಮ್ಮದ್ ಅಜರುದ್ದೀನ್,ತೆಂಡೂಲ್ಕರ್,ಸೆಹ್ವಾಗ್,ಧೋನಿ ನಾಯಕರಾಗಿದ್ದರು. ಆದರೆ ಐದನೇ ಪಂದ್ಯದಲ್ಲಿ ಕೊಹ್ಲಿ ಪಡೆ ಭರ್ಜರಿ 73ರನ್ ಗಳಿಂದ ಗೆದ್ದು ಬೀಗಿದೆ. ಇನ್ನು ತಂಡ ಒಮ್ಮೆ ಕೂಡ 200ರನ್ ಗಡಿ ದಾಟಿಲ್ಲ. 147ರನ್ ಬಾರಿಸಿದ್ದೆ ಗರಿಷ್ಠ ರನ್ ಆಗಿತ್ತು. ಕೊಹ್ಲಿ ಪಡೆ 274ರನ್ ಬಾರಿಸಿ ಗೆದ್ದಿದೆ. ಮಾತ್ರವಲ್ಲ 25ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹರಿಣಗಳ ನಾಡಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ  ಬೆಡಗಿ ಪ್ರಿಯಾ ?

ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ ಬೆಡಗಿ ಪ್ರಿಯಾ ?

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಆದರೆ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ. ಇದನ್ನ ಖಂಡಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌.ಐ.ರ್ ರದ್ದುಪಡಿಸಬೇಕು ಮತ್ತು ತೆಲಂಗಾಣ, ಮಹಾರಾಷ್ಟ್ರ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗದಂತೆ ತಡೆ ನೀಡಬೇಕು ಎಂದು ಪ್ರಿಯಾ ಪ್ರಕಾಶ್ ವಾರಿಯರ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರಿಯಾ ಕಣ್ಸನ್ನೆ ಬಗ್ಗೆನೇ ಮಾತನಾಡ್ತಿದ್ದಾರೆ.

ಹೀಗೆ, ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನರ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ.

ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ತಮ್ಮ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ‍್ರಕರಣಕ್ಕೆ ಸಂಬಂಧಿಸಿ ಶಾಸಕ ಎನ್.ಎ.ಹ್ಯಾರಿಸ್ ಸದನದಲ್ಲಿ ಕ್ಷಮೆ ಕೋರಿದರು ಸದನದ ಸದಸ್ಯನಾದರೂ, ಮೊಹಮ್ಮದ್ ನಲಪಾಡ್‌ ತಂದೆಯೂ ಹೌದು, ಆತ ಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕಾನೂನು ಎಲ್ಲರಿಗೂ ಸಮಾನ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಮಗನ ರಕ್ಷಣೆಗಾಗಿ ನಾನು ಸರ್ಕಾರಕ್ಕೆ ಒತ್ತಡ ಹೇರಿಲ್ಲ. ಆತ ನನಗೆ ಸಿಕ್ಕಿದ್ದರೆ ನಾನೇ ಪೊಲೀಸ್ ಠಾಣೆಗೆ ಒಪ್ಪಿಸುತ್ತಿದ್ದೆ. ಸದನ, ಸರ್ಕಾರಕ್ಕೆ ಅಪಮಾನವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಎಲ್ಲರ ಮುಂದೆ ಹೇಳಿದ್ದಾರೆ.