Short News

ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..!

ಕೇಬಲ್-ಇಂಟರ್ನೆಟ್ ಬೇಡ: ಬರಲಿದೆ ಜಿಯೋ ಹೋಮ್ TV..!

ರಿಲಯನ್ಸ್ ಮಾಲೀಕತ್ವ ಜಿಯೋ ಮತ್ತೊಂದು ಹೊಸ ಪ್ರಯತ್ನವನ್ನು ಮಾರುಕಟ್ಟೆಯಲ್ಲಿ ಮಾಡುತ್ತಿದೆ. ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಜಿಯೋ DTH ಬರುವುದಿಲ್ಲ, ಬರುತ್ತದೆ ಎನ್ನುವ ಎರಡು ಮಾತುಗಳು ಕೇಳಿ ಬರುತ್ತಿದ್ದು, ಇದರ ನಡುವೆಯೇ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲು ಜಿಯೋ ತುದಿಗಾಲಿನಲ್ಲಿ ನಿಂತಿದೆ. ರಿಲಯನ್ಸ್ ಜಿಯೋ ಎನಹಾನ್ಸ್ ಮಲ್ಟಿಮೀಡಿಯಾ ಬ್ರಾಡ್ ಕಾಸ್ಟ್ ಸರ್ವಿಸ್ ಮೂಲಕ ಜಿಯೋ ಹೋಮ್ ಟಿವಿಯನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದು ಹೈಬ್ರಿಡ್ ಟೆಕ್ನಾಲಜಿಯಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಬಳಕೆ ಮಾಡಿಕೊಳ್ಳಲು ಜಿಯೋ ಯೋಜನೆಯನ್ನು ರೂಪಿಸಲು ಮುಂದಾಗಿದೆ.
ನಗದು ಕೊರತೆ :  3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನಗದು ಕೊರತೆ : 3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಉಂಟಾಗಿದ್ದು, ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ತೆರಿಗೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ದೊರೆತ ಸುಮಾರು 3.2ಲಕ್ಷ ಕೋಟಿ ಹಣ ಚಲಾವಣೆಯಾಗದೇ ಉಳಿದಿದೆ. ತೆರಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳು ಇತ್ಯರ್ಥವಾಗುವವರೆಗೂ ಈ ಅಪಾರ ಪ್ರಮಾಣದ ನಗದು ಬಳಕೆಗೆ ಕಾನೂನು ತೊಡಕು ಉಂಟಾಗುತ್ತಿದೆ. ಈ ಪೈಕಿ ಸುಮಾರು 2.40 ಲಕ್ಷ ಕೋಟಿ ನೇರ ತೆರಿಗೆ ಹಣ ಮತ್ತು 1.18 ಲಕ್ಷ ಕೋಟಿ ಹಣ ಪರೋಕ್ಷ ತೆರಿಗೆ ಹಣವಾಗಿದೆ
ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ಮದ್ರಾಸ್ ಹೈಕೋರ್ಟ್ ವಕೀಲ ಕೆ.ಪಿ.ಪ್ರೇಮ್‌ ಅನಂತ್ ಎಂಬುವವನನ್ನು ತಿರುವನಂತಪುರದಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಹಾಗೇ ಈತ 2006ರಲ್ಲಿ ತಮಿಳುನಾಡಿನ ಆರ್‌.ಕೆ.ನಗರ ಕ್ಷೇತ್ರದಿಂದ BJPಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂದು ತಿಳಿದು ಬಂದಿದೆ. ಸಾಮಾನ್ಯ ಟಿಕೆಟ್‌ ಪಡೆದಿದ್ದ ಆರೋಪಿ ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ ಪ್ರವೇಶಿಸಿದ್ದ. ‘ನಾನು ವಕೀಲ, ನನಗೆ ಬಿಜೆಪಿ ಜತೆ ಸಂಪರ್ಕ ಇದೆ' ಎಂದು ಆರೋಪಿಯು ಸಹ ಪ್ರಯಾಣಿಕರಿಗೆ ಧಮಕಿ ಹಾಕಿದ್ದರು. ನಂತರ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ನೈಲ್ ಕಟರ್ ನುಂಗಿದ ಮಗು!

ನೈಲ್ ಕಟರ್ ನುಂಗಿದ ಮಗು!

ಚೈನಾದ ಚಂಗ್ ಚುನ್ ಎಂಬಲ್ಲಿ ಒಂದು ವರ್ಷದ ಮಗುವೊಂದು ನೈಲ್ ಕಟರ್ ನುಂಗಿದ ಘಟನೆ ನಡೆದಿದೆ. ತಾಯಿ ಉಪಯೋಗಿಸಿದ್ದ ನೈಲ್ ಕಟರ್ ಅನ್ನು ತೆಗೆದುಕೊಂಡು 16 ತಿಂಗಳ ಮಗು ಇದೊಂದು ಆಟವೆಂದು ಭಾವಿಸಿ ನೈಲ್ ಕಟರ್ ಅನ್ನು ನುಂಗಿಬಿಟ್ಟಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಹೊಟ್ಟೆಯೊಳಗೆ ಸೇರಿದ್ದ 2.4 ಇಂಚಿನ ನೈಲ್ ಕಟರ್ ನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು, ಮನೆಗೆ ವಾಪಸ್ಸಾಗಿದೆ.