Short News

ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

ಡಿಜಿಟಲ್ ವ್ಯಾಲೆಟ್ ಗಳಾದ ಇಷ್ಟೆಲ್ಲಾ ಸುಲಭ ಮಾರ್ಗ ಮತ್ತು ಸೌಕರ್ಯಗಳನ್ನು ಡಿಜಿಟಲ್ ವ್ಯಾಲೆಟ್ಗಮಳು ನಮಗೆ ನೀಡಿದ್ದರೂ ಸಹ ಡಿಜಿಟಲ್ ವ್ಯಾಲೆಟ್ಗಷಳ ನಡುವೆ ಆಗುವ ವರ್ಗಾವಣೆ ಮಾತ್ರ ಸುಲಭದಲ್ಲ. ಆದರೆ, ಶೀಘ್ರದಲ್ಲೇ ಈ ಸನ್ನಿವೇಷ ಬದಲಾಗಲಿದೆ. ಆರ್ಬಿಐ ತನ್ನ ಶೀಘ್ರದಲ್ಲಿ ಬಿಡುಗಡೆ ಮಾಡಲಿರವ ಕೆಲವು ಮಾರ್ಗದರ್ಶಿಗಳಿಂದ ಡಿಜಿಟಲ್ ವ್ಯಾಲೆಟ್ ಗಳ ನಡುವೆ ಹಣ ಮರ್ಗಾವಣೆಯ ಪರಸ್ವರ ಕಾರ್ಯಸಾಧತೆ ಸುಲಭವಾಗಲಿದೆ ಎನ್ನುತ್ತವೆ ಎಕನಾಮಿಕ್ಸ್ ಟೈಮ್ಸ್ ನ ವರದಿ. ಇತ್ತೀಚಿನ ದಿನಗಳಲ್ಲಿ ಪೇಟೀಯಮ್, ಮೊಬಿಕ್ವಿಕ್ ಮತ್ತು ಫೋನ್ ಪೇ ಇತ್ಯಾದಿ ಡಿಜಿಟಲ್ ವ್ಯಾಲೆಟ್ಗಟಳು ಹಣ ವರ್ಗಾವಣೆ ಮಾಡುವ ವಿಧಾನಗಳನ್ನು ಸುಲಭಮಾಡಿವೆ

ಇಂದಿನ (ಜೂನ್ 20) ಪೆಟ್ರೋಲ್ ಬೆಲೆ ಇಳಿಕೆ , ಡೀಸೆಲ್ ಬೆಲೆ ಯಥಾಸ್ಥಿತಿ

ಇಂದಿನ (ಜೂನ್ 20) ಪೆಟ್ರೋಲ್ ಬೆಲೆ ಇಳಿಕೆ , ಡೀಸೆಲ್ ಬೆಲೆ ಯಥಾಸ್ಥಿತಿ

ದೆಹಲಿ: ಪೆಟ್ರೋಲ್: 76.27/ ಲೀಟರ್, ಡೀಸೆಲ್: 67.78/ ಲೀಟರ್. ಕೊಲ್ಕತ್ತಾ: ಪೆಟ್ರೋಲ್: 78.94 / ಲೀಟರ್ , ಡೀಸೆಲ್: 70.33 / ಲೀಟರ್. ಮುಂಬೈ: ಪೆಟ್ರೋಲ್: 84.06 / ಲೀಟರ್ , ಡೀಸೆಲ್: 72.13 / ಲೀಟರ್. ಚೆನ್ನೈ: ಪೆಟ್ರೋಲ್: 79.16 / ಲೀಟರ್ , ಡೀಸೆಲ್: 71.54 / ಲೀಟರ್. ಬೆಂಗಳೂರು: ಪೆಟ್ರೋಲ್: 77.51/ ಲೀಟರ್, ಡೀಸೆಲ್: 68.87 / ಲೀಟರ್. ಹೈದರಾಬಾದ್: ಪೆಟ್ರೋಲ್: 80.79 / ಲೀಟರ್, ಡೀಸೆಲ್: 73.67 / ಲೀಟರ್.
4,000mAh ಬ್ಯಾಟರಿ ಸಾಮರ್ಥ್ಯದ LG X5 ಫೋನ್ ಮಾರುಕಟ್ಟೆಗೆ ಎಂಟ್ರಿ..!

