Short News

ಇಂಟೆಕ್ಸ್ ನಿಂದ ಫುಲ್ ಪ್ಯೂವ್ ಡಿಸ್ ಪ್ಲೇ, ಫೇಸ್ ಅನ್ ಲಾಕ್ ಇರುವ ಫೋನ್ ಮಾರುಕಟ್ಟೆಗೆ

ಇಂಟೆಕ್ಸ್ ನಿಂದ ಫುಲ್ ಪ್ಯೂವ್ ಡಿಸ್ ಪ್ಲೇ, ಫೇಸ್ ಅನ್ ಲಾಕ್ ಇರುವ ಫೋನ್ ಮಾರುಕಟ್ಟೆಗೆ

ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ಇನ್ಫಿ 33ಸ್ಮಾರ್ಟ್ ಫೋನ್ ಮತ್ತು ಇನ್ಫಿ 3ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ.  ಬೆಲೆ ಕ್ರಮವಾಗಿ 5,049ರೂ. ಮತ್ತು 4,649ರೂ. ಹೊಂದಿದೆ. ಇನ್ಫಿ 33 ಸ್ಮಾರ್ಟ್ ಫೋನಿನಲ್ಲಿ 5.34 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. 1GB RAM ನೊಂದಿಗೆ 8GBಇಂಟರ್ನಲ್ ಮೆಮೊರಿ ಇದೆ. ಇಲ್ಲದೇ 128GBವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವಿದೆ. ಇನ್ಫಿ 3ಸ್ಮಾರ್ಟ್ ಪೋನ್ ಆಂಡ್ರಾಯ್ಡ್ ಗೋನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ 4.95ಇಂಚಿನ FWVGA+ಗುಣಮಟ್ಟದ ಡಿಸ್ ಪ್ಲೇ, 1GB RAM ಮತ್ತು 5MP ಹಿಂಬದಿ ಕ್ಯಾಮೆರಾವನ್ನು ನೀಡಲಾಗಿದೆ.
ಹೊಸ 100 ರೂಪಾಯಿ ನೋಟು ಬಿಡುಗಡೆ! ವಿಶೇಷತೆಗಳೇನು ಗೊತ್ತೆ?

ಹೊಸ 100 ರೂಪಾಯಿ ನೋಟು ಬಿಡುಗಡೆ! ವಿಶೇಷತೆಗಳೇನು ಗೊತ್ತೆ?

  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗುರುವಾರ ಹೊಸ 100 ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ.
  • ನೇರಳೆ ಬಣ್ಣದ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದೆ. ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಅದರಲ್ಲಿನ ವಿಶೇಷ ಲಕ್ಷಣಗಳೇನು ಎಂಬುದು ಹಲವರ ಕುತೂಹಲ ಆಗಿರಬಹುದು..!
  • ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹೊಸ ನೋಟುಗಳು ಕೆನ್ನೇರಳೆ ಬಣ್ಣದಲ್ಲಿ ಮುದ್ರಣವಾಗುತ್ತಿವೆ. ಮಹಾತ್ಮಾ ಗಾಂಧಿಯಿರುವ ಹೊಸ ಸರಣಿಯ ನೋಟುಗಳಲ್ಲಿ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಸಹಿ ಇರಲಿದೆ.
ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ  ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಗಂಭೀರ ಆರೋಪ ಮಾಡಿದೆ. ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಆದರೂ ಆರ್ಥಿಕವಾಗಿ ತೆಲಂಗಾಣವನ್ನು ಬೆಂಬಲಿಸಿದೆ. ಎನ್ ಡಿಎ ಸರ್ಕಾರ ರಚನೆಯಾಗಿ 4ವರ್ಷ ಕಳೆದರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದರು.
ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ರೈಲು ವೀಲ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 13, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಜುಲೈ 8, 2018 ಆರಂಭ ದಿನಾಂಕ. ಐಟಿಐ ಜತೆ 10ನೇ ಕ್ಲಾಸ್ ತೇರ್ಗಡೆಯಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೇ ಯಾವುದೇ ಅನುಭವ ಇರದ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗೆ http://rwf.indianrailways.gov.in/ ಗೆ ಭೇಟಿ ನೀಡಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more