Short News

ನೂತನ ಆಪಲ್ 9.7 ಇಂಚ್ ಐಪ್ಯಾಡ್ ಫ್ಲಿಪ್ಕಾರ್ಟ್ ನಲ್ಲಿ ಪ್ರೀ-ಆರ್ಡರ್ ಗೆ ಲಭ್ಯ; ಬೆಲೆ ರೂ 28000

ನೂತನ ಆಪಲ್ 9.7 ಇಂಚ್ ಐಪ್ಯಾಡ್ ಫ್ಲಿಪ್ಕಾರ್ಟ್ ನಲ್ಲಿ ಪ್ರೀ-ಆರ್ಡರ್ ಗೆ ಲಭ್ಯ; ಬೆಲೆ ರೂ 28000

ಮಾರ್ಚ್ ತಿಂಗಳಾಂತ್ಯದಲ್ಲಿ ಶಿಕಾಗೋ ದಲ್ಲಿ ಕ್ರಿಯೇಟಿವ್ ಎಜುಕೇಶನ್ ಸಮಾರಂಭವೊಂದನ್ನು ಆಯೋಜಿಸಿದ ಆಪಲ್, ಅದೇ ಸಂದರ್ಭದಲ್ಲಿ ಆಪಲ್ ಪೆನ್ಸಿಲ್ ಸಪೋರ್ಟ್ ಹೊಂದಿರುವ ನೂತನ 9.7 ಇಂಚ್ ಐಪ್ಯಾಡ್ ಒಂದನ್ನು ಲಾಂಚ್ ಮಾಡಿತ್ತು. ಈ ಐಪ್ಯಾಡ್ ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಲಾಂಚ್ ಆಗಲಿದೆ ಎಂದು ಆಪಲ್ ತಿಳಿಸಿತ್ತು. ಇದೀಗ ಏಪ್ರಿಲ್ 11 ರಂದು ಈ ನೂತನ 9.7 ಇಂಚ್ ಐಪ್ಯಾಡ್ ಆನ್ಲೈನ್ ರೀಟೈಲರ್ ಆದ ಫ್ಲಿಪ್ಕಾರ್ಟ್ ನಲ್ಲಿ ಪ್ರೀ-ಆರ್ಡರ್ ಗೆ ಲಭ್ಯವಾಗಿದ್ದು, ಬೆಲೆ ರೂ 28000 ಆಗಿದೆ. ಪ್ರೀ-ಆರ್ಡರ್ ಮಾಡಲಾದ ಸಾಧನಗಳ ಶಿಪ್ಪಿಂಗ್ ಏಪ್ರಿಲ್ 20 ರಿಂದ ಪ್ರಾರಂಭವಾಗಲಿದೆ.
ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 26) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.63 / ಲೀಟರ್, ಡೀಸೆಲ್: 65.93 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.32 / ಲೀಟರ್ , ಡೀಸೆಲ್: 68.63 / ಲೀಟರ್. ಮುಂಬೈ: ಪೆಟ್ರೋಲ್: 82.48/ ಲೀಟರ್ , ಡೀಸೆಲ್: 70.20 / ಲೀಟರ್. ಚೆನ್ನೈ: ಪೆಟ್ರೋಲ್: 77.43 / ಲೀಟರ್ , ಡೀಸೆಲ್: 69.56 / ಲೀಟರ್. ಬೆಂಗಳೂರು: ಪೆಟ್ರೋಲ್: 75.82 / ಲೀಟರ್, ಡೀಸೆಲ್: 67.05/ ಲೀಟರ್. ಹೈದರಾಬಾದ್: ಪೆಟ್ರೋಲ್: 79.04/ ಲೀಟರ್, ಡೀಸೆಲ್: 71.63 / ಲೀಟರ್.
ದ್ವಾದಶ  ರಾಶಿಗಳ ಇಂದಿನ  (ಎಪ್ರಿಲ್ 27) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್ 27) ದಿನ ಭವಿಷ್ಯ

ಮೇಷ: ಹೊಸ ವ್ಯವಹಾರದ ಚಿಂತನೆ. ವೃಷಭ: ನಿಮ್ಮ ದೂರಾಲೋಚನೆಯೇ ಸಮಸ್ಯೆ ತಂದೊಡ್ಡಲಿದೆ. ಮಿಥುನ: ತವರಿಗೆ ಹೋಗಲು ಸಿದ್ಧತೆ. ಕರ್ಕ: ನಿಮ್ಮ ಧೋರಣೆಗಳಿಂದ ಸ್ನೇಹಿತರು ದೂರಾಗುವರು. ಸಿಂಹ: ಮನೆಯಲ್ಲಿ ಅಶಾಂತಿ. ಕನ್ಯಾ: ಹೂಡಿಕೆಗೆ ಸಕಾಲವಲ್ಲ. ತುಲಾ: ಅನಿರೀಕ್ಷಿತ ಧನಾಗಮನ. ವೃಶ್ಚಿಕ: ನಿಮ್ಮ ವರ್ತನೆಗೆ ಬೇಸತ್ತು ಮಕ್ಕಳು ದೂರಾಗಲಿದ್ದಾರೆ. ಧನು: ಸ್ನೇಹಿತ ರೊಂದಿಗೆ ಅಪ್ತರರೊಬ್ಬರ ಮನೆಗೆ ಭೇಟಿ ಸಾಧ್ಯತೆ. ಮಕರ: ಸಹೋದರಿಯರ ವಿರೋಧ ಕಟ್ಟಿಕೊಳ್ಳುವಿರಿ.  ಕುಂಭ: ಕುಟುಂಬದಲ್ಲಿ ಅಶಾಂತಿ. ಮಾನಸಿಕ ಕಿರಿಕಿರಿ. ಮೀನ: ಗೊಂದಲಗಳು ಉಂಟಾಗಿ ಸಮಸ್ಯೆಗಳು ಎದುರಾಗಲಿವೆ.
ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಇಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್ ಅವರನ್ನು ಭೇಟಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ದಕ್ಷಿಣ ಕೊರಿಯಾ ಮತು ಉತ್ತರ ಕೊರಿಯಾ ಗಡಿಯಲ್ಲಿರುವ ಪೆನಿನ್ಸುಲಾದ ಹಳ್ಳಿಯೊಂದರಲ್ಲಿ ಇಬ್ಬರೂ ಭೇಟಿಯಾಗಲಿದ್ದಾರೆ. ಉಭಯ ನಾಯಕರೂ ಅಣ್ವಸ್ತ್ರ ನಿಷೇಧದ ಬಗ್ಗೆ, ಶಾಮತಿ ಸಂಧಾನ, ಉಭಯ ರಾಷ್ಟ್ರಗಳ ಸಂಬಂಧ ವರದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ. 1950-53 ರ ನಂತರ ಗಡಿ ದಾಟಿ ದಕ್ಷಿಣ ಕೊರಿಯಾ ಮಣ್ಣಿನಲ್ಲಿ ಕಾಲಿಟ್ಟ ಮೊದಲ ಉತ್ತರ ಕೊರಿಯಾ ನಾಯಕ ಎಂಬ ಹೆಗ್ಗಳಿಕೆಗೆ ಕಿಮ್ ಜಾಂಗ್ ಪಾತ್ರರಾಗಿದ್ದಾರೆ.