Short News

ಯೂಟ್ಯೂಬ್ ವಿಡಿಯೋ ಕದ್ದು ತಮ್ಮದೆನ್ನುವವರಿಗೆ ಅಂಕುಶ ಹಾಕಲು ಬಂದಿದೆ ಹೊಸ ವಿಧಾನ..!

ಯೂಟ್ಯೂಬ್ ವಿಡಿಯೋ ಕದ್ದು ತಮ್ಮದೆನ್ನುವವರಿಗೆ ಅಂಕುಶ ಹಾಕಲು ಬಂದಿದೆ ಹೊಸ ವಿಧಾನ..!

ಎಷ್ಟೋ ಬಾರಿ ಯೂಟ್ಯೂಬ್ನಲ್ಲಿ ನೋಡಿದ ವಿಡಿಯೋಗಳೇ ಬೇರೆ ಬೇರೆ ಚಾನಲ್‌ಗಳ ಹೆಸರಿನ ಮೂಲಕ ಬರುತ್ತವೆ. ಇದರಿಂದ ಯೂಟ್ಯೂಬ್‌ ಬಳಕೆದಾರರಿಗೆ ಬಹಳಷ್ಟು ಕಿರಿಕಿರಿಯಾಗುತ್ತಿತ್ತು. ಇದಲ್ಲದೇ ಯೂಟ್ಯೂಬ್‌ನಲ್ಲಿಯೇ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಸ್ವಲ್ಪ ಎಡಿಟಿಂಗ್ ಮಾಡಿ ಮತ್ತೇ ಅದೇ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಸೃಜನಶೀಲವಾಗಿ ನೈಜವಾಗಿ ವಿಡಿಯೋಗಳನ್ನು ಸೃಷ್ಟಿಸಿದವರಿಗೆ ಬಹಳಷ್ಟು ನಷ್ಟ ಆಗುತ್ತಿತ್ತು. ಆದ್ದರಿಂದಲೇ ಯೂಟ್ಯೂಬ್ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಇ

ಪದವೀಧರರಿಗೆ ಇಂಡ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

ಪದವೀಧರರಿಗೆ ಇಂಡ್ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ

ಇಂಡ್ ಬ್ಯಾಂಕ್ 15 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 30, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇಂಡ್-ಬ್ಯಾಂಕ್ ಮರ್ಚೆಂಟ್ ಬ್ಯಾಂಕಿಂಗ್ ಸರ್ವಿಸ್ ಲಿಮಿಟೆಡ್ ಸೆಕ್ರೆಟೇರಿಯಲ್ ಆಫೀಸರ್ 5, ಡೀಲರ್ 10 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ "ರಾಜಣ್ಣನ ಮಗ" ಮೂಲಕ ಮತ್ತೆ ಬಂದ್ರು ನಿರ್ದೇಶಕ ಕೋಲಾರ ಸೀನು

ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ "ರಾಜಣ್ಣನ ಮಗ" ಮೂಲಕ ಮತ್ತೆ ಬಂದ್ರು ನಿರ್ದೇಶಕ ಕೋಲಾರ ಸೀನು

'ಜಸ್ಟ್​ ಮದ್ವೇಲಿ' ಎನ್ನುವ ಚಿತ್ರ ನಿರ್ದೇಶಿಸಿದ್ದ ಕೋಲಾರ ಸೀನು, ಈಗ ನಾಲ್ಕು ವರ್ಷಗಳ ಬಳಿಕ ಮತ್ತೊಂದು ಸಿನೆಮಾ ಮಾಡಿದ್ದಾರೆ. ಈ ಚಿತ್ರಕ್ಕೆ 'ರಾಜಣ್ಣನ ಮಗ' ಎಂದು ಟೈಟಲ್ ಇಡಲಾಗಿದೆ. ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಅಪ್ಪಳಿಸಲಿರುವ 'ರಾಜಣ್ಣನ ಮಗ' ಚಿತ್ರದ ಟೀಸರ್​ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಆ್ಯಕ್ಷನ್, ಥ್ರಿಲ್ಲರ್​ನಿಂದ ಕೂಡಿರುವ ಟೀಸರ್​ಗೆ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರ ಗಮನ ಸೆಳೆದಿದೆ. ಬಿಡುಗಡೆಯಾದ ಕೇವಲ ಒಂದು ದಿನದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸಾರಿ ವೀಕ್ಷಣೆಯಾಗಿದೆ.
ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

ನಿಮ್ಮ ತಲೆಯಲ್ಲಿರುವ ಕೊಳಕನ್ನು ಧೂಳನ್ನು ನಿವಾರಿಸಲು ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ಕೂದಲಿಗೆ ಹಚ್ಚುವುದು ಉತ್ತಮ ವಿಧಾನವಾಗಿದೆ. ತಲೆಯಲ್ಲಿರುವ ಈ ಕೊಳಕು ತಲೆಹೊಟ್ಟನ್ನು ಉಂಟುಮಾಡುತ್ತದೆ. ಆದ್ದರಿಂದ ಉತ್ತಮವಾಗಿ ಎಣ್ಣೆ ಮಸಾಜ್ ಅನ್ನು ನಿಮ್ಮ ಕೂದಲಿಗೆ ನೀವು ಮಾಡಬೇಕಾಗುತ್ತದೆ. ನಿಮ್ಮ ಕೂದಲಿನ ಕಿರಿಕಿರಿ ಮತ್ತು ತುರಿಕೆಯನ್ನು ನಿವಾರಣೆ ಮಾಡಲು ಲಿಂಬೆರಸ ಸೂಕ್ತವಾದುದು. ಇದು ತಲೆಹೊಟ್ಟನ್ನು ಬೇಗನೇ ನಿವಾರಿಸುತ್ತದೆ. ಹಾಗೇ ರೋಸ್‌ಮೇರಿ ಎಣ್ಣೆಯು ಅತ್ಯುನ್ನತ ಶಮನಕಾರಿ ಗುಣವನ್ನು ಹೊಂದಿದ್ದು ಇದನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡುವುದರಿಂದ ಇದು ತುರಿಕೆ ಮತ್ತು ಒಣ ತಲೆಬುಡದ ಸಮಸ್ಯೆ ನಿವಾರಿಸುತ್ತದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more