Short News

ವಾಟ್ಸ್ ಆಪ್ ಗುಂಪಿಗೆ ಸೇರಿವೆ ಹೊಸ ವೈಶಿಷ್ಟ್ಯಗಳು..!

ವಾಟ್ಸ್ ಆಪ್ ಗುಂಪಿಗೆ ಸೇರಿವೆ ಹೊಸ ವೈಶಿಷ್ಟ್ಯಗಳು..!

ವಾಟ್ಸ್ ಆಪ್ ನಲ್ಲಿ ಈಗ ಮತ್ತಷ್ಟು ವೈಶಿಷ್ಟ್ಯಗಳನ್ನು ಕಾಣಬಹುದು. ಅದರಲ್ಲೂ ಪ್ರಮುಖವಾಗಿ ವಾಟ್ಸ್ ಆಪ್ ಗುಂಪಿನಲ್ಲಿ ಹೆಚ್ಚು ಅವಕಾಶಗಳು ಲಭ್ಯವಾಗಿದೆ. ಈ ಹೊಸ ವೈಶಿಷ್ಟ್ಯಗಳು ಸ್ಟೇಬಲ್ ಆಂಡ್ರಾಯ್ಡ್ ಮತ್ತು iOS ವರ್ಷನ್ ಗಳಲ್ಲಿ ಲಭ್ಯವಿದೆ. ಹೆಚ್ಚಿನ ಹೊಸ ವೈಶಿಷ್ಟ್ಯತೆಗಳು ಈಗಾಗಲೇ ಆಂಡ್ರಾಯ್ಡ್ ಬೆಟಾ ಬಿಲ್ಡ್ಸ್ ಮತ್ತು ಸ್ಟೇಬಲ್ ವರ್ಷನ್ ಗಳಲ್ಲಿ ಕಾಣಬಹುದಾಗಿದೆ. ಕೆಲವನ್ನು ಮೊದಲಿನ ಬೆಟಾ ಬಿಲ್ಡ್ಸ್ ನಲ್ಲಿ ಕಾಣಬಹುದಾಗಿತ್ತು ಆದರೆ ನಂತರದ ದಿನಗಳಲ್ಲಿ ಅದನ್ನು ಮತ್ತೆ ನಿಷ್ಕ್ರಿಯಗೊಳಿಸಲಾಗಿತ್ತು.

ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

  • ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ 2018 ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 7,720 ಕೋಟಿ ನಷ್ಟ ಅನುಭವಿಸಿದೆ. ಇದು ಸತತ ಎರಡನೇ ತ್ರೈಮಾಸಿಕ ನಷ್ಟವಾಗಿದೆ.
  • ಡಿಸೆಂಬರ್ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ರೂ. 2416.37 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಎರಡುಪಟ್ಟು ಸಾಲ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 11,740 ಕೋಟಿ ಇತ್ತು. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 10.35% ರಿಂದ 10.9% ಕ್ಕೆ ಏರಿದೆ.
ಹೆಚ್ ಡಿಕೆ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, 1 ಲಕ್ಷ ಆಸನದ ವ್ಯವಸ್ಥೆ

ಹೆಚ್ ಡಿಕೆ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, 1 ಲಕ್ಷ ಆಸನದ ವ್ಯವಸ್ಥೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ  ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಬುಧವಾರ ಸಂಜೆ 4.30ಕ್ಕೆ ನಡೆಯಲಿದೆ. ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಸೋಮವಾರದಿಂದಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 80*40 ಅಡಿ ಗಾತ್ರದ ಬೃಹತ್ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಗಣ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಸೇರಿದಂತೆ ಸುಮಾರು ಸುಮಾರು 1 ಲಕ್ಷ ಮಂದಿಗೆ ಆಸನಗಳ ಏರ್ಪಾಡು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಪ್ರಮಾಣ ವಚನ ಸ್ವೀಕಾರ ವೀಕ್ಷಿಸಲು ಬೃಹತ್ ಗಾತ್ರದ ಸುಮಾರು 15ಕ್ಕೂ ಹೆಚ್ಚು ಎಲ್ಇಡಿ ಪರದೆಗಳನ್ನು ಹಾಕಲಾಗುತ್ತಿದೆ.
ವಿಶ್ವಕಪ್ 2018: ಮೊರಾಟಾ, ಫ್ಯಾಬ್ರಿಗೇಸ್ ಇಲ್ಲದ ಸ್ಪೇನ್ ತಂಡ

ವಿಶ್ವಕಪ್ 2018: ಮೊರಾಟಾ, ಫ್ಯಾಬ್ರಿಗೇಸ್ ಇಲ್ಲದ ಸ್ಪೇನ್ ತಂಡ

ಚೆಲ್ಸಿ ಪರ ಆಡುವ ಆಲ್ವಾರೋ ಮೊರಾಟ, ಸೆಸ್ಕ್ ಫ್ಯಾಬ್ರಿಗೇಸ್ ಅವರು ಈ ಬಾರಿಯ ವಿಶ್ವಕಪ್ ಆಡಲಿರುವ ಸ್ಪೇನ್ ತಂಡಕ್ಕೆ ಆಯ್ಕೆಯಾಗಿಲ್ಲ. ಮೊರಾಟಾ ಬದಲಿಗೆ ಅಟ್ಲೆಟಿಕೋ ಮ್ಯಾಡ್ರಿಡ್ ನ ಡಿಯಾಗೋ ಕೋಸ್ಟಾ, ವೆಲೆನ್ಸಿಯಾದ ರೊಡ್ರಿಗೋ ಮೊರೆನೋ ಹಾಗೂ ಸೆಲ್ಟಾ ವಿಗೋ ತಂಡದ ಲಗೋ ಆಸ್ಪಾಸ್ ಆಯ್ಕೆಯಾಗಿದ್ದಾರೆ. ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರದಲ್ಲಿ ಸ್ಪೇನ್ ಪ್ರಶಸ್ತಿ ಗೆಲ್ಲಬಹುದಾದ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಉತ್ತಮವಾಗಿ ಆಡಿದರೂ ಮೊರಾಟಾ ಆಯ್ಕೆಯಾಗಿಲ್ಲ. ಎರಡು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದ ಫ್ಯಾಬ್ರಿಗೇಸ್ ಗೆ ಮತ್ತೆ ಅದೃಷ್ಟ ಕೈಗೂಡಿಲ್ಲ.