Short News

ಈ ಬಾರಿ ಪ್ರಕೃತಿ ದೇವತೆಗೆ ಅರ್ಪಣೆ ಎಂದರು ಆರ್‌ಸಿಬಿ ಅಭಿಮಾನಿಗಳು!

ಈ ಬಾರಿ ಪ್ರಕೃತಿ ದೇವತೆಗೆ ಅರ್ಪಣೆ ಎಂದರು ಆರ್‌ಸಿಬಿ ಅಭಿಮಾನಿಗಳು!

'ಈ ಸಲ ಕಪ್ ನಮ್ದೇ' ಎಂಬ ಮಂತ್ರ ಜಪಿಸುತ್ತಿರುವ ಆರ್‌ಸಿಬಿ ಅಭಿಮಾನಿಗಳು ಮೊದಲ ಆರಂಭದ ಪಂದ್ಯದಲ್ಲೇ ತಮ್ಮ ನೆಚ್ಚಿನ ತಂಡ ಮುಗ್ಗರಿಸಿದಾಗ,ಮೊದಲ ಪಂದ್ಯ ನಮ್ಮ ಕಡೆಯಿಂದ ದೇವರಿಗೆ ಎಂದು ಸ್ವತಃ ಸಮಾಧಾನಪಟ್ಟುಕೊಂಡಿದ್ದರು. ಎರಡನೆಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆದ್ದಾಗ ಅಭಿಮಾನಿಗಳಲ್ಲಿ ಉತ್ಸಾಹ ಪುಟಿದೆದ್ದಿತ್ತು. ಭಾನುವಾರ ಪರಿಸರ ರಕ್ಷಣೆಯ ಕಾಳಜಿಯನ್ನು ಪ್ರಚುರ ಪಡಿಸುವ ಸಲುವಾಗಿ ಹಸಿರು ದಿರಿಸು ತೊಟ್ಟು ಮೈದಾನಕ್ಕಿಳಿದ ಆರ್‌ಸಿಬಿಯನ್ನರಿಗೆ ರಾಜಸ್ಥಾನ ರಾಯಲ್ಸ್ ತಂಡ ಸೋಲಿನ ರುಚಿ ತೋರಿಸಿ ಆಘಾತ ನೀಡಿತ್ತು. ಇದಕ್ಕೆ ಟ್ರೋಲ್ ಮಾಡಲಾಗಿದ್ದು 3ನೇ ಪಂದ್ಯ ಈ ಪ್ರಕೃತಿ ದೇವತೆಗೆ ಅರ್ಪಿಸಿದ್ದಾರೆ.  
ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾದ ಯುವಕ ...! ಮುಂದೇನಾಯ್ತು ಗೊತ್ತಾ?

ಕಣಿವೆ ನಾಡು ಜಮ್ಮು-ಕಾಶ್ಮೀರದ ದೋಡಾ ಎಂಬಲ್ಲಿ ಈ ಘಟನೆ ನಡೆದಿದ್ದು, ಬೈಕ್‌ ಮೇಲೆ ಬಂದ ಮೂವರು ಕಾಮುಕರು ನಡು ರಸ್ತೆಯಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆಕೆಯ ಸ್ಕೂಟಿ ನಿಲ್ಲಿಸಲು ಯತ್ನಿಸಿದ್ದಾರೆ. ಆ ವೇಳೆ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ವ್ಯಕ್ತಿಯೋರ್ವನಿಗೆ ಗುದ್ದಿದ್ದಾಳೆ. ತದನಂತರ ಕೆಳಗೆ ಬಿದ್ದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಇಬ್ಬರು ಯುವಕರು ಪರಾರಿಯಾಗಲು ಯತ್ನಿಸಿದ್ದು, ಕೆಲ ಸ್ಥಳೀಯರು ಅವರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಇದರ ವಿಡಿಯೋ ಸದ್ಯ ವೈರಲ್‌ ಆಗಿದೆ.
ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಇಲ್ಲಿಯವರೆಗೆ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚುರಂಜನ್ ಅವರಿಗೆ ಟಿಕೆಟ್ ನೀಡಲಾದ ಹಿನ್ನಲೆಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೀಗ ಒಂದಷ್ಟು ರಾಜಕೀಯ ಕಳೆ ಬಂದಂತಾಗಿದೆ.

ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಪ್ಪಚ್ಚುರಂಜನ್ ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಡಳಿತದ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಈ ಬಾರಿ ಕೂಡ ಜ

ಹೆತ್ತ ತಂದೆಯಿಂದಲೇ 13ವರ್ಷದ ಮಗಳ ಮೇಲೆ ಅತ್ಯಾಚಾರ, ನೊಂದ ಬಾಲಕಿ ಸಾವಿಗೆ ಶರಣು

ಹೆತ್ತ ತಂದೆಯಿಂದಲೇ 13ವರ್ಷದ ಮಗಳ ಮೇಲೆ ಅತ್ಯಾಚಾರ, ನೊಂದ ಬಾಲಕಿ ಸಾವಿಗೆ ಶರಣು

ಬಿಹಾರದ ಪಶ್ಚಿಮ ಚಂಪರ್ಣ ಜಿಲ್ಲೆಯ ಮಜಾಹುಲಿಯ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ತಂದೆಯೇ ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. 30 ವರ್ಷದ ಕಾಮುಕ ತಂದೆ ಸ್ವಂತ ಮಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ತಾಯಿ ಮತ್ತು ಮಗಳು ಪಂಚಾಯಿತಿ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದು, ಈ ವೇಳೆ ಪಂಚಾಯಿತಿ ಸಭೆಯಲ್ಲೇ ತಾಯಿ ಮಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿ ಹೊರ ನಡೆದಿದ್ದಾನೆ. ಈ ಘಟನೆಯಿಂದ ನೊಂದು ಖಿನ್ನತೆಗೊಳಗಾಗಿದ್ದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.