Short News

ಟಿ-20 ಲೀಗ್ : ಇಂದು ಬೆಂಗಳೂರು - ರಾಜಸ್ಥಾನ ಹಣಾಹಣಿ

ಟಿ-20 ಲೀಗ್ : ಇಂದು ಬೆಂಗಳೂರು - ರಾಜಸ್ಥಾನ ಹಣಾಹಣಿ

ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಇಂದು ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ಮೂರನೇ ಪಂದ್ಯವನ್ನು ಆಡುತ್ತಿದೆ. 11ನೇ ಆವೃತ್ತಿಯಲ್ಲಿ ಕಪ್‌ ಗೆಲ್ಲಲೇ ಬೇಕೆಂಬ ಹಠದಲ್ಲಿರುವ ಬೆಂಗಳೂರು ಇಂದು ರಾಜಸ್ಥಾನ ತಂಡದ ವಿರುದ್ಧ ಸೆಣೆಸಾಡಲಿದೆ. ಈಗಾಗಲೇ ಆಡಿರುವ ಎರಡು ಪಂದ್ಯದಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿರುವ ಬೆಂಗಳೂರು ಮೂರನೇ ಪಂದ್ಯವನ್ನು ಗೆಲ್ಲುವ ತವಕದಲ್ಲಿದೆ. ಸಂಜೆ 4 ಗಂಟೆಗೆ ಪಂದ್ಯ ನಡೆಯಲಿದ್ದು, ಸ್ಟಾರ್‌ ಸ್ಪೋರ್ಟ್ಸ್ 1,3 ಮತ್ತು ಹಾಟ್‌ಸ್ಟಾರ್‌ ನಲ್ಲಿ ಲೈವ್ ಪಂದ್ಯ ವೀಕ್ಷಿಸಬಹುದು.
ಹವಮಾನ ವೈಪರಿತ್ಯ: ದಕ್ಷಿಣ ಕನ್ನಡದಲ್ಲಿ 40 ಅಡಿ ಮುಂದೆ ಬಂದ ಕಡಲು

ಹವಮಾನ ವೈಪರಿತ್ಯ: ದಕ್ಷಿಣ ಕನ್ನಡದಲ್ಲಿ 40 ಅಡಿ ಮುಂದೆ ಬಂದ ಕಡಲು

ಸಮುದ್ರದಲ್ಲಿ ಏಳುತ್ತಿರುವ ಅಬ್ಬರದ ಅಲೆಗಳು ಕಡಲ ಕಿನಾರೆಯ ಸುಮಾರು 40ಅಡಿಗಳಷ್ಟು ಭೂಭಾಗ ಪ್ರದೇಶವನ್ನು ಆಕ್ರಮಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಸಿದ್ಧಪಡಿಸಿರುವ ಇತ್ತೀಚಿನ ಬಹುಮಾದರಿ ಆಧಾರಿತ ತರಂಗ ಮುನ್ಸೂಚನಾ ವ್ಯವಸ್ಥೆಯ ಮಾಹಿತಿ ಪ್ರಕಾರ ಏಪ್ರಿಲ್ 21,22ರಂದು ಪ್ರತಿ 17-22ಸೆಕೆಂಡ್ ಗಳಿಗೊಮ್ಮೆ 2-3ಮೀಟರನಷ್ಟು ಎತ್ತರ ಅಲೆಗಳು ಸಮದ್ರದಲ್ಲಿ ಏಳಲಿದ್ದು ಇದು ದಡದತ್ತ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಅಕಾಲಿಕೆ ಮಳೆ,ಸಮುದ್ರದ ಅಲೆಗಳ ಅಬ್ಬರದ ಕಾರಣದಿಂದ ಅವಿಭಜಿತ ದಕ್ಷಿಣಕನ್ನಡದಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ.
ಕ್ಯಾಚ್ ಆಫ್ ದಿ ಸೀಸನ್ : ಕೊಹ್ಲಿ ಕ್ಯಾಚ್ ಹಿಡಿದ ಬೌಲ್ಟ್

