Short News

ದ. ಆಫ್ರಿಕಾ ವಿರುದ್ಧದ ಗೆಲುವಿನ ಬಗ್ಗೆ ವಿರಾಟ್ ಹೀಗಂದ್ರು !

ದ. ಆಫ್ರಿಕಾ ವಿರುದ್ಧದ ಗೆಲುವಿನ ಬಗ್ಗೆ ವಿರಾಟ್ ಹೀಗಂದ್ರು !

ಹರಿಣಗಳ ನಾಡಿನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದ್ದು, ಗೆಲುವಿನ ನಂತರ ಕ್ಯಾಪ್ಟನ್‌‌ ವಿರಾಟ್‌‌‌‌ ಕೊಹ್ಲಿ ಸಂತಸ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡ ಐತಿಹಾಸಿಕ ಸರಣಿ ಗೆಲುವು ಸಾಧಿಸಿರುವುದು ನನಗೆ ವಿಶೇಷ ಅನುಭವ ನೀಡಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇದು ನಮ್ಮ ಮೊದಲ ದ್ವಿಪಕ್ಷೀಯ ಸರಣಿ ಜಯವಾಗಿದ್ದು, ತಂಡದ ಪ್ರದರ್ಶನದ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ. ಸರಣಿಯ ಅಂತಿಮ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು 5-1 ಅಂತರದಲ್ಲಿ ಗೆಲುವು ಸಾಧಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ.
ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23)  ದರ ನೋಡಿ..

ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23) ದರ ನೋಡಿ..

ದೆಹಲಿ: ಪೆಟ್ರೋಲ್: 74.50 / ಲೀಟರ್, ಡೀಸೆಲ್: 65.75 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.20 / ಲೀಟರ್ , ಡೀಸೆಲ್: 68.45 / ಲೀಟರ್. ಮುಂಬೈ: ಪೆಟ್ರೋಲ್: 82.35/ ಲೀಟರ್ , ಡೀಸೆಲ್: 70.01 / ಲೀಟರ್. ಚೆನ್ನೈ: ಪೆಟ್ರೋಲ್: 77.29 / ಲೀಟರ್ , ಡೀಸೆಲ್: 69.37 / ಲೀಟರ್. ಬೆಂಗಳೂರು: ಪೆಟ್ರೋಲ್: 75.68 / ಲೀಟರ್, ಡೀಸೆಲ್: 66.86 / ಲೀಟರ್. ಹೈದರಾಬಾದ್: ಪೆಟ್ರೋಲ್: 78.89/ ಲೀಟರ್, ಡೀಸೆಲ್: 71.43 / ಲೀಟರ್.
ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ಮೇಷ:ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ. ವೃಷಭ:ಮಕ್ಕಳ ಪ್ರಗತಿಯಿಂದ ಸಂತಸ. ಮಿಥುನ:ಪ್ರವಾಸ ಮುಂದೂಡುವುದು ಒಳಿತು. ಕಟಕ:ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು. ಸಿಂಹ:ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ. ಕನ್ಯಾ:ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ. ತುಲಾ:ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವೃಶ್ಚಿಕ:ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ. ಧನುಸ್ಸು:ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ. ಮಕರ:ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ. ಕುಂಭ:ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ. ಮೀನ:ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.
ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾನವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಸಾವಂತ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.