4,000mAh ಬ್ಯಾಟರಿ ಸಾಮರ್ಥ್ಯದ LG X5 ಫೋನ್ ಮಾರುಕಟ್ಟೆಗೆ ಎಂಟ್ರಿ..!

ಎಲ್ ಜಿ ಕಂಪನಿಯ ಮತ್ತೊಂದು ಸ್ಮಾರ್ಟ್ ಫೋನ್ LG X5(2018)ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಸೌತ್ ಕೋರಿಯಾದಲ್ಲಿ ಬಿಡುಗಡೆಗೊಂಡಿದ್ದು, ಕಳೆದ ವರ್ಷ ಬಿಡುಗಡೆಗೊಂಡ LG X5ನ ಅಪ್ ಗ್ರೇಡೆಡ್ ವರ್ಷನ್ ಆಗಿದೆ. ಇಗು ಎಲ್ ಜಿ ಪೇ ಸಪೋರ್ಟ್ ಹೊಂದಿದ್ದು, ಭಾರತದಲ್ಲಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿದೆ. ಸೌತ್ ಕೊರಿಯಾದಲ್ಲಿ LG X5 (2018) ನ ಬೆಲೆ KRW 363,000 ಆಗಿದೆ, ಭಾರತೀಯ ಮೌಲ್ಯಕ್ಕೆ ಕನ್ವರ್ಟ್ ಮಾಡಿದರೆ ಅದರ ಬೆಲೆ 22,356 ರೂ. 5.5-ಇಂಚಿನ 720 ಪಿಕ್ಸಲ್  ಸಾಮರ್ಥ್ಯ, 3MP ಹಿಂಭಾಗದ ಕ್ಯಾಮರಾ, HD ಡಿಸ್ಪ್ಲೇ ಮತ್ತು ಇದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.
ಮರಳು ಲೂಟಿಕೋರರ ಹಾವಳಿಗೆ ಸೇತುವೆ ಬಲಿ: 25 ಗ್ರಾಮಗಳ ಸಂಪರ್ಕ ಕಡಿತ

ಮರಳು ಲೂಟಿಕೋರರ ಹಾವಳಿಗೆ ಸೇತುವೆ ಬಲಿ: 25 ಗ್ರಾಮಗಳ ಸಂಪರ್ಕ ಕಡಿತ

ಭ್ರಷ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ,ಮರಳು ಲೂಟಿಕೋರರ ಹಾವಳಿ ಪರಿಣಾಮ ರಾಮನಗರದ ತಾಲೂಕಿನ ಕೂಟಗಲ್ ಸಮೀಪ ಕಣ್ವ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದಿದ್ದು,25ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ರಾಮನಗರದಿಂದ ಕೂಟಗಲ್,ಯರೇಹಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಈ ಸೇತುವೆ ಮೂಲಕ ಹಾದು ಹೋಗುತ್ತದೆ. ಸತತ ಮಳೆಯಿಂದ ಕಣ್ವ ನದಿಯಲ್ಲಿ ನೀರಿನ ಹರಿವು ಪುನಾರಂಭಗೊಂಡಿತ್ತು. ಸೋಮವಾರ ಸೇತುವೆ ಇದ್ದಕ್ಕಿದ್ದಂತೆ ಕುಸಿದಿದೆ. ಈ ಸೇತುವೆ ನಿರ್ಮಾಣ 1984ರಲ್ಲಿ ಆಗಿದೆ. ಆಗ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡ ಅವರು ನಿರ್ಮಾಣ ಮಾಡಿದ್ದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more