Short News

ಮಹಿಳಾ ಕ್ರಿಕೆಟ್: ದ್ವಿಶತಕದ ದಾಖಲೆ ನಿರ್ಮಿಸಿದ ಅಮೆಲಿಯಾ ಕೆರ್

ಮಹಿಳಾ ಕ್ರಿಕೆಟ್: ದ್ವಿಶತಕದ ದಾಖಲೆ ನಿರ್ಮಿಸಿದ ಅಮೆಲಿಯಾ ಕೆರ್

ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ನ್ಯೂಜಿಲೆಂಡ್‌ನ ವನಿತೆಯರ ತಂಡ ಮತ್ತೊಂದು ಸಾಧನೆ ಮಾಡಿದೆ. ಐರ್ಲೆಂಡ್‌ ವಿರುದ್ಧ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ್ತಿ ಅಮೆಲಿಯಾ ಕೆರ್, ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜತೆಗೆ ಸತತ ಮೂರು ಏಕದಿನ ಪಂದ್ಯಗಳಲ್ಲಿ 400 ರನ್‌ಗೂ ಅಧಿಕ ರನ್ ಬಾರಿಸಿದ ಏಕೈಕ ತಂಡವೆಂಬ ಹೆಗ್ಗಳಿಕೆಗೆ ನ್ಯೂಜಿಲೆಂಡ್ ವನಿತೆಯ ತಂಡ ಭಾಜನವಾಗಿದೆ. ಮಹಿಳಾ ಏಕದಿನ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಹೊಸ ದಾಖಲೆಯನ್ನು ಅಮೆಲಿಯಾ ಕೆರ್ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ’ಡಾನ್ಸಿಂಗ್ ಆಂಟಿ’ ಫೇಮಸ್

ಸಾಮಾಜಿಕ ಜಾಲತಾಣದಲ್ಲಿ ’ಡಾನ್ಸಿಂಗ್ ಆಂಟಿ’ ಫೇಮಸ್

ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ 'ಡಾನ್ಸಿಂಗ್ ಆಂಟಿ'ಯೊಬ್ಬರು ಸಖತ್ ಸ್ಟೆಪ್ಸ್ ಹಾಕಿ ಫೇಮಸ್ ಆಗಿದ್ದಾರೆ. ಹಾಡೊಂದಕ್ಕೆ ಕುಣಿದಿರುವ ಅವರ ವೀಡಿಯೋ ಸಹ ಈಗ ವೈರಲ್ ಆಗಿದೆ. ಭಾರತದ ಪಾಪ್ ಗಾಯಕ ಯೋ ಯೋ ಹನಿ ಸಿಂಗ್ ಅವರ 'ಪಾರ್ಟಿ ಆಲ್‍ ನೈಟ್' ಹಾಡಿಗೆ ಹೆಜ್ಜೆ ಹಾಕಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನಸೆಳೆದಿದೆ. ವೈರಲ್ ಗುಜರಾತ್ ಎಂಬ ಫೇಸ್‍ಬುಕ್ ಪುಟದಲ್ಲಿ ಡಾನ್ಸಿಂಗ್ ಆಂಟಿ ವೀಡಿಯೋ ವೈರಲ್ ಆಗಿದ್ದು ಇದುವರೆಗೆ 25 ಲಕ್ಷಕ್ಕೂ ಅಧಿಕ ಸಲ ವೀಕ್ಷಿಸಲ್ಪಟ್ಟಿದೆ.
ಕಡೂರು : ಟ್ಯಾಂಕರ್ ಪಲ್ಟಿ, 5 ಮನೆಗೆ ಬೆಂಕಿ, ಒಬ್ಬರು ಸಜೀವ ದಹನ

ಕಡೂರು : ಟ್ಯಾಂಕರ್ ಪಲ್ಟಿ, 5 ಮನೆಗೆ ಬೆಂಕಿ, ಒಬ್ಬರು ಸಜೀವ ದಹನ

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ. ಅಪಘಾತದಲ್ಲಿ ಓರ್ವ ಸಜೀವವಾಗಿ ದಹನವಾಗಿದ್ದು, 5 ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಮಂಗಳವಾರ ಮಧ್ಯಾಹ್ನ ಕಡೂರು ತಾಲೂಕಿನ ಗಿರಿಯಾಪುರ ಎಂಬಲ್ಲಿ ಈ ಅಪಘಾತ ನಡೆದಿದೆ. ಹೊಸದುರ್ಗಕ್ಕೆ ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು. ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ. ರಸ್ತೆ ಅಕ್ಕಪಕ್ಕದಲ್ಲಿದ್ದ ಸುಮಾರು 5 ಮನೆಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ವಸ್ತು ಪ್ರಕಾರ ಮನೆಯಲ್ಲಿ ಹಣದ ಡಬ್ಬವನ್ನು ಯಾವ ಭಾಗದಲ್ಲಿಡಬೇಕು?

ವಸ್ತು ಪ್ರಕಾರ ಮನೆಯಲ್ಲಿ ಹಣದ ಡಬ್ಬವನ್ನು ಯಾವ ಭಾಗದಲ್ಲಿಡಬೇಕು?

ವಾಸ್ತು ಎನ್ನುವುದು ಮನೆಯ ನಿರ್ಮಾಣಕ್ಕೆ ಹಾಗೂ ಮನೆಯ ನೆಮ್ಮದಿಯನ್ನು ಕಾಪಾಡುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಮನೆಯ ವಾಸ್ತು ಸೂಕ್ತ ರೀತಿಯಲ್ಲಿದೆ ಎಂದಾದರೆ ಮನೆಯಲ್ಲಿ ಸದಾ ಶಾಂತಿ, ಸಕಾರಾತ್ಮಕ ಶಕ್ತಿಯು ನೆಲೆಗೊಂಡಿರುತ್ತದೆ. ಜೊತೆಗೆ ಜೀವನದಲ್ಲಿ ಅನೇಕ ಬಗೆಯ ಅಭಿವೃದ್ಧಿಯನ್ನು ತಂದುಕೊಡುವುದು. ಅದರಲ್ಲೂ ಮನೆಯಲ್ಲಿ ವಾಸ್ತುವಿಗೆ ಅನುಗುಣವಾಗಿ ಹಣವನ್ನು ಇಡುವುದರಿಂದ ನಮ್ಮ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು. ಶ್ರೀಮಂತಿಕೆ ಎನ್ನುವುದು ಒಲಿದು
ಬರುವುದು ಎಂದು ಹೇಳಲಾಗುತ್ತದೆ. ಅಲ್ಲದೆ ಮನೆಯಲ್ಲಿ ಕೆಲವು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಹಣವನ್ನು ಇಡಬೇಕು. ಇದರಿಂದ ನಮ್ಮ ಹಣವು ಹೆಚ್ಚುವುದು

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more