Short News

ಕೊಹ್ಲಿ ಟೀಂ ಗೆಲ್ಲಲು 218  ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ

ಕೊಹ್ಲಿ ಟೀಂ ಗೆಲ್ಲಲು 218 ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 11 ನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ ಟೀಂ ಕೊಹ್ಲಿ ನೇತೃತ್ವದ ಬೆಂಗಳೂರು ತಂಡಕ್ಕೆ 218 ರನ್ ಟಾರ್ಗೆಟ್ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಿಗೆ 4 ವಿಕೆಟ್ ಕಳೆದುಕೊಂಡು 217 ರನ್ ಪೇರಿಸಿತು. ರಾಜಸ್ಥಾನ ಪರ ಸಂಜು ಸಾಮ್ಸನ್ ಔಟಾಗದೆ 45 ಬಾಲ್ ಗೆ 92 ರನ್ ಗಳಿಸಿದ್ದಾರೆ.
ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 212 ಅಂಕ ಜಿಗಿತದೊಂದಿಗೆ 34,713.60ಅಂಕ ಎತ್ತರವನ್ನು ತಲುಪಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.25 ಅಂಕ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,617.80 ಅಂಕ ಮಟ್ಟಕ್ಕೇರಿತು. ಇಂದಿನ ವ್ಯವಹಾರದಲ್ಲಿ ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್‌ ಮತ್ತು ಕನ್ಸೂಮರ್‌ ಡ್ನೂರೇಬಲ್ಸ್‌ ಶೇರುಗಳು ಉತ್ತಮ ವಹಿವಾಟಿಗೊಳಪಟ್ಟವು.
ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಯಾವುದೇ ರೀತಿಯ ಜೈವಿಕ ಮಾದರಿಗಳು ತಮ್ಮ ಬಳಿ ಇಲ್ಲವೆಂದು ಚೆನ್ನೈನ ಅಪೋಲೋ ಆಸ್ಪತ್ರೆ ತಿಳಿಸಿದೆ. ಬೆಂಗಳೂರಿನ 37ವರ್ಷದ ಅಮೃತಾ ಎಂಬುವವರು ತಾನು ಜಯಲಲಿತಾರ ಮಗಳಾಗಿದ್ದು, ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಮೃತಾ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌, ಜಯಲಲಿತಾ ಅವರ ರಕ್ತದ ಮಾದರಿ ಒದಗಿಸುವಂತೆ ಅಪೋಲೋ ಆಸ್ಪತ್ರೆಗೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಆಸ್ಪತ್ರೆ ಹೀಗೆ ಹೇಳಿದೆ.
ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ. ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ. ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳಲ್ಲೂ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ.