Short News

ಶಿಯೋಮಿ ಆರ್ಭಟಕ್ಕೆ TV ಮಾರುಕಟ್ಟೆಯೂ ಬಲಿ

ಶಿಯೋಮಿ ಆರ್ಭಟಕ್ಕೆ TV ಮಾರುಕಟ್ಟೆಯೂ ಬಲಿ

ಭಾರತೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಶಿಯೋಮಿಯೂ ಹೊಸದಾಗಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಇದರ ನಡುವೆ ಶಿಯೋಮಿ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ Mi TVಯನ್ನು ಪರಿಚಯ ಮಾಡಲಿದೆ. ಭಾರತದಲ್ಲಿ ಶಿಯೋಮಿ Mi TV 4 49mm, 55mm ಮತ್ತು 65mm ಆವೃತ್ತಿಯ ಮೂರು ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಫೆಬ್ರವರಿ 14 ರಂದು ಮಧ್ಯಾಹ್ನ 12ಕ್ಕೆ ಶಿಯೋಮಿ Mi TV 4 ಲಾಂಚ್ ಆಗಲಿದೆ.
ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರದಲ್ಲಿ ಭಾನುವಾರ ಬೆಳಗ್ಗೆ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಭಾನುವಾರ ಮುಂಜಾನೆ ವೃಕ್ಷ ಅಭಿಯಾನ ಟ್ರಸ್ಟ್‌ ವಿಜಯಪುರದಲ್ಲಿ 'ವೃಕ್ಷೋತ್ಥಾನ್ 2018' ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಿತ್ತು. ಹಸಿರು ‌ವಿಜಯಪುರ ನಿರ್ಮಾಣಕ್ಕಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ವಿಜಯಪುರದ ಗೋಳಗುಮ್ಮಟ ಆವರಣದಲ್ಲಿ ರಾಹುಲ್ ಗಾಂಧಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ನಟ ಯಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ  ಮೆಹುಲ್ ಚೋಕ್ಸಿ ಪತ್ರ

ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ ಮೆಹುಲ್ ಚೋಕ್ಸಿ ಪತ್ರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ತನ್ನ ಸಿಬ್ಬಂದಿಗಳಿಗೆ ಈ ಸಂಬಂಧ ಪತ್ರ ಬರೆದು ತಾನು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇನೆ. ನನ್ನ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವುಗಳೆಲ್ಲೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಪ್ರಸ್ತುತ ಸಿಬ್ಬಂದಿಗಳ ಬಾಕಿ ವೇತನ ಸಾಧ್ಯವಿಲ್ಲ ವಿವಿಧ ತನಿಖಾ ಸಂಸ್ಥೆಗಳು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಸತ್ಯಕ್ಕೆ ಯಾವತ್ತು ಜಯ ಎಂದಿದ್ದಾರೆ.
ಬಾಲಿವುಡ್ ನಟಿ ಶ್ರೀದೇವಿ ನಿಧನಕ್ಕೆ ಗಣ್ಯರ ಕಂಬನಿ

ಬಾಲಿವುಡ್ ನಟಿ ಶ್ರೀದೇವಿ ನಿಧನಕ್ಕೆ ಗಣ್ಯರ ಕಂಬನಿ

ಅಪರೂಪದ ಸೌಂದರ್ಯ, ಅಪ್ರತಿಮ ಪ್ರತಿಭೆಯ ಸಂಗಮವಾಗಿದ್ದ ಶ್ರೀದೇವಿಯವರು ತಮ್ಮ ನಟನಾ ಕೌಶಲ್ಯದಿಂದಲೇ ಹಿಂದಿ ಚಿತ್ರರಂಗವನ್ನು ಆಳಿದವರು ಮತ್ತು ಕೋಟ್ಯಂತರ ಚಿತ್ರಪ್ರೇಮಿಗಳ ಹೃದಯ ಸಾಮ್ರಾಜ್ಞಿಯಾಗಿ ಮೆರೆದವರು.

ಚಿತ್ರರಂಗದಲ್ಲಿ ಮಿಂಚಬಯಸುವ ಯುವ ಕಲಾವಿದೆಯರಿಗೆ ಮಾದರಿಯಂತಿದ್ದ ಅವರು, ತಮ್ಮಲ್ಲಿಯೇ ಎಷ್ಟೇ ಕುಂದುಕೊರತೆಗಳಿದ್ದರೂ ಎಲ್ಲವನ್ನೂ ಮೀರಿ ಯಶಸ್ಸಿನ ಹಿಮಾಲಯವೇರಿದ್ದರು ಮತ್ತು ತಾವು ಕೂಡ ಹಲವಾರು ಕನಸುಗಳನ್ನು ಕಂಡಿದ್ದರು.

ಕನ್ನಡದಲ್ಲಿಯೂ 6 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ 54ರ ಹರೆಯದ ಬಹುಭಾಷಾ ನಟಿ ಶ್ರೀದೇವಿ ಹಠಾತ್ ನಿಧನ ಭಾರತೀಯ ಚಿತ್ರರಂಗದ ಮೇಲೆ ಬರಸಿಡಿಲಿನಂತೆ ಬಂದು ಎರಗಿದೆ.