Short News

ಆರ್ ಸಿಬಿಯ 13ನೇ ಆಟಗಾರ ಮಿ.ನಾಗ್ಸ್ ತರ್ಲೆ ಕೊಹ್ಲಿ ಕಿಡಿ!

ಆರ್ ಸಿಬಿಯ 13ನೇ ಆಟಗಾರ ಮಿ.ನಾಗ್ಸ್ ತರ್ಲೆ ಕೊಹ್ಲಿ ಕಿಡಿ!

ಆರ್ ಸಿಬಿಯ ಅನಧಿಕೃತ ಆಟಗಾರ, 13ನೇ ಆಟಗಾರ ಮಿ.ನಾಗ್ಸ್(ದಾನೀಶ್ ಸೇಠ್) ಅವರು ಆರ್ ಸಿಬಿ ಕ್ಯಾಂಪಿಗೆ ಎಂಟ್ರಿ ಕೊಟ್ಟು ಆಟಗಾರರನ್ನು ತಲೆ ತಿಂದ ಪ್ರಸಂಗವನ್ನು ನಾಗುಮೆಂಟರಿಯ ಮೊದಲ ಎಪಿಸೋಡಿನಲ್ಲಿ ಕಾಣಬಹುದಾಗಿದೆ. ತವರು ನೆಲದಲ್ಲಿ ಪಂದ್ಯಗಳನ್ನಾಡುತ್ತಿರುವುದರಿಂದ ತಂಡವನ್ನು ಹುರಿದುಂಬಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ಮಿ.ನಾಗ್ಸ್ ಅವರು, ಕರ್ನಾಟಕದಲ್ಲಿ ಈಗ ಎಲೆಕ್ಷನ್ ಟೈಮ್ ಹಾಗಾಗಿ ಆಧಾರ್ ಕಾರ್ಡ್ ಬೇಕು ಎಂದು ಆಟಗಾರರಿಗೆ ಆಧಾರ್ ಕಾರ್ಡ್ ಮಾಡಿಸಲು ಫೋಟೋ ಶೂಟ್ ಮಾಡಿಸುತ್ತಾರೆ. ಈ ತಮಾಷೆ ವಿಡಿಯೋದ ಮೊದಲ ಎಪಿಸೋಡು ಸ್ಪಲ್ಪ ಸೀರಿಯಸ್ ಇದೆ ಎಂದನಿಸುತ್ತದೆ.
ರಿವಿಲ್ ಆಯ್ತು 'ಮಜಾ ಟಾಕೀಸ್' ರಾಣಿಯ ಬ್ಯೂಟಿ ಸೀಕ್ರೆಟ್

ರಿವಿಲ್ ಆಯ್ತು 'ಮಜಾ ಟಾಕೀಸ್' ರಾಣಿಯ ಬ್ಯೂಟಿ ಸೀಕ್ರೆಟ್

ಕಿರುತೆರೆ ನಟಿ, ಮಜಾ ಟಾಕೀಸ್ ನ ರಾಣಿ ಶ್ವೇತಾ ಚಂಗಪ್ಪ 2003ರಲ್ಲಿ 'ಸುಮತಿ' ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. ಈಕೆ ಅಂದಿನಿಂದ ಇಂದಿನವರೆಗೂ ಅದೇ ಆಕರ್ಷಣೆಯನ್ನು ಹೊಂದಿದ್ದಾರೆ. ಇವರಿಗೆ ನಿಮ್ಮ ಸೌಂದರ್ಯದ ಗುಟ್ಟೆನೇ ಎಂದು ಪ್ರಶ್ನಿಸಿದರೆ, ಗೊತ್ತಿಲ್ಲ. ರಾಣಿ ಪಾತ್ರ ನೋಡಿದಾಗ ಎಲ್ಲರಿಗೂ ಅನ್ಸುತ್ತೆ ಹೆಚ್ಚು ಮೇಕಪ್ ಹಾಕ್ತಾಳೆ ಅಂತ. ಆದರೆ ನಾನು ಯಾವುದೇ ರೀತಿ ಮೇಕಪ್ ಮಾಡಿಕೊಳ್ಳಲ್ಲ. ನ್ಯಾಚುರಲ್ ಲುಕ್ ನನ್ನದು. ನನ್ನ ಸ್ಕಿನ್ ತುಂಬಾ ಸೆನ್ಸಿಟಿವ್ . ಇವತ್ತಿಗೂ ನಾನು ಬೇಬಿ ಪ್ರಾಡಕ್ಟ್ ಗಳನ್ನ ಮಾತ್ರ ಬಳಸೋದು . ಯಾವಾಗಲೂ ನಗುತ್ತಾ ಇರುತ್ತೇನೆ ಅದೇ ನನ್ನ ಲೈಫ್ ಸೀಕ್ರೆಟ್ ಎನ್ನುತ್ತಾರೆ.
ಟೌಮ್ಸ್‌ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಟೌಮ್ಸ್‌ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಆಗಲಿದೆಯಾದರೂ ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದು ಟೌಮ್ಸ್ ನೌ ವಾಹಿನಿಯ ನಡೆಸಿರುವ ಸಮೀಕ್ಷೆ ಹೇಳುತ್ತಿದೆ. ಟೈಮ್ಸ್ ನೌ ಸುದ್ದಿ ವಾಹಿನಿಯು ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 91 ಸೀಟುಗಳು ದೊರಕುತ್ತಿದ್ದರೆ, ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ 4 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಇಂದೇ ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಸಮೀಕ್ಷೆ ಸಹ ಹೊರಬಿದ್ದಿದ್ದು ಆ ಸಮೀಕ್ಷೆಯ ಪ್ರಕಾರವೂ

ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ ಅತಿ ದೊಡ್ಡ ಪಕ್ಷ- ಸರ್ಕಾರ ಅತಂತ್ರ

ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ ಅತಿ ದೊಡ್ಡ ಪಕ್ಷ- ಸರ್ಕಾರ ಅತಂತ್ರ

ಎಬಿಪಿ ನ್ಯೂಸ್ ವಾಹಿನಿ- ಸಿಎಸ್‌ಡಿಎಸ್ ನಡೆಸಿರುವ ಸಮೀಕ್ಷೆಯಲ್ಲಿ ಜನಾಭಿಪ್ರಾಯದ ಸಂಗ್ರಹದ ವರದಿ ಪ್ರಕಟವಾಗಿದೆ. ಹಿಂದಿನ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸಿದ್ದರಾಮಯ್ಯ ಅವರ ಪರವಾದ ಒಲವು ಹೆಚ್ಚು ಪ್ರಕಟವಾಗಿತ್ತು. ಆದರೆ, ಎಬಿಪಿ ವಾಹಿನಿ ಸಮೀಕ್ಷೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಸರಿಸಮನಾದ ಪೈಪೋಟಿ ನೀಡಲಿದೆ ಎಂದು ವರದಿಯಾಗಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಯಾವ ಪಕ್ಷವೂ 112 ಸೀಟುಗಳ ಗುರಿ ತಲುಪಲಾರವು ಎಂದು ಸಮೀಕ್ಷೆ ಹೇಳಿದೆ.