Short News

ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...!

ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...!

ಮಾರುಕಟ್ಟೆಯಲ್ಲಿ ಈಗಾಗಲೇ ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಐಫೋನ್ X ಅನೇಕ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳ ವಿನ್ಯಾಸಕ್ಕೆ ಮುನ್ನಡಿ ಹಾಡಿದೆ. ಸದ್ಯ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಇನ್ನು ದುಬಾರಿ ಬೆಲೆಯ ಐಫೋನ್ X ಕಾಣಿಸಿಕೊಂಡಿದ್ದು, $4,500ಕ್ಕೆ (ಸುಮಾರು ರೂ.3,04,762) ಮಾರಾಟವಾಗಲಿದ್ದು, ಐಫೋನ್ X ಟೆಲ್ಸಾ ಎಂದು ನಾಮಕರಣವನ್ನು ಮಾಡಲಿದೆ, ಈ ಸ್ಮಾರ್ಟ್ ಫೋನ್‌ ಅನ್ನು ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಫೋನಿನ ಬ್ಯಾಕ್ ಕವರ್ ನಲ್ಲಿ ಸೋಲಾರ್ ಪ್ಯಾನಲ್ ಅನ್ನು ನೀಡಲಾಗಿದೆ.
ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜನ ಮದುವೆಯಲ್ಲಿ ಮಿಂಚಿದ ಪಿಗ್ಗಿ, ಪಿಗ್ಗಿಯ ಲ್ಯಾವೆಂಡರ್ ಲುಕ್ ಗೆ ಫಿದಾ ಆದ ಜನತೆ

ಲಂಡನ್ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕಲೆ ವಿಶ್ವದ ಪ್ರತಿಷ್ಟಿತ ಗಣ್ಯರು ಭಾಗವಹಿಸಿದ್ದರು. ಹಾಲಿವುಡ್, ಬಾಲಿವುಡ್ ನ ಹಲವು ಮಂದಿ ನರೆದಿದ್ದರು. ಅದ್ರಲ್ಲಿ ಭಾರತದ ನಟಿ ಪ್ರಿಯಾಂಕ ಚೋಪ್ರಾ ಕೂಡಾ ಒಬ್ಬರು. ಥೇಮ್ಸ್ ನದಿ ಥಟದಲ್ಲಿ ನಡೆದ ಮದುವೆಗೆ ಪ್ರಿಯಾಂಕ ಚೋಪ್ರಾ ಲ್ಯಾವೆಂಡರ್ ಕಲರ್ ಸ್ಕರ್ಟ್, ಅದೇ ಬಣ್ಣದ ಬ್ಲೇಜರ್ ಧರಿಸಿ, ಹಾಲಿವುಡ್ ನ ತನ್ನ ಕೋ ಸ್ಟಾರ್ ಜೊತೆ ಆಗಮಿಸಿದ್ರು. ಈ ಫೋಟೋಗಳನ್ನು ಪಿಗ್ಗಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್  ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಟಿ-20 ಟೂರ್ನಿಯ 56 ನೇ ಪಂದ್ಯ: ಪಂಜಾಬ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಐಪಿಎಲ್ 11ನ ಲೀಗ್‌ ಹಂತದ ಕೊನೆಯ ಪಂದ್ಯ ಇದಾಗಿದ್ದು ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಲು ಪಂಜಾಬ್‌ ತಂಡವು ಭಾರಿ ಅಂತರದಲ್ಲಿ ಗೆಲುವು ಸಾಧಿಸಲೇ ಬೇಕಿದೆ. ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಚೆನ್ನೈ ತಂಡ, ಕಳೆದ ಪಂದ್ಯದಲ್ಲಿ ಸೋಲನ್ನಪ್ಪಿರುವ ಕಾರಣ ಈ ಪಂದ್ಯ ಗೆದ್ದು ಗೆಲುವಿನ ಹಾದಿ ಮರಳುವ ಪ್ರಯತ್ನದಲ್ಲಿದೆ.
ಶಾಮನೂರು ಶಿವಶಂಕರಪ್ಪಗೆ ಡಿಸಿಎಂ ಸ್ಥಾನ ನೀಡಿ: ವೀರಶೈವ ಮಹಾಸಭಾ

ಶಾಮನೂರು ಶಿವಶಂಕರಪ್ಪಗೆ ಡಿಸಿಎಂ ಸ್ಥಾನ ನೀಡಿ: ವೀರಶೈವ ಮಹಾಸಭಾ

ಕಾಂಗ್ರೆಸ್‌ನ ಹಿರಿಯ ಮುಖಂಡ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ. ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಪತ್ರ ಬರೆದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರಲ್ಲಿ ಬೇರೆ ಸಮುದಾಯಗಳಿಗಿಂತಲೂ ಹೆಚ್ಚು ಜನ ವೀರಶೈವ-ಲಿಂಗಾಯತ ಸಮುದಾಯದ ಶಾಸಕರು ಗೆದ್ದಿದ್ದು, ನಮ್ಮ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಉಪ ಮುಖ್ಯಮಂತ್ರಿಸ ಸ್ಥಾನ ಕೊಡಬೇಕು ಎಂದು ಪತ್ರಮುಖೇನ ಒತ್ತಾಯಿಸಲಾಗಿದೆ.