ಕ್ಯಾಚ್ ಆಫ್ ದಿ ಸೀಸನ್ : ಕೊಹ್ಲಿ ಕ್ಯಾಚ್ ಹಿಡಿದ ಬೌಲ್ಟ್

ಶನಿವಾರ ಐಪಿಎಲ್ 2018ರ 19ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿದೆ. ಡೆಲ್ಲಿ ವಿರುದ್ಧ ಬೆಂಗಳೂರು 6 ವಿಕೆಟ್ ಗಳ ಸುಲಭ ಜಯ ದಾಖಲಿಸಿತು. ಎಬಿಡಿ ಅಬ್ಬರದ ಜತೆಗೆ ಟ್ರೆಂಟ್ ಬೌಲ್ಟ್ ಹಿಡಿದ ಕ್ಯಾಚ್ ಎಲ್ಲರನ್ನು ಅಚ್ಚರಿಗೆ ದೂಡಿತು. ಒಂದು ಕ್ಷಣ, ಕ್ಯಾಚ್ ಹಿಡಿದ ಬೌಲ್ಟ್ ಗೆ ಕ್ಯಾಚ್ ಹಿಡಿದಿದ್ದರ ಬಗ್ಗೆ ಅನುಮಾನ ಮೂಡಬೇಕು ಎಂಬಂಥ ಪರಿಸ್ಥಿತಿ ಇತ್ತು. ಬೌಂಡರಿ ಗೆರೆಯ ಅಂಚಿನಲ್ಲಿ ಡೈವ್ ಹೊಡೆದ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಬೌಲ್ಟ್, ಸ್ವಲ್ಪ ಮುಂದಕ್ಕೆ ಅಲುಗಾಡಿದ್ದರೂ ಬೌಂಡರಿ ಗೆರೆ ತಗುಲುತ್ತಿತ್ತು.
ಬೆಂಗಳೂರಿನಲ್ಲಿ ಮುಂದುವರೆದ ಗಾಳಿ ಸಹಿತ ಮಳೆ, ಒಂದು ವಾರ ಇದೇ ವಾತಾವರಣ ಮುಂದುವರಿಕೆ

ಬೆಂಗಳೂರಿನಲ್ಲಿ ಮುಂದುವರೆದ ಗಾಳಿ ಸಹಿತ ಮಳೆ, ಒಂದು ವಾರ ಇದೇ ವಾತಾವರಣ ಮುಂದುವರಿಕೆ

ಬೆಂಗಳೂರಿನಲ್ಲಿ ಗಾಳಿ ಮಳೆಯ ಆರ್ಭಟ ಭಾನುವಾರ ಕೂಡ ಮುಂದುವರೆದಿದ್ದು, ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯ್ತು. ಸಂಜೆ ಹೊತ್ತಿಗೆ ಮಳೆ ಆರಂಭಕ್ಕೂ ಮುನ್ನ ಬಿರುಗಾಳಿ ಎದ್ದು ಹಲವು ಕಡೆ ಮರಗಳು ಧರೆಗೆ ಉರುಳಿ ಸಂಚಾರ ಅಸ್ತವ್ಯಸ್ತವಾಯ್ತು. ಬಿರುಗಾಳಿ ಎದ್ದ ಕೆಲವೇ ಕ್ಷಣಗಳಲ್ಲಿ ಸಾಧಾರಣ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದರಿಂದ ವಾಹನ ಸಂಚಾರರು ಕಿರಿಕಿರಿ ಅನುಭಸಿದರು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಗುರುವಾರ (ಏ,26)ರವರೆಗೂ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ. ಶುಕ್ರವಾರ ಹಾಗೂ ಶನಿವಾರ ಮೋಡ ಕವಿದ ವಾತಾವರಣವಿರಲಿದೆ.