Short News

ಗೂಗಲ್ ಅಸಿಸ್ಟೆಂಟ್ ಗೆ ಭಾರತೀಯರಿಂದ ಮದುವೆ ಪ್ರಪೋಸಲ್ !

ಗೂಗಲ್ ಅಸಿಸ್ಟೆಂಟ್ ಗೆ ಭಾರತೀಯರಿಂದ ಮದುವೆ ಪ್ರಪೋಸಲ್ !

ಲಕ್ಷಾಂತರ ಭಾರತೀಯರಿಗೆ ಗೂಗಲ್ ಅಸಿಸ್ಟೆಂಟ್ ಮೇಲೆ ಪ್ರೀತಿಯಾಗಿದೆ. ನಮ್ಮೆಲ್ಲಾ ಪ್ರಶ್ನೆಗಳಿಗೂ ಉತ್ತರಿಸೋ ಗೂಗಲ್ ಅಸಿಸ್ಟೆಂಟ್ ಗೆ 4.5 ಲಕ್ಷ ಭಾರತೀಯರು ಪ್ರಪೋಸ್ ಮಾಡಿದ್ದು, ತಮ್ಮನ್ನು ಮದುವೆ ಆಗುವಂತೆ ಕೇಳಿದ್ದಾರಂತೆ. ಗೂಗಲ್ ನ ವಾಯ್ಸ್ ಆ್ಯಕ್ಟಿವೇಟೆಡ್ ‘ಹೋಮ್' ಉದ್ಘಾಟನೆ ವೇಳೆ ಕಂಪನಿಯ ಉಪಾಧ್ಯಕ್ಷ ರಿಶಿ ಚಂದ್ರ ಈ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಓಕೆ ಗೂಗಲ್ ವಿಲ್ ಯು ಮ್ಯಾರಿ ಮಿ? ಅನ್ನೋ ಸವಾಲನ್ನು ಹಾಕಿದ್ದಾರಂತೆ ಭಾರತದ ಮಧ್ಯಮ ವರ್ಗದ ಬಳಕೆದಾರರು ಕೂಡ ಈ ಅ್ಯಪ್ ಅನ್ನು ಇಷ್ಟಪಡುತ್ತಿದ್ದಾರೆ. ಇನ್ನೂ 30 ಭಾಷೆಗಳಲ್ಲಿ ಇದನ್ನು ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ರಾಹುಲ್ ರ್ಯಾಲಿಯಲ್ಲಿ ಮೋದಿ ಪರ ಘೋಷಣೆ

ರಾಹುಲ್ ರ್ಯಾಲಿಯಲ್ಲಿ ಮೋದಿ ಪರ ಘೋಷಣೆ

ಇಂದು ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಹೊನ್ನಾವರದಲ್ಲಿ ರೋಡ್ ಶೋ ನಡೆಸಿದ ರಾಹುಲ್, ಶರಾವತಿ ಸರ್ಕಲ್ ಬಳಿ ಭಾಷಣ ಮಾಡುವಾಗ, ಬಿ.ಜೆ.ಪಿ. ಕಾರ್ಯಕರ್ತರು ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ. ‘ಮೋದಿ, ಮೋದಿ' ಘೋಷಣೆ ಮುಗಿಲು ಮುಟ್ಟಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ‘ರಾಹುಲ್ ರಾಹುಲ್' ಎಂದು ಘೋಷಣೆ ಕೂಗಿದ್ದಾರೆ. ಭಾಷಣ ಮಾಡುವಾಗ ಮೋದಿ ಪರ ಘೋಷಣೆ ಕೇಳಿ ಬಂದ ಹಿನ್ನಲೆಯಲ್ಲಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ರೋಡ್ ಶೋ ಮುಂದುವರೆಸಿದ್ದಾರೆ.
ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ಯಾವುದೇ ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡಲು ಸೂಚಿಸಲಾಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲದೆ ಅದನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸುವುದು. ಇದರಿಂದ ವ್ಯಾಯಾಮದ ವೇಳೆ ಸ್ನಾಯುಗಳ ಮೇಲೆ ಬಲ ಬೀಳುವ ಅಪಾಯವು ಕಡಿಮೆಯಾಗುವುದು. ಸ್ವಲ್ಪ ನಡೆದಾಡಿ, ಸೈಕಲ್ ಓಡಿಸಿ, ಅಥವಾ ಸ್ವಲ್ಪ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಅದರಿಂದ ಭಾರ ಎತ್ತುವಾಗ ಗಾಯಾಳುವಾಗದಂತೆ ದೇಹಕ್ಕೆ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು. ಇದು ಕ್ಯಾಲರಿ ದಹಿಸುವುದು ತುಂಬಾ ಕಡಿಮೆ. ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದಿಲ್ಲ. ಆದರೆ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಲು ಇದು ನೆರವಾಗುವುದು.
ಸ್ವಪಕ್ಷದವರೊಂದಿಗೆ ಜಗಳ ಮಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು

ಸ್ವಪಕ್ಷದವರೊಂದಿಗೆ ಜಗಳ ಮಾಡಿದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು

ಮೈಸೂರು ಚುನಾವಣಾ ಅಖಾಡದಲ್ಲಿ ದಿನೇ ದಿನೇ ಬಿಸಿ ಏರುತ್ತಿದೆ. ಇದರ ಪರಿಣಾಮವಾಗಿಯೇ ಇಂದು ಜಿಲ್ಲೆಯ ಎರಡು ಕಡೆ ರಾಜಕೀಯ ಸಂಬಂಧಿ ಗಲಾಟೆ ನಡೆದಿದೆ. ಇಂದು ನಗರದ ಕೆ.ಟಿ.ಸ್ಟ್ರೀಟ್ ನಲ್ಲಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಾಸು ಪರ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸುವ ವೇಳೆ ಇಬ್ಬರು ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. 37ನೇ ವಾರ್ಡ್ ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಜನರ ಎದುರೇ ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ ಹಾಗೂ ರಾಜೇಶ್ವರಿ ಶಿವಣ್ಣ ನಡುವೆ ವಾಗ್ವಾದ ನಡೆಸಿ ಕಿತ್ತಾಡಿಕೊಂಡಿದ್ದಾರೆ.