Short News

ವಿಶ್ವದ ಬೆಸ್ಟ್ ಫೋನ್ ರೆಡ್‌ಮಿ ನೋಟ್ 5 ಪ್ರೊ

ವಿಶ್ವದ ಬೆಸ್ಟ್ ಫೋನ್ ರೆಡ್‌ಮಿ ನೋಟ್ 5 ಪ್ರೊ

ಇಂದು ಮೊದಲ ಬಾರಿಗೆ ಭಾರತದಲ್ಲಿ ಮತ್ತು ಭಾರತಕ್ಕಾಗಿಯೇ ಸ್ಮಾರ್ಟ್‌ ಫೋನ್ ಅನ್ನು ಲಾಂಚ್ ಮಾಡಿದೆ. ರೆಡ್‌ಮಿ ನೋಟ್ 5ಪ್ರೊ ಸದ್ಯದ ಮಾರುಕಟ್ಟೆಯಲ್ಲಿರುವ ನೋಟ್ ಸರಣಿಯ ಟಾಪ್ ಎಂಡ್ ಫೋನ್ ಎಂದರೆ ತಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿರುವ ಟಾಪ್ ಎಂಡ್ ಫೋನ್‌ ಗಳ ವಿಶೇಷತೆ ಮತ್ತು ಗುಣಮಟ್ಟವನ್ನು ಈ ಫೋನ್ ಹೊಂದಿದೆ ಎನ್ನಲಾಗಿದೆ. ಇದಲ್ಲದೇ ರೆಡ್‌ಮಿ ನೋಟ್ 5ಪ್ರೊ ನೋಡಲು ಸುಂದರವಾಗಿದ್ದು, ಉತ್ತಮವಾಗಿದೆ. ಇದಲ್ಲದೇ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.
ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ತಮ್ಮ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ‍್ರಕರಣಕ್ಕೆ ಸಂಬಂಧಿಸಿ ಶಾಸಕ ಎನ್.ಎ.ಹ್ಯಾರಿಸ್ ಸದನದಲ್ಲಿ ಕ್ಷಮೆ ಕೋರಿದರು ಸದನದ ಸದಸ್ಯನಾದರೂ, ಮೊಹಮ್ಮದ್ ನಲಪಾಡ್‌ ತಂದೆಯೂ ಹೌದು, ಆತ ಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕಾನೂನು ಎಲ್ಲರಿಗೂ ಸಮಾನ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಮಗನ ರಕ್ಷಣೆಗಾಗಿ ನಾನು ಸರ್ಕಾರಕ್ಕೆ ಒತ್ತಡ ಹೇರಿಲ್ಲ. ಆತ ನನಗೆ ಸಿಕ್ಕಿದ್ದರೆ ನಾನೇ ಪೊಲೀಸ್ ಠಾಣೆಗೆ ಒಪ್ಪಿಸುತ್ತಿದ್ದೆ. ಸದನ, ಸರ್ಕಾರಕ್ಕೆ ಅಪಮಾನವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಎಲ್ಲರ ಮುಂದೆ ಹೇಳಿದ್ದಾರೆ.
ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರಿಯಾ ಕಣ್ಸನ್ನೆ ಬಗ್ಗೆನೇ ಮಾತನಾಡ್ತಿದ್ದಾರೆ.

ಹೀಗೆ, ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನರ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ.

ಸೇವೆ ಖಾಯಂಗೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ

ಸೇವೆ ಖಾಯಂಗೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ

ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ ಸೇವೆಯನ್ನು ಖಾಯಂಗೊಳಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಗುತ್ತಿಗೆ, ದಿನಗೂಲಿ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ಅನಿರ್ದಿಷ್ಟ ಮುಷ್ಕರ ಅರಂಭಿಸಿದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಸುಮಾರು 1.5 ಲಕ್ಷ ಸಂಖ್ಯೆಯಲ್ಲಿ ಈ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರು ಸೇರಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.