Short News

ನಿಮ್ಮ ಪೋಟೋವನ್ನು ಇನ್ನಷ್ಟು ಚಂದಗಾಣಿಸಲು ಇಲ್ಲಿವೇ ಬೆಸ್ಟ್‌ ಆಪ್ಸ್‌..!

ನಿಮ್ಮ ಪೋಟೋವನ್ನು ಇನ್ನಷ್ಟು ಚಂದಗಾಣಿಸಲು ಇಲ್ಲಿವೇ ಬೆಸ್ಟ್‌ ಆಪ್ಸ್‌..!

ಸ್ಮಾರ್ಟ್‌ಫೋನ್‌ ಲೋಕದಲ್ಲಿ ಎಲ್ಲರಿಗೂ ನಾವು ಫೋಟೋಗ್ರಾಫಿ ಮಾಡಬೇಕೆಂಬ ಹಂಬಲವಿರುತ್ತೆ. ಈಗಂತೂ ನಿಮ್ಮ ಸ್ಮಾರ್ಟ್‌ಫೋನ್‌ ನಿಮ್ಮ ಸೃಜನಾತ್ಮಕತೆ ಬೆಳೆಸುವ ಕಾರ್ಯ ಮಾಡುತ್ತದೆ. ಆದರೆ, ಎಲ್ಲರ ಮೊಬೈಲಲ್ಲೂ ಕ್ಯಾಮೆರಾ ಉತ್ತಮ ಕ್ವಾಲಿಟಿ ಇರಬೇಕಲ್ಲ. ಉತ್ತಮ ಕ್ವಾಲಿಟಿ ಕ್ಯಾಮೆರಾ ಇದ್ದರೂ, ಪೋಟೋ ಸೆರೆಹಿಡಿದಾಗ ಛಾಯಾಚಿತ್ರಕ್ಕೆ ತಕ್ಕಂತೆ ವಾತಾವರಣ ಇರಬೇಕಲ್ಲ. ಒಳ್ಳೆ ಪೋಟೋ ಏನೋ ಬಂದಿರುತ್ತೆ. ಆದರೆ, ಅದರಲ್ಲಿ ಬೇಡದೆ ಇರುವ ಅನೇಕ ಅಂಶಗಳು ಆ ಪೋಟೋದಲ್ಲಿ ಬಂದು ಸೇರಿರುತ್ತವೆ. ಬೆಳಕು ಸರಿಯಾಗಿ ಇರಲ್ಲ ಅಥವಾ ಕಲರ್‌ಶೇಡ್ ಆಗಿರುತ್ತೆ, ಸ್ವಲ್ಪ ಬ್ಲರ್‌ ಆಗಿರುತ್ತೆ.

ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ

ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ

ಇಂದು ಸೋಮವಾರ ತಪ್ತ ಮುದ್ರಾಧಾರಣೆ. ಇತಿಹಾಸದಲ್ಲೇ ಮೊದಲ ಏಕಾದಶಿಗೆ ಅಷ್ಟಮಠಗಳಿಗೆ ಸಂಭ್ರಮ. ಎಲ್ಲಾ ಕಡೆಗಳಿಂದ ಭಕ್ತರು ಮುದ್ರಧಾರಣೆಗೆ ಆಗಮಿಸುತ್ತಾರೆ. ಪ್ರತೀ ಬಾರಿ ಉಡುಪಿಯಲ್ಲಿ ಮುದ್ರಾಧಾರಣೆ ಅದ್ದೂರಿಯಾಗಿ ನಡೆಯುತ್ತದೆ. ಆದರೆ ಶೀರೂರು ಶ್ರೀ ಅಸಹಜ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠದಲ್ಲಿ ಮಾತ್ರ ಮುದ್ರಾಧಾರಣೆ ಸ್ಥಗಿತಗೊಳಿಸಲಾಗಿದೆ. ವಿಷ್ಣುವಿನ ಆಯುಧಗಳಾದ ಶಂಖ ಹಾಗೂ ಚಕ್ರದ ಮುದ್ರೆಯನ್ನು ಯತಿಗಳು ಮುದ್ರಿಸುತ್ತಾರೆ.
ಬಿಸಿಸಿಐ ಪ್ರಕಾರ ಟೀಂ ಇಂಡಿಯಾದ ನಾಯಕ ಎಂ.ಎಸ್.ಧೋನಿ

ಬಿಸಿಸಿಐ ಪ್ರಕಾರ ಟೀಂ ಇಂಡಿಯಾದ ನಾಯಕ ಎಂ.ಎಸ್.ಧೋನಿ

ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದ ನಾಯಕತ್ವದಿಂದ ಹೊರಬಂದು ವರ್ಷಗಳೇ ಕಳೆದಿವೆ. ಆದ್ರೆ ಬಿಸಿಸಿಐ ಪ್ರಕಾರ ಇನ್ನೂ ಕೂಡ ಟೀಂ ಇಂಡಿಯಾ ಕ್ಯಾಪ್ಟನ್ ಎಂ.ಎಸ್.ಧೋನಿಯವರೇ ಆಗಿದ್ದಾರೆ. ಹೌದು ಇದು ನಿಜಕ್ಕೂ ಅಚ್ಚರಿಯ ವಿಚಾರವೇ. ಏಕೆಂದರೆ, ಬಿಸಿಸಿಐ ಅಧಿಕೃತ ಆಪ್ ನಲ್ಲಿನ ಮಾಹಿತಿಯ ಪ್ರಕಾರ, ಇಂದಿಗೂ ಟೀಮ್ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾನೇ ಹೇಳ್ತಿದೆ. ಸದ್ಯ ಈ ವಿಚಾರ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಒಳಗಾಗ್ತಿದೆ. ಬಿಸಿಸಿಐ ಆಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರೊಫೈಲ್ ಓಪನ್ ಮಾಡಿದ್ರೆ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಅನ್ನೋ ಮಾಹಿತಿ ಇದೆ.
ಸುಮಾರು 14 ಮೈಲಿ ನಡೆದ ವ್ಯಕ್ತಿಗೆ ಕಂಪೆನಿ ಸಿಇಓನಿಂದ ಕಾರು ಉಡುಗೊರೆ!

ಸುಮಾರು 14 ಮೈಲಿ ನಡೆದ ವ್ಯಕ್ತಿಗೆ ಕಂಪೆನಿ ಸಿಇಓನಿಂದ ಕಾರು ಉಡುಗೊರೆ!

ಈತ ಹೊಸ ಉದ್ಯೋಗಕ್ಕೆ ಮರುದಿನ ಸೇರಬೇಕಿತ್ತು. ಆದರೆ ಆತನ ಕಾರು ಕೆಟ್ಟಿರುವುದು ತಿಳಿದುಬಂತು. ಇದನ್ನು ಸರಿಮಾಡಲು ಪ್ರಯತ್ನಿಸಿದ. ಆದರೆ ಕಾರು ಸ್ಟಾರ್ಟ್ ಆಗಲೇ ಇಲ್ಲ. ಮೊದಲ ದಿನವೇ ರಜೆ ಮಾಡುವ ಬದಲು ಆತ ಕಚೇರಿಗೆ ನಡೆದುಕೊಂಡೇ ಹೋಗುವ ನಿರ್ಧಾರಕ್ಕೆ ಬಂದ. ಆತನ ಮನೆಯಿಂದ ಕಚೇರಿಯು ಸುಮಾರು14 ಮೈಲಿ ದೂರದಲ್ಲಿತ್ತು. ನಾಲ್ಕು ಗಂಟೆ ನಿದ್ರೆ ಮಾಡಿಕೊಂಡ ಬಳಿಕ ಆತ ತನ್ನ ಕಚೇರಿಯತ್ತ ನಡೆಯಲು ಆರಂಭಿಸಿದ. ವಾಲ್ಟರ್ ಅಲಬಾಮದ ಹೋಮ್ ವುಡ್ ನಲ್ಲಿರುವ ತನ್ನ ಮನೆಯಿಂದ ಅಲಬಾಮದ ಪೆಲ್ಹಮ್ ಗೆ ನಡೆಯಲು ಆರಂಭಿಸಿದ. ವಾಲ್ಟರ್ ಸುಮಾರು 14 ಮೈಲಿ ಕ್ರಮಿಸಿದ ಬಳಿಕ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪೊಲೀಸರು ಆತನನ್ನು ಹಿಡಿದರು.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more