Short News

ಆತಿಥೇಯ ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ

ಆತಿಥೇಯ ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ

ಮೊಹಾಲಿಯ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಟಿ-20 ಲೀಗ್ ನ 12 ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ವಿರುದ್ಧ ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಎರಡು ವರ್ಷಗಳ ಬಳಿಕ ಟೂರ್ನಿಗೆ ಮರಳಿರುವ ಚೆನ್ನೈ ಸತತ 2 ಜಯ ದಾಖಲಿಸಿದ್ದು, ಮೂರನೇ ಜಯ ದಾಖಲಿಸಲು ಲೆಕ್ಕಾಚಾರ ಹಾಕಿದೆ. ಮತ್ತೊಂದೆಡೆ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತಿರುವ ಪಂಜಾಬ್ ತವರು ನೆಲದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

2011ರಲ್ಲಿ ನನ್ನ ಮಗಳು ಇಶಾ ಮೊದಲ ಬಾರಿ ಜಿಯೋ ಕಲ್ಪನೆಯನ್ನು ನೀಡಿದಳು ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ರಜೆಗಾಗಿ ಮನೆಗೆ ಬಂದ ಇಶಾ ಕೋರ್ಸ್ ವರ್ಕ್ ಸಬ್ಮಿಟ್ ಮಾಡಬೇಕಾಗಿತ್ತು. ಮನೆಯಲ್ಲಿ ನೆಟ್ವರ್ಕ್ ತುಂಬಾ ನಿಧಾನಗತಿಯಾಗಿದೆ ಎಂದು ಬೇಸತ್ತ ಇಶಾ ತಂದೆಗೆ ದೂರನ್ನು ನೀಡಿದಳು. ದೇಶದಲ್ಲಿ ಅಂತರ್ಜಾಲ ವೇಗ ತುಂಬಾ ನಿಧಾನಗತಿಯಲ್ಲಿದೆ ಎಂಬುದನ್ನರಿತೆ. ಮಗ ಆಕಾಶ್ "ಡಿಜಿಟಲ್ ಜಗತ್ತನ್ನು" ಕುರಿತು ತಿಳಿಸಿದರು. ಅಂಬಾನಿ ತನ್ನ ಮಗನೊಂದಿಗಿನ ಚಾಟ್ ಮಾಡುವಾಗಿನ ಘಟನೆಯನ್ನು ನೆನಪಿಸಿಕೊಂಡು, "ಡ್ಯಾಡ್, ನಿಮ್ಮ ಪೀಳಿಗೆಯು ಅದನ್ನು ಪಡೆಯುವುದಿಲ್ಲ" ಎಂದು ಆಕಾಶ್ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಆಗಲಿದೆಯಾದರೂ ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದು ಟೌಮ್ಸ್ ನೌ ವಾಹಿನಿಯ ನಡೆಸಿರುವ ಸಮೀಕ್ಷೆ ಹೇಳುತ್ತಿದೆ. ಟೈಮ್ಸ್ ನೌ ಸುದ್ದಿ ವಾಹಿನಿಯು ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 91ಸೀಟುಗಳು ದೊರಕುತ್ತಿದ್ದರೆ, ಬಿಜೆಪಿ 89ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ 4ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಇಂದೇ ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಸಮೀಕ್ಷೆ ಸಹ ಹೊರಬಿದ್ದಿದ್ದು ಆ ಸಮೀಕ್ಷೆಯ ಪ್ರಕಾರವೂ  ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!

ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!

ಸಾಮಾನ್ಯವಾಗಿ ಹೆಚ್ಚಿನ ಜನ, ಅಧಿಕ ತೂಕ ಹೊಂದಿದವರು ಅಥವಾ ಬೊಜ್ಜು ಹೊಂದಿದವರು ಹೃದಯದ ಕಾಯಿಲೆಗೆ ಒಳಗಾಗುತ್ತಾರೆ ಮತ್ತು ಅದಕ್ಕೆ ಕಾರಣ, ಹೃದಯದಲ್ಲಿ ಶೇಕರಣೆಯಾದ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕೊಲೆಸ್ಟರಾಲ್ ಎಂದು ನಂಬಿದ್ದಾರೆ. ಇದಕ್ಕೆ ಪುರಾವೆಗಳೂ ಇವೆ, ಆದರೆ ಇದು ಖಂಡಿತಾ ಸುಳ್ಳು. ಜನರ ಅನಾರೋಗ್ಯಕರ ಜೀವನಶೈಲಿ, ಆನುವಂಶಿಕವಾಗಿ ಅಥವಾ ಕೆಲವು ಹೃದಯದ ಹೊಂದಾಣಿಕೆಯ ಕಾಯಿಲೆಗಳನ್ನು ಹೊಂದಿದ್ದರೆ ಹೃದ್ರೋಗ ಬರಬಹುದು ಎಂದು ಹೃದಯಶಾಸ್ತ್ರಜ್ಞರು ಸ್ಪಷ್ಟಪಡಿಸುತ್ತಾರೆ. ಹೃದಯದ ಕಾಯಿಲೆಗಳ ಅಪಾಯದಲ್ಲಿ ತೆಳ್ಳಗಿನ ಶರೀರದವರು ಸಹ ಇರಬಹುದು. ಆದ್ದರಿಂದ, ಯಾವಾಗಲೂ ಎಚ್ಚರವಾಗಿರುವುದು ಉತ್ತಮ.