Short News

ಟಿ-20 ಟೂರ್ನಿ: ಬೆಂಗಳೂರು ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹೈದರಾಬಾದ್

ಟಿ-20 ಟೂರ್ನಿ: ಬೆಂಗಳೂರು ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹೈದರಾಬಾದ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ಇಂದು 51 ನೇ ಟಿ-20 ಪಂದ್ಯ ನಡೆಯುತ್ತಿದೆ. ಇದು ತವರು ನೆಲದಲ್ಲಿ ಆರ್ ಸಿಬಿ ಆಡುತ್ತಿರುವ ಕೊನೆಯ ಪಂದ್ಯವಾಗಿದೆ. ಟಾಸ್ ಗೆದ್ದಿರುವ ಹೈದರಾಬಾದ್ ಬೌಲಿಂಗ್ ಆಯ್ದುಕೊಂಡು ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಇಂದಿನ ಪಂದ್ಯದಲ್ಲಿ ಆರ್ ಸಿಬಿ ಸೋತರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಳ್ಳಲಿದೆ. ಪ್ಲೇ ಆಫ್ ಪ್ರವೇಶಿಸುವ ಅವಕಾಶ ಪಡೆಯಬೇಕಾದರೆ ಮೇ 19 ರಂದು ನಡೆಯುವ ಕೊನೆಯ ಪಂದ್ಯವನ್ನು ಕೂಡ ಆರ್ ಸಿಬಿ ಗೆಲ್ಲಲೇಬೇಕಿದೆ.
2018 ಜೂನ್ ತಿಂಗಳ ಮೇಷ ರಾಶಿಯ ಭವಿಷ್ಯ

2018 ಜೂನ್ ತಿಂಗಳ ಮೇಷ ರಾಶಿಯ ಭವಿಷ್ಯ

ರಾಶಿಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ರಾಶಿ ಮೇಷ. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು.ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ

ಫ್ರಾನ್ಸ್ ನಲ್ಲಿ ಕರ್ನಾಟಕದ ಗಂಡುಕಲೆ ಯಕ್ಷಗಾನದ ಕಲರವ

ಎಲ್ಲಿಯ ಕರಾವಳಿಯ ಗಂಡುಕಲೆ ಯಕ್ಷಗಾನ, ಎಲ್ಲಿಯ ಫ್ರಾನ್ಸ್ ದೇಶ? ಕಲೆಗೆ ದೇಶ ಭಾಷೆ ಗಡಿಯ ಹಂಗಿಲ್ಲ.... ವಿಷಯ ಏನಪ್ಪಾ ಅಂದ್ರೆ ವಿದೇಶಗಳಲ್ಲೂ ಕರ್ನಾಟಕದ ಶಾಸ್ತ್ರೀಯ ಕಲೆ ಯಕ್ಷಗಾನ ಸದ್ದು ಮಾಡುತ್ತಿದೆ. ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಫ್ರಾನ್ಸ್ ದೇಶದಲ್ಲಿ ಅಲ್ಲಿನ ಪುಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಕನ್ನಡದ ಹೆಮ್ಮೆಯ ಕಲೆಯ ಪರಿಚಯ ಮಾಡುತ್ತಿದ್ದಾರೆ. ಒಂದು ತಿಂಗಳ ಫ್ರಾನ್ಸ್ ಪ್ರವಾಸದಲ್ಲಿರುವ ಸುವರ್ಣರು, ಯಕ್ಷಗುರು ಶೈಲೇಶ್ ನಾಯ್ಕ್ ಜೊತೆಗೂಡಿ, ಅಲ್ಲಿನ ಮಕ್ಕಳಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ಕಲೆ ವಿದೇಶಗಳಲ್ಲೂ ಕಲರವ ಮಾಡುತ್ತಿದೆ.
ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಈ ಸಾಲಿನ ಮೀನುಗಾರಿಕಾ ಋತುವಿನ ಮುಕ್ತಾಯ ಸಮೀಪಿಸಿದೆ. ಜೂನ್ 1ರಿಂದ 61 ದಿನಗಳ ಕಾಲ ಮೀನುಗಾರಿಕಾ ರಜೆ ಆರಂಭವಾಗಲಿರುವ ಹಿನ್ನಲೆಯಲ್ಲಿ ಆಳ ಸಮುದ್ರದಿಂದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಮರಳುತ್ತಿವೆ. ಫಿಶ್ ಕ್ಯಾಚ್ ಈ ಬಾರಿ ಉತ್ತಮವಾಗಿದ್ದರೂ ಮೀನುಗಾರರ ದೋಣಿಗಳ ಸಂಖ್ಯೆ ಏರಿಕೆಯಿಂದ ಮೀನುಗಾರರಿಗೆ ನಿರೀಕ್ಷಿತ ಪ್ರಮಾಣದ ಲಾಭ ದೊರಕಿಲ್ಲ. ಅತ್ತ ಲಾಭವೂ ಇಲ್ಲದೇ ಇತ್ತ ನಷ್ಟವೂ ಇಲ್ಲದೇ ಸಾಧಾರಣ ಮೀನುಗಾರಿಕಾ ಋತು ಅಂತ್ಯಗೊಂಡಿದೆ. ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲ ಮಕ್ಕಳಿಗೆ ಮೀನುಗಾರಿಕಾ ರಜೆ ಆರಂಭವಾಗುತ್ತದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more