Short News

ಕಾಲ್ಚಳಕದ ಆಟಕ್ಕೆ ಭರ್ಜರಿ ಆಫರ್ ನೀಡಿದ ಟೆಲಿಕಾಂ ಆಪರೇಟರ್ಸ್..!

ಕಾಲ್ಚಳಕದ ಆಟಕ್ಕೆ ಭರ್ಜರಿ ಆಫರ್ ನೀಡಿದ ಟೆಲಿಕಾಂ ಆಪರೇಟರ್ಸ್..!

ಇಂದಿನಿಂದ ವಿಶ್ವದಾದ್ಯಂತ ಫುಟ್ಬಾಲ ಜ್ವರ ಶುರುವಾಗಲಿದ್ದು, ರಷ್ಯಾದಲ್ಲಿ ನಡೆಯುವ 32 ದೇಶಗಳ ಕಾಲ್ಚಳಕ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಅದರಂತೆ ಟೆಲಿಕಾಂ ಆಪರೇಟರ್ ಗಳು ಸಹ ತಮ್ಮ ಬಳಕೆದಾರರಲ್ಲಿ ಫಿಫಾ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಫ್ರೀ ಲೈವ್ ಸ್ಟ್ರೀಮ್, ಡೇಟಾ ಆಫರ್, ವಿನ್ನಿಂಗ್ ಆಫರ್ ಗಳನ್ನು ನೀಡಿ ಅಂಗೈಯಲ್ಲಿ ಫುಟ್ಬಾಲ್ ವೈಭವವನ್ನು ತೆರೆದಿಡುವ ಪ್ರಯತ್ನ ಮಾಡುತ್ತಿವೆ. ಬಿಎಸ್ಎನ್ಎಲ್, ಏರ್ ಟೆಲ್, ಜಿಯೋ, ವೋಡಾಪೋನ್ ಸೇರಿದಂತೆ ಹಲವು ಭಾರತೀಯ ಟೆಲಿಕಾಂ ಆಪರೇಟರ್ ಗಳು ಭರ್ಜರಿ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ.

ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್

ಪೇಟಿಎಂನಲ್ಲೂ ಬಂತು ಲೈವ್ ಟಿವಿ, ಕ್ರಿಕೆಟ್, ನ್ಯೂಸ್

ಡಿಜಿಟಲ್ ವ್ಯಾಲೆಟ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಪೇಟಿಎಂ. ಒನ್97 ಕಮ್ಯುನಿಕೇಷನ್ ಒಡೆತನದಲ್ಲಿರುವ ಪೇಟಿಎಂ ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ತನ್ನ ಪೇಟಿಎಂ ಆಪ್ ನ ಇನ್ ಬಾಕ್ಸ್ ಮೋಡ್ ನಲ್ಲಿ ಭರಪೂರ ಮನರಂಜನೆ ಒದಗಿಸಲು ಮುಂದಾಗಿದೆ. ಪೇಟಿಎಂ ಇನ್ ಬಾಕ್ಸ್ ನಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಇದ್ದು, ನ್ಯೂಸ್, ಲೈವ್ ಟಿವಿ, ಕ್ರಿಕೆಟ್, ಮನರಂಜನಾ ವಿಡಿಯೋಗಳು ಮತ್ತು ಗೇಮ್ಸ್ ಟ್ಯಾಬ್ಸ್ ಅಳವಡಿಸಲಾಗಿದೆ. ಇನ್ ಬಾಕ್ಸ್ ಪೇಟಿಎಂನಡಿಯಿರುವ ಮೇಸೆಂಜಿಂಗ್ ಸೇವೆಯಾಗಿದೆ. ಈಗ ಮೇಸೆಂಜಿಂಗ್ ಸೇವೆ ಜೊತೆ ಮನರಂಜನೆಯು ಉಚಿತವಾಗಿ ದೊರಕಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಶಿಫಾರಸ್ಸು

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತಕ್ಕೆ ಶಿಫಾರಸ್ಸು

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರುವರೆ ವರ್ಷಗಳಿಂದ ಪಿಡಿಪಿಯ ಮೆಹಬೂಬಾ ಮುಫ್ತಿ ಸರಕಾರದ ಭಾಗವಾಗಿದ್ದ ಬಿಜೆಪಿ ತನ್ನ ಬೆಂಬಲವನ್ನು ಇಂದು ಹಿಂತೆಗೆದುಕೊಂಡಿದೆ. ಈ ಮೂಲಕ ಮುಫ್ತಿ ಸರಕಾರ ಪತನವಾಗಿದ್ದು, ಅಲ್ಲಿ ಈಗ ರಾಷ್ಟ್ರಪತಿ ಆಡಳಿತ ಹೇರುವ ದಿನಗಳು ಸಮೀಪಿಸಿವೆ.
ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಳ್ಳುತ್ತಿದ್ದಂತೆ, ರಾಜ್ಯಪಾಲರನ್ನು ಭೇಟಿಯಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ನಾವು ಸರಕಾರ ರಚಿಸುತ್ತಿಲ್ಲ ಎಂದಿದ್ದರು. ಜೊತೆಗೆ ಕಾಂಗ್ರೆಸ್ ಕೂಡ ಮೈತ್ರಿ ಸರಕಾರ ರಚನೆಯಿಂದ ಹಿಂದೆ ಸರಿದಿತ್ತು.

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 21, 2018 ಕೊನೆಯ ದಿನಾಂಕ. ಜರ್ನಲಿಸಂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 15 ವರ್ಷ ಅನುಭವ, ಮತ್ತು ಕಮ್ಯುನಿಕೇಶನ್ ಸ್ಕಿಲ್ ಹೊಂದಿರುವವರಿಗೆ ಮೊದಲ ಆದ್ಯತೆ. ಹುದ್ದೆ 75 ಸಾವಿರ ವೇತನ ನಿಗದಿ ಪಡಿಸಲಾಗಿದೆ. https://www.isro.gov.in/ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more