Short News

ಶೀಘ್ರವೇ ಮಾರುಟಕ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ವಿವೊ X20 ಸ್ಮಾರ್ಟ್ ಫೋನ್..!

ಶೀಘ್ರವೇ ಮಾರುಟಕ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ವಿವೊ X20 ಸ್ಮಾರ್ಟ್ ಫೋನ್..!

ಮೊದಲ ಬಾರಿಗೆ ಮಾರುಕಟ್ಟೆಗೆ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್ ಫೋನ್, ವಿವೊ X20 ಯನ್ನು ಲಾಂಚ್ ಮಾಡಿದ್ದ ವಿವೋ. ಮಾರ್ಚ್ ನಲ್ಲಿ ಚೀನಾ ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಈ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಮುಂದಾಗಿದ್ದು, ಮೇ.29ರಂದು ಭಾರತದಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ. ವಿವೊ ಫಾಗ್ ಶಿಪ್ ಆಗಿರುವ ವಿವೊ X20 ಸ್ಮಾರ್ಟ್ ಫೋನ್ ಈಗಾಗಲೇ ಹಲವು ಮಾರುಕಟ್ಟೆಗಳಲ್ಲಿ ದೊರೆಯುತ್ತಿದೆ. ಈ ಸ್ಮಾರ್ಟ್ ಫೋನಿನಲ್ಲಿ 6.28 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಅಮೊಲೈಡ್ ಡಿಸ್ ಪ್ಲೇ ಇದಾಗಿದೆ.
ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ?

ಫೇಸ್‌ಬುಕ್‌ ಟೈಮ್‌ಲೈನಿನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಬಹುತೇಕರಿಗೆ ತಿಳಿದಿರುವುದಿಲ್ಲ. ಏಕೆಂದರೆ, ಫೇಸ್‌ಬುಕ್‌ನಲ್ಲಿನ ಎಲ್ಲ ಬಳಕೆದಾರರು ಬೇಕಾದಾಗಲೆಲ್ಲ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಪಿಡಿಎಫ್ ಫೈಲ್ ಶೇರ್ ಮಾಡಬಹುದಾದರೂ, ಫೇಸ್‌ಬುಕ್‌ ವಾಣಿಜ್ಯ ಪುಟ ಮತ್ತು ಗ್ರೂಪ್‌ನಲ್ಲಿ ಸಾಧ್ಯ.ಹಾಗಾಗಿ, ಇಂದಿನ ಲೇಖನದಲ್ಲಿ ಫೇಸ್‌ಬುಕ್‌ನಲ್ಲಿ ಪಿಡಿಎಫ್ ಮಾದರಿಯ ಫೈಲ್‍ಗಳನ್ನು ಶೇರ್ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಪ್ರಧಾನಿ ಮೋದಿ ಸ್ವಾಗತಿಸಲು ಓಡಿ ಬಂದ ದೀದಿ!

ಪ್ರಧಾನಿ ಮೋದಿ ಸ್ವಾಗತಿಸಲು ಓಡಿ ಬಂದ ದೀದಿ!

ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶಾಂತಿನಿಕೇತನದ ಹೆಲಿಪ್ಯಾಡ್‌ಗೆ ಬಂದಿಳಿದರು. ಮೋದಿ ಅವರು ಬಂದಿದ್ದನ್ನು ಕಂಡ ಮಮತಾ ಬ್ಯಾನರ್ಜಿ, ದೂರದಿಂದ ಬಿರುಸಾಗಿ ನಡೆದುಕೊಂಡು ಬಂದು ಅವರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಮೋದಿ ಅವರನ್ನು ಸ್ವಾಗತಿಸಲು ಓಡಿ ಬಂದ ದೀದಿಯ ಮುಖದಲ್ಲಿ ನಗು ತುಂಬಿಕೊಂಡಿತ್ತು. ಈ ವಿಡಿಯೋವನ್ನು ಹಂಚಿಕೊಂಡಿರುವ ಟ್ವಿಟ್ಟರಿಗರು, ಮಮತಾ ಅವರನ್ನು ಲೇವಡಿ ಮಾಡಿದ್ದಾರೆ. ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 1975ರ ಬಳಿಕ ಪಾಲ್ಗೊಂಡು ವೇದಿಕೆ ಏರಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಮಮತಾ ಪಾತ್ರರಾಗಿದ್ದಾರೆ.
ಕನ್ನಡದಲ್ಲೇ ಫಸ್ಟು..! ಹೇಗಿದೆ OnePlus 6..?

ಕನ್ನಡದಲ್ಲೇ ಫಸ್ಟು..! ಹೇಗಿದೆ OnePlus 6..?

ಭಾರತದಲ್ಲಿ ಇದೆ ಗುರುವಾರ ಭರ್ಜರಿ ಬಿಡುಗಡೆ ಕಂಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಒನ್‌ಪ್ಲಸ್ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ವೇಳೆಗೆ ಒನ್‌ಪ್ಲಸ್ ಕಂಪೆನಿ ಮತ್ತೊಂದು ಸಿಹಿಸುದ್ದಿ ನೀಡಿದೆ.  ಒನ್‌ಪ್ಲಸ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾದ ಮೊದಲ ವಾರದಲ್ಲಿ ಗ್ರಾಹಕರು ಎಸ್‌ಐ ಡೆಬಿಟ್ ಮತ್ತು ಕ್ರೆಡಿಟ್‌ಕಾರ್ಡ್ ಮೂಲಕ ಖರೀದಿಸಿದರೆ, 2,000 ರೂ ಕ್ಯಾಷ್‍ಬ್ಯಾಕ್ ಸೌಲಭ್ಯವಿರಲಿದೆ. ಅಷ್ಟೇ ಅಲ್ಲದೇ, ಗ್ರಾಹಕರು ಎಲ್ಲ ಪ್ರಮುಖ ಬ್ಯಾಂಕುಗಳಿಂದ 3 ತಿಂಗಳವರೆಗಿನ ವೆಚ್ಚರಹಿತ ಇಎಂಐ ಸೌಲಭ್ಯವನ್ನು ಪಡೆಯಲೂ ಅರ್ಹರಾಗಿರುತ್ತಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more