Short News

ಮುಳುಗಿದ ಟಿವಿ ಮಾರುಕಟ್ಟೆ, ರೂ.39,000ಕ್ಕೆ ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ!

ಮುಳುಗಿದ ಟಿವಿ ಮಾರುಕಟ್ಟೆ, ರೂ.39,000ಕ್ಕೆ ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ!

ಚೀನಾವನ್ನು ಬಿಟ್ಟರೇ ಭಾರತದಲ್ಲಿಯೇ ಮೊದಲ ಬಾರಿಗೆ Mi TV ಯನ್ನು ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಶಿಯೋಮಿ ಟಿವಿ ಲಾಂಚ್ ಮಾಡಲಿದೆ ಎನ್ನುವ ಮಾತು ಕೇಳುತ್ತಿದ್ದರೂ ಲಾಂಚ್ ಆಗಿರಲಿಲ್ಲ.  Mi LED TV 4 ಸ್ಮಾರ್ಟ್ ಟಿವಿಯಾಗಿದ್ದು, 2GB RAM + 8GB ಇಂಟರ್ ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಬ್ಲೂಟೂತ್ ಕನೆಕ್ಟ್ ಮತ್ತು Wi Fi ಕನೆಕ್ಟ್ ಮಾಡಬಹುದಾಗಿದ್ದು, ಎರಡು USB ಪೋರ್ಟ್ ಗಳನ್ನು ಕಾಣಬಹುದಾಗಿದೆ. ಅಲ್ಲದೇ 100 MBPS ವೇಗದ ಇಂಟರ್ನೆಟ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಟಿವಿ ಒಂದು ರುಪಾಯಿ ಕಾಯಿನ್ ನಷ್ಟು ಅಂದರೆ 4.9mm ನಷ್ಟು ತೆಳುವಾಗಿದೆ.
ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ

ಇನ್ಮುಂದೆ ನಿಮ್ಮ ಹೀರೋ ಬೈಕಿಗೆ ಬೇಕಾದ ಸ್ಪೇರ್‌ಪಾರ್ಟ್‌ಗಳನ್ನು ಇಲ್ಲಿ ಖರೀದಿಸಿ

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ ಗ್ರಾಹಕರಿಗೆ ಅನುಕೂಲವಾಗುವಂತೆ ತಮ್ಮ ವಾಹನಗಳಿಗೆ ಬೇಕಾಗಿರುವ ಎಲ್ಲಾ ಸ್ಪೇರ್ ಪಾರ್ಟ್ ಗಳನ್ನು ಒಂದೆ ಜಾಗದಲ್ಲಿ ಖರೀದಿಸಲು ವೆಬ್‍‍ಸೈಟ್‍‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಬಿಡುಗಡೆಮಾಡಿರುವಂತಹ ವೆಬ್‍‍ಸೈಟ್‍‍ಗೆ HGP (ಹೀರೋ ಜೆನ್ಯೂನ್ ಪಾರ್ಟ್ಸ್) ಮಾರ್ಟ್ ಎಂದು ಹೆಸರಿಡಲಾಗಿದೆ. ಹೀರೋ ಮೋಟೋಕಾರ್ಪ್ ಸಂಸ್ಥೆಯು ಡೆಲ್ಹಿವರಿ ಎಂಬ ಇ ಕಾಮರ್ಸ್ ಎಂಬ ತಂಡದೊಂದಿಗೆ ಕೈ ಜೋಡಿಸಿದ್ದು, ಇದರ ಮೂಲಕವೆ ದೇಶದೆಲ್ಲೆಡೆ ಕಂಪೆನಿಯ ಸ್ಪೇರ್‍‍ಪಾರ್ಟ್‍ಗಳನ್ನು ಡೆಲಿವರಿ ಮಾಡಲಾಗುತ್ತದೆಯಂತೆ.
ಕರ್ನಾಟಕ ಎಲೆಕ್ಷನ್  : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ಎಲೆಕ್ಷನ್ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಶುಕ್ರವಾರ ಜೆಡಿಎಸ್‌ 58 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ವಲಸೆ ಬಂದ ಹಲವು ನಾಯಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜಿ.ಎಚ್.ರಾಮಚಂದ್ರ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದ ನಟ ಶಶಿಕುಮಾರ್ ಹೊಸದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ. 
ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ (impeachment) ನಿಲುವಳಿಯನ್ನು ಕಾಂಗ್ರೆಸ್ ನೇತೃತ್ವದ ಏಳು ವಿಪಕ್ಷಗಳು ಮಂಡಿಸಿವೆ.

ಭಾರತೀಯ ಸಂವಿಧಾನದ 217 ಮತ್ತು 124(4)ನೇ ವಿಧಿಯ ಅಡಿಯಲ್ಲಿ ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ಮಹಾಭಿಯೋಗ ನಿಲುವಳಿ ಮಂಡಿಸಲಾಗಿದೆ.

ಕಾಂಗ್ರೆಸ್, ನ್ಯಾಶ್ನಲ್ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಮತ್ತು ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ಈ ನಿಲುವಳಿಗೆ ಸಹಿ ಮಾಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್, '64 ಸಂಸದರು ಈ ನಿಲುವಳಿಗೆ ಸಹಿ ಮಾಡಿದ್ದಾರೆ.