Short News

ಲೀಕ್ ಆಯ್ತು ಐಫೋನ್ 9 ಇಮೇಜ್: ಹೀಗಿದೆ ನೋಡಿ.!

ಲೀಕ್ ಆಯ್ತು ಐಫೋನ್ 9 ಇಮೇಜ್: ಹೀಗಿದೆ ನೋಡಿ.!

ಆಪಲ್ ನೂತನ ಐಫೋನ್ ಬಗ್ಗೆ ಭಾರೀ ಕುತೂಹಲವು ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ರೂಮರ್ ಗಳು ಈ ಹೊಸ ಐಫೋನ್ ಬಗ್ಗೆ ಕೇಳಿ ಬರುತ್ತಿದೆ. ಇದೇ ಮಾದರಿಲ್ಲಿ ಇಂಟರ್ನೆಟ್‌ನಲ್ಲಿ ಫೋಟೋವೊಂದು ಸದ್ದು ಮಾಡುತ್ತಿದ್ದು, ಐಫೋನ್ 9 ಲೀಕ್ ಫೋಟೋ ಇದಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ 9 ಬರುವುದಿಲ್ಲ ಎನ್ನುವ ಊಹಾಪೋಹಗಳಿಗೆ ಇದು ತೆರೆ ಎಳೆದಿದೆ ಎನ್ನಲಾಗಿದೆ. ಆದರೆ ಕೇಲವರು ಇದನ್ನು ಫೇಕ್ ಫೋಟೋ ಎಂದು ಕರೆಯುತ್ತಿದ್ದಾರೆ. ಆದರೆ ಈ ಐಫೋನ್ iOS 12ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಐಫೋನ್ 9 ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.
ರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿ

ರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿ

ರಫೇಲ್ ಒಪ್ಪಂದದ ವಿವಾದದಲ್ಲಿ ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.

ಈ ಒಪ್ಪಂದದ ಕುರಿತು ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಮೂಲಕ ಕೆಳಮಟ್ಟದವರೆಗೂ ಈ ಬಗ್ಗೆ ಮಾಹಿತಿ ನೀಡಲು ರಾಹುಲ್ ಗಾಂಧಿ ಸುದ್ದಿಗೋಷ್ಠಿ ಆಯೋಜಿಸುವ ನಿರೀಕ್ಷೆಯಿದೆ.

ಈ ಸಮಿತಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಜೈಪಾಲ್ ರೆಡ್ಡಿ ಅಧ್ಯಕ್ಷರಾಗಿದ್ದಾರೆ.

ಈ ಸಮಿತಿಯಲ್ಲಿ ಪಕ್ಷದ ಹಿರಿಯ ಹಾಗೂ ಯುವ ಮುಖಂಡರು ಸೇರಿದ್ದಾರೆ. ರಣದೀಪ್ ಸುರ್ಜೀವಾಲ ಅವರ ಉಸ್ತುವಾರಿಯಲ್ಲಿ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ.

ಜೋಗ ಜಲಪಾತದಲ್ಲಿ ಮೈಮರೆತು ಹಾಡಿದ ಅಟಲ್ ಜೀ!

ಜೋಗ ಜಲಪಾತದಲ್ಲಿ ಮೈಮರೆತು ಹಾಡಿದ ಅಟಲ್ ಜೀ!

ದಿ. ಅಟಲ್ ಬಿಹಾರಿ ವಾಜಪೇಯಿ ಅವರು 1968 ರಲ್ಲಿ ಪ್ರಾಂತೀಯ ಜನಸಂಘ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಸುಬ್ಬಣ್ಣ ಅವರು ಕಳೆದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಪ್ರಾಂತೀಯ ಸಮಾವೇಶದಲ್ಲಿ ಭಾಗವಹಿಸಿದ್ದ ವಾಜಪೇಯಿ ಅವರನ್ನು ನಾನು ನನ್ನ ಅಂಬಾಸಿಡರ್ ಕಾರಿನಲ್ಲಿ ಕೂರಿಸಿಕೊಂಡು ಜೋಗ ಫಾಲ್ಸ್ ನೋಡಲು ಕರೆದುಕೊಂಡು ಹೋಗುವ ಅವಕಾಶ ಆಗ ನನಗೆ ಒದಗಿಬಂದಿತ್ತು. ಅವರು ಜೋಗ ಜಲಪಾತ ಸೌಂದರ್ಯವನ್ನು ನೋಡಿ ವಿಸ್ಮಯಗೊಂಡಿದ್ದರು ಎಂದಿದ್ದಾರೆ.
ರಿಸರ್ವ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ರಿಸರ್ವ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ದಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸರ್ವಿಸ್ ಬೋರ್ಡ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕಾಮನ್ ಸೀನಿಯರಿಟಿ ಗ್ರೂಪ್ ಸ್ಟ್ರೀಮ್ಸ್ ನಲ್ಲಿ ಗ್ರೇಡ್ ಬಿ ಸ್ಪೇಶಾಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 7, 2018 ಕೊನೆಯ ದಿನಾಂಕ. ಹುದ್ದೆಗೆ ಸಂಬಂಧಪಟ್ಟ ಫೀಲ್ಡ್‍ನಲ್ಲಿ ಸ್ನಾತಕೋತ್ತರ ಪದವಿ ಆಗಿರುವವರು ಆರ್ಜಿ ಸಲ್ಲಿಸಲಬಹುದು. ಹೆಚ್ಚಿನ ಮಾಹಿತಿಗಾಗಿ https://www.rbi.org.in/ ಗೆ ಭೇಟಿ ನೀಡಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more