Sports Short News

ಭಾರತ vs ಆಸೀಸ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಚಾಹಲ್ ಕಮಾಲ್!

ಭಾರತ vs ಆಸೀಸ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಚಾಹಲ್ ಕಮಾಲ್!

ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಚಾಹಲ್ ಇತಿಹಾಸ ನಿರ್ಮಿಸಿದರು. ಶುಕ್ರವಾರ (ಜನವರಿ 18) ಎಂಸಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಭರ್ಜರಿ 6 ವಿಕೆಟ್ ಉರುಳಿಸಿದರು. ಈ ಸಾಧನೆಯಿಂದ ಚಾಹಲ್ ಎಂಸಿಜಿಯಲ್ಲಿ ನಡೆದ ಏಕದಿನ ಇನ್ನಿಂಗ್ಸ್‌ ಒಂದರಲ್ಲಿ ಅಧಿಕ ವಿಕೆಟ್ ಪಡೆದ ಸಾಧಕರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.  
ಅಧಿಕ ಗೋಲ್ ದಾಖಲೆಯಲ್ಲಿ ಲಿಯೋನೆಲ್ ಮೆಸ್ಸಿ ಮೀರಿಸಿದ ಸುನಿಲ್ ಛೆಟ್ರಿ

ಅಧಿಕ ಗೋಲ್ ದಾಖಲೆಯಲ್ಲಿ ಲಿಯೋನೆಲ್ ಮೆಸ್ಸಿ ಮೀರಿಸಿದ ಸುನಿಲ್ ಛೆಟ್ರಿ

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬು ಧಾಬಿಯಲ್ಲಿರುವ ಅಲ್-ನಹ್ಯಾನ್ ಸ್ಟೇಡಿಯಂನಲ್ಲಿ ಭಾನುವಾರ (ಜನವರಿ 6) ನಡೆದ ಎಎಫ್‌ಸಿ ಏಷ್ಯನ್ ಕಪ್ 2019 ಫುಟ್ಬಾಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಥೈಲ್ಯಾಂಡ್ ತಂಡವನ್ನು 4-1ರಿಂದ ಸೋಲಿಸಿತು. ಈ ಗೆಲುವು ಭಾರತದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಅವರನ್ನು ವಿಶ್ವ ಮಟ್ಟದಲ್ಲಿ ಮೇಲಕ್ಕೆ ಎತ್ತಿದೆ. ಭಾನುವಾರ ನಡೆದ ಪಂದ್ಯದಲ್ಲಿ ಛೆಟ್ರಿ ಎರಡು ಗೋಲ್‌ಗಳನ್ನು ಬಾರಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಸುನಿಲ್ ಛೆಟ್ರಿಯ ಎರಡು ಗೋಲ್‌ಗಳ ಸಾಧನೆ ಅವರನ್ನು ವಿಶ್ವದ ಅಧಿಕ ಗೋಲ್‌ ಸರದಾರರಲ್ಲಿ ಎರಡನೇ ಸ್ಥಾನದಲ್ಲಿ ತಂದು ನಿಲ್ಲಿಸಿದೆ.  
ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ

ಇದು ನನ್ನ ಜೀವನದ ಅತ್ಯುತ್ತಮ ಸಾಧನೆ : ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾದವರ ವಿರುದ್ಧದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾದಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದ್ದು, ಇದು ನನ್ನ ಅತ್ಯುತ್ತಮ ಸಾಧನೆಯಲ್ಲಿ ಒಂದು ