Short News

ಟಿ20 ಲೀಗ್ : ಟಾಸ್ ಗೆದ್ದು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ಆರ್ ಸಿಬಿ ನಾಯಕ ಕೊಹ್ಲಿ

ಟಿ20 ಲೀಗ್ : ಟಾಸ್ ಗೆದ್ದು ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ಆರ್ ಸಿಬಿ ನಾಯಕ ಕೊಹ್ಲಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ಲೀಗ್ ನ ಇಂದಿನ 11 ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ರಾಜಸ್ಥಾನ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡಕ್ಕೆ ಇದು ಮೂರನೇ ಪಂದ್ಯವಾಗಿದ್ದು, ಈವರೆಗೆ ಆಡಿರುವ 2 ಪಂದ್ಯದಲ್ಲಿ 1 ರಲ್ಲಿ ಗೆದ್ದಿದೆ. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕೆಂಬ ಹಠ ತೊಟ್ಟಿದೆ. ಇನ್ನು ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋತಿದೆ.
ಅಚ್ಚರಿ ! ತೆಲಂಗಾಣದಲ್ಲಿ ಮೊಟ್ಟೆ ಇಟ್ಟಿದೆ ಹುಂಜ

ಅಚ್ಚರಿ ! ತೆಲಂಗಾಣದಲ್ಲಿ ಮೊಟ್ಟೆ ಇಟ್ಟಿದೆ ಹುಂಜ

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ಹುಂಜವೊಂದು ಮೊಟ್ಟೆ ಇಟ್ಟು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ಖಮ್ಮಂ ಜಿಲ್ಲೆಯ ರಘುನಾಥ್‌ಪಾಲೆಂ ತಾಲೂಕಿನ ವಿ.ವೆಂಕಟಾಯಪಾಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಲಸ್ಯಂ ಶ್ರೀನಿವಾಸ್‌ ರಾವ್‌ರಿಗೆ ಸೇರಿದ ಈ ಹುಂಜ ಮೊಟ್ಟೆ ಇಟ್ಟಿದೆ. ಸಾಮಾನ್ಯವಾಗಿ ಕೋಳಿ (ಯಾಟೆ - ಹೆಣ್ಣು ಕೋಳಿ) ಮೊಟ್ಟೆ ಇಡುತ್ತದೆ. ಹುಂಜ ಗಂಡು ಕೋಳಿಯಾಗಿದ್ದು, ಇದು ಮೊಟ್ಟೆ ಇಟ್ಟಿರುವುದರಿಂದ ಗ್ರಾಮದ ಜನತೆಯ ಅಚ್ಚರಿಗೆ ಕಾರಣವಾಗಿದೆ. ಜೆನೆಟಿಕ್ ರೂಪಾಂತರಗಳಿಂದ ಈ ರೀತಿ ಆಗುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಈ ಕೋಳಿ ಇಟ್ಟ ಮೊಟ್ಟೆಯಲ್ಲಿ ಹಳದಿ ಭಾಗ ಇರುವುದಿಲ್ಲ ಎಂದು ಹೇಳಿದ್ದಾರೆ.
'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

ಕನ್ನಡದ ಪ್ರತಿಭಾನ್ವಿತ ನಟ ಪ್ರದೀಪ್ ಅವರನ್ನ ಸಿನಿಮಾಗಳಿಗಿಂತ ಕ್ರಿಕೆಟ್ ಆಟದಲ್ಲೇ ಹೆಚ್ಚು ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರ ಎಂದೇ ಗುರುತಿಸಿಕೊಂಡಿರುವ ಪ್ರದೀಪ್ ಈಗ IPL ಅಖಾಡಕ್ಕೆ ಧುಮುಕಿದ್ದಾರೆ. ಹೌದು, ಐಪಿಎಲ್ ಕ್ರಿಕೆಟ್ ಪಂದ್ಯದ ಕಾಮೆಂಟರ್ ನಟ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡದ ಕಾಮೆಂಟರ್ ಆಗಿ ನಟ ಪ್ರದೀಪ್ ಗಮನ ಸೆಳೆದರು. ಕರ್ನಾಟಕದ ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್ ಮತ್ತು ವಿಜಯ ಭಾರಧ್ವಜ್ ಅವರ ಜೊತೆ ನಟ ಪ್ರದೀಪ್ ಕೂಡ ಕಾಮೆಂಟರ್ ಆಗಿ ಪಂದ್ಯವನ್ನ ವಿಶ್ಲೇಷಣೆ ಮಾಡಿದ್ದು ವಿಶೇಷವಾಗಿತ್ತು.
ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಇಡೀ ಜಗತ್ತಿನ ಯಾವ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ ಇಲ್ಲದಿರುವ ಸಬ್ ಏರ್ ಸಿಸ್ಟಂ ವ್ಯವಸ್ಥೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವುದು ನಿಮಗೆ ತಿಳಿದಿರುವ ವಿಚಾರ. ಸುರಿದ ಮಳೆ ನೀರು ಅಷ್ಟೇ ಬೇಗನೆ ಒಣಗುವ ವ್ಯವಸ್ಥೆ ಇದು. ಹೀಗಾಗಿ ಶನಿವಾರದ ಪಂದ್ಯಕ್ಕೂ ಮುನ್ನ ಮಳೆ ಸುರಿದು ನಿಂತರೂ ಆಟಕ್ಕೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿತ್ತು. ಚಿನ್ನಸ್ವಾಮಿ ಅಂಗಳ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಆದರೆ ಸಬ್ ಏರ್ ಸಿಸ್ಟಂ ಮೂಲಕ 3 ಲಕ್ಷ ಲೀಟರ್ ನೀರನ್ನು ಕೇವಲ 45 ನಿಮಿಷದಲ್ಲಿ ಸ್ಟೋರೇಜ್‌ ಟ್ಯಾಂಕ್‌ಗೆ ಪಂಪ್ ಮಾಡಿ ಮೈದಾನವನ್ನು ಒಣಗಿಸಲಾಯಿತು.