ಬೇಗ ಐಪಿಎಲ್ ಆಡುವಂತಾಗಲಿ ಎಂದು ಐರಿಸ್ ಆಟಗಾರನಾಗಿ ಹಾರೈಸಿದ ಹಾರ್ದಿಕ್
ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಐರ್ಲೆಂಡ್ ಯುವ ಆಟಗಾರನಿಗೆ ತನ್ನ ಬ್ಯಾಟ್ ಒಂದನ್ನ ಉಡುಗೊರೆಯಾಗಿ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಭಾರತ ತಂಡ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು ಆದರೂ ಐರಿಸ್ ಯುವ ಬ್ಯಾಟರ್ ಹ್ಯಾರಿ ಟೆಕ್ಟರ್ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿತ್ತು. ಹ್ಯಾರಿ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 64 ರನ್ ಸಿಡಿಸಿ ಪಂದ್ಯ ಒಂದು ಕಡೆಗೆ ವಾಲುವುದನ್ನ ತಪ್ಪಿಸಿ, ಒಂಚೂರು ಮನರಂಜನೆ ಸಿಗುವಂತೆ ಮಾಡಿದ್ದರು. ಅವರ ಅರ್ಧಶತಕದ ನೆರವಿನಿಂದ ಐರ್ಲೆಂಡ್ 12 ಓವರ್ಗಳಲ್ಲಿ 108 ರನ್ಗಳಿಸಿತ್ತು. ಐರಿಸ್ ಇನ್ನಿಂಗ್ಸ್ನಲ್ಲಿ ಹ್ಯಾರಿ(64) ಹೊರತುಪಡಿಸಿದರೆ, 18 ರನ್ಗಳಿಸಿದ ಟಕ್ಕರ್ ತಂಡದ ಎರಡನೇ ಗರಿಷ್ಠ ಸ್ಕೋರರ್ ಆಗಿದ್ದರು.