Short News

ಗೋಲ್ಡನ್ ಡಕ್ ಬಾರಿಸಿದ ಫಿಂಚ್, ಕಾಲೆಳೆದ  ಟ್ವೀಟ್ಟಿಗರು

ಗೋಲ್ಡನ್ ಡಕ್ ಬಾರಿಸಿದ ಫಿಂಚ್, ಕಾಲೆಳೆದ ಟ್ವೀಟ್ಟಿಗರು

ಟಿ-20 ಲೀಗ್ 2018ರಲ್ಲಿ ಆಡಲು ತುಂಬಾ ಉತ್ಸುಕರಾಗಿ, ಹನಿಮೂನ್ ಕೂಡಾ ತೊರೆದು ಬಂದ ಆಸ್ಟ್ರೇಲಿಯಾದ ಆಟಗಾರ ಅರೋನ್ ಫಿಂಚ್ ಈ ಬಾರಿ ಪಂಜಾಬ್ ಪರ ಆಡುತ್ತಿದ್ದಾರೆ. ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದ ಫಿಂಚ್ ಈಗ ಎರಡು ಪಂದ್ಯಗಳನ್ನಾಡಿದ್ದಾರೆ. ಆದ್ರೆ, ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಫಿಂಚ್ ಅದ್ಭುತ ಬ್ಯಾಟ್ಸ್ ಮನ್, ಅದೇ ರೀತಿ ಬ್ರೆಂಡನ್ ಮೆಕಲಮ್ ಕೂಡಾ. ಆದರೆ, ಇಬ್ಬರು ಗೋಲ್ಡನ್ ಡಕ್ ಬಾರಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಕಾಲೆಯಲಾಗಿದೆ. ಜತೆಗೆ ಫಿಂಚ್ ಮದುವೆಯಾಗಿದ್ದು, ಯಾಕೋ ಸರಿ ಬಂದಿಲ್ಲ ಎಂದು ಕಾಣುತ್ತೆ. ಮದುವೆಯಾಗಿದ್ದಾಗಿನಿಂದ ಶೂನ್ಯ ಸುತ್ತುತ್ತಿದ್ದಾರೆ ಎಂದು ಕಿಚಾಯಿಸಲಾಗಿದೆ.
ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.63 / ಲೀಟರ್, ಡೀಸೆಲ್: 65.93 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.32 / ಲೀಟರ್ , ಡೀಸೆಲ್: 68.63 / ಲೀಟರ್. ಮುಂಬೈ: ಪೆಟ್ರೋಲ್: 82.48/ ಲೀಟರ್ , ಡೀಸೆಲ್: 70.20 / ಲೀಟರ್. ಚೆನ್ನೈ: ಪೆಟ್ರೋಲ್: 77.43 / ಲೀಟರ್ , ಡೀಸೆಲ್: 69.56 / ಲೀಟರ್. ಬೆಂಗಳೂರು: ಪೆಟ್ರೋಲ್: 75.82 / ಲೀಟರ್, ಡೀಸೆಲ್: 67.05/ ಲೀಟರ್. ಹೈದರಾಬಾದ್: ಪೆಟ್ರೋಲ್: 79.04/ ಲೀಟರ್, ಡೀಸೆಲ್: 71.63 / ಲೀಟರ್.
ದ್ವಾದಶ  ರಾಶಿಗಳ ಇಂದಿನ  (ಎಪ್ರಿಲ್ 27) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್ 27) ದಿನ ಭವಿಷ್ಯ

ಮೇಷ: ಹೊಸ ವ್ಯವಹಾರದ ಚಿಂತನೆ. ವೃಷಭ: ನಿಮ್ಮ ದೂರಾಲೋಚನೆಯೇ ಸಮಸ್ಯೆ ತಂದೊಡ್ಡಲಿದೆ. ಮಿಥುನ: ತವರಿಗೆ ಹೋಗಲು ಸಿದ್ಧತೆ. ಕರ್ಕ: ನಿಮ್ಮ ಧೋರಣೆಗಳಿಂದ ಸ್ನೇಹಿತರು ದೂರಾಗುವರು. ಸಿಂಹ: ಮನೆಯಲ್ಲಿ ಅಶಾಂತಿ. ಕನ್ಯಾ: ಹೂಡಿಕೆಗೆ ಸಕಾಲವಲ್ಲ. ತುಲಾ: ಅನಿರೀಕ್ಷಿತ ಧನಾಗಮನ. ವೃಶ್ಚಿಕ: ನಿಮ್ಮ ವರ್ತನೆಗೆ ಬೇಸತ್ತು ಮಕ್ಕಳು ದೂರಾಗಲಿದ್ದಾರೆ. ಧನು: ಸ್ನೇಹಿತ ರೊಂದಿಗೆ ಅಪ್ತರರೊಬ್ಬರ ಮನೆಗೆ ಭೇಟಿ ಸಾಧ್ಯತೆ. ಮಕರ: ಸಹೋದರಿಯರ ವಿರೋಧ ಕಟ್ಟಿಕೊಳ್ಳುವಿರಿ.  ಕುಂಭ: ಕುಟುಂಬದಲ್ಲಿ ಅಶಾಂತಿ. ಮಾನಸಿಕ ಕಿರಿಕಿರಿ. ಮೀನ: ಗೊಂದಲಗಳು ಉಂಟಾಗಿ ಸಮಸ್ಯೆಗಳು ಎದುರಾಗಲಿವೆ.
ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಇಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್ ಅವರನ್ನು ಭೇಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ದಕ್ಷಿಣ ಕೊರಿಯಾ ಮತು ಉತ್ತರ ಕೊರಿಯಾ ಗಡಿಯಲ್ಲಿರುವ ಪೆನಿನ್ಸುಲಾದ ಹಳ್ಳಿಯೊಂದರಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ. ಉಭಯ ನಾಯಕರೂ ಅಣ್ವಸ್ತ್ರ ನಿಷೇಧದ ಬಗ್ಗೆ, ಶಾಮತಿ ಸಂಧಾನ, ಉಭಯ ರಾಷ್ಟ್ರಗಳ ಸಂಬಂಧ ವರದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. 1950-53 ರ ನಂತರ ಗಡಿ ದಾಟಿ ದಕ್ಷಿಣ ಕೊರಿಯಾ ಮಣ್ಣಿನಲ್ಲಿ ಕಾಲಿಟ್ಟ ಮೊದಲ ಉತ್ತರ ಕೊರಿಯಾ ನಾಯಕ ಎಂಬ ಹೆಗ್ಗಳಿಕೆಗೆ ಕಿಮ್ ಜಾಂಗ್ ಪಾತ್ರರಾಗಿದ್ದಾರೆ.