ರಷ್ಯಾದಲ್ಲಿ ಟೆಲಿಗ್ರಾಂ ಆಪ್ಗೆ ನಿಷೇಧ: ಕಾರಣ ತಿಳಿದ್ರೆ ನೀವು ಇನ್ಸ್ಟಾಲ್ ಮಾಡ್ತೀರ..!
ತಂತ್ರಜ್ಞಾನ
- 10 days ago
ವಾಟ್ಸ್ಆಪ್ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಲಿಗ್ರಾಂ ಆಪ್ಗೆ ಸಂಕಷ್ಟ ಎದುರಾಗಿದೆ. ರಷ್ಯಾದಲ್ಲಿ ನಿಷೇಧಕ್ಕೆ ಗುರಿಯಾಗಿದೆ. ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳದ ಕಾರಣಕ್ಕೆ ರಷ್ಯಾ ಕೋರ್ಟ್ ಟೆಲಿಗ್ರಾಂ ಆಪ್ ಅನ್ನು ದೇಶದಲ್ಲಿ ನಿಷೇಧಿಸುವಂತೆ ಆದೇಶವನ್ನು ಹೊರಡಿಸಿದೆ. ಟೆಲಿಗ್ರಾಂ ಆಪ್ ಬಳಕೆದಾರರ ಸುರಕ್ಷತೆಗಾಗಿ ಗೂಢಲಿಪೀಕರಣ ಸೇವೆಯನ್ನು ನೀಡುತ್ತಿದ್ದು, ಆದರೆ ರಷ್ಯಾದ ಫೇಡರ್ ಸೆಕ್ಯೂರಿಟಿ ಸರ್ವೀಸ್ ಟೆಲಿಗ್ರಾಂ ಆಪ್ ಬಳಕೆದಾರರ ಮಾಹಿತಿಯನ್ನು ಪಡೆಯುವ ಸಲುವಾಗಿ ಗೂಢಲಿಪೀಕರಣದ ಕೀಯನ್ನು ನೀಡುವಂತೆ ಕೇಳಿತ್ತು. ಆದರೆ ನಿರಾಕರಿಸಿದ ಕಾರಣಕ್ಕಾಗಿ ನಿಷೇಧಕ್ಕೆ ಗುರಿಯಾಗಿದೆ.