Short News

ಬಹುನಿರೀಕ್ಷಿತ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಸಿಕ್ತು ಅಧಿಕೃತ ಚಾಲನೆ

ಬಹುನಿರೀಕ್ಷಿತ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಸಿಕ್ತು ಅಧಿಕೃತ ಚಾಲನೆ

ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌ ಲೂಪ್ ಕನಸಿಗೆ ಫ್ರಾನ್ಸ್‌ನ ಲೌಟಸ್‌ನಲ್ಲಿ ಅಧಿಕೃತ ಚಾಲನೆ ಸಿಕ್ಕಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಹೊಸ ಸಾರಿಗೆಯೊಂದು ಸೇವೆಗೆ ಲಭ್ಯವಾಗಲಿದೆ. ಹೈಪರ್ ಲೂಪ್ ಸಾರಿಗೆ ಅಭಿವೃದ್ಧಿಯ ಹೊಣೆ ಹೊತ್ತಿರುವ ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಂಸ್ಥೆಯು ಮೊದಲ ಹಂತವಾಗಿ 320ಮೀಟರ್ ಉದ್ದದ ಹೈಪರ್ ಲೂಪ್ ಕೊಳವೆಯನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥ ಕಾರ್ಯಕ್ಕೆ ಚಾಲನೆ ನೀಡಿದ್ದು, 2019ರ ವೇಳೆಗೆ ಇದನ್ನು 1 ಕಿ.ಮೀ ಗೆ ವಿಸ್ತರಣೆ ಮಾಡಲಿದೆಯಂತೆ.
'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

ಕನ್ನಡದ ಪ್ರತಿಭಾನ್ವಿತ ನಟ ಪ್ರದೀಪ್ ಅವರನ್ನ ಸಿನಿಮಾಗಳಿಗಿಂತ ಕ್ರಿಕೆಟ್ ಆಟದಲ್ಲೇ ಹೆಚ್ಚು ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರ ಎಂದೇ ಗುರುತಿಸಿಕೊಂಡಿರುವ ಪ್ರದೀಪ್ ಈಗ IPL ಅಖಾಡಕ್ಕೆ ಧುಮುಕಿದ್ದಾರೆ. ಹೌದು, ಐಪಿಎಲ್ ಕ್ರಿಕೆಟ್ ಪಂದ್ಯದ ಕಾಮೆಂಟರ್ ನಟ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡದ ಕಾಮೆಂಟರ್ ಆಗಿ ನಟ ಪ್ರದೀಪ್ ಗಮನ ಸೆಳೆದರು. ಕರ್ನಾಟಕದ ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್ ಮತ್ತು ವಿಜಯ ಭಾರಧ್ವಜ್ ಅವರ ಜೊತೆ ನಟ ಪ್ರದೀಪ್ ಕೂಡ ಕಾಮೆಂಟರ್ ಆಗಿ ಪಂದ್ಯವನ್ನ ವಿಶ್ಲೇಷಣೆ ಮಾಡಿದ್ದು ವಿಶೇಷವಾಗಿತ್ತು.
ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಕೆರೆಯಂತಾಗಿದ್ದ ಚಿನ್ನಸ್ವಾಮಿ ಮೈದಾನ ಮುಕ್ಕಾಲು ಗಂಟೆಯಲ್ಲೇ ಒಣಗಿತು!

ಇಡೀ ಜಗತ್ತಿನ ಯಾವ ಕ್ರಿಕೆಟ್ ಕ್ರೀಡಾಂಗಣದಲ್ಲಿಯೂ ಇಲ್ಲದಿರುವ ಸಬ್ ಏರ್ ಸಿಸ್ಟಂ ವ್ಯವಸ್ಥೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವುದು ನಿಮಗೆ ತಿಳಿದಿರುವ ವಿಚಾರ. ಸುರಿದ ಮಳೆ ನೀರು ಅಷ್ಟೇ ಬೇಗನೆ ಒಣಗುವ ವ್ಯವಸ್ಥೆ ಇದು. ಹೀಗಾಗಿ ಶನಿವಾರದ ಪಂದ್ಯಕ್ಕೂ ಮುನ್ನ ಮಳೆ ಸುರಿದು ನಿಂತರೂ ಆಟಕ್ಕೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿತ್ತು. ಚಿನ್ನಸ್ವಾಮಿ ಅಂಗಳ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಆದರೆ ಸಬ್ ಏರ್ ಸಿಸ್ಟಂ ಮೂಲಕ 3 ಲಕ್ಷ ಲೀಟರ್ ನೀರನ್ನು ಕೇವಲ 45 ನಿಮಿಷದಲ್ಲಿ ಸ್ಟೋರೇಜ್‌ ಟ್ಯಾಂಕ್‌ಗೆ ಪಂಪ್ ಮಾಡಿ ಮೈದಾನವನ್ನು ಒಣಗಿಸಲಾಯಿತು.
'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!

'ಟಗರು' ಗೆದ್ದರೂ ಸೂರಿಯ 'ಕಾಗೆ ಬಂಗಾರ' ನಿಂತು ಹೋಯ್ತು!

ನಿರ್ದೇಶಕ ಸೂರಿ 'ಕೆಂಡಸಂಪಿಗೆ' ಕಥೆಯನ್ನು ಮೂರು ಭಾಗದಲ್ಲಿ ಹೇಳುವ ಪ್ಲಾನ್ ಮಾಡಿದ್ದರು. ಅದೇ ರೀತಿ ಪಾರ್ಟ್ 2 'ಗಿಣಿಮರಿ ಕೇಸ್' ಚಿತ್ರ ಮೊದಲು 2015ರಲ್ಲಿ ಬಂದಿತ್ತು. ಇದರ ನಂತರ ಸೂರಿ ಪಾರ್ಟ್ 1 'ಕಾಗೆ ಬಂಗಾರ' ಶುರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಸೂರಿ ಈ ಚಿತ್ರವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಡಿ ಮಾನಿಟೈಸೇಶನ್ ನಿಂದ 'ಕಾಗೆ ಬಂಗಾರ' ಸಿನಿಮಾವನ್ನು ಮಾಡಲು ಸೂರಿಗೆ ಸಾಧ್ಯ ಆಗುತ್ತಿಲ್ಲವಂತೆ. ಯಾಕಂದ್ರೆ, ''ಗಿಣಿಮರಿ ಕೇಸ್ ಕಥೆಯ ಭಾಗದ ಅಂತ್ಯದಲ್ಲಿ 40 ಕೋಟಿ ರೂಪಾಯಿ ಹಣವನ್ನು ಬಾವಿಗೆ ಸುರಿಯಲಾಗುತ್ತದೆ. ಆದರೆ ಆ ವಿಷಯ ಈಗ ಅಪ್ರಸ್ತುತ ಎನ್ನಿಸುತ್ತದೆ ಎಂದಿದ್ದಾರೆ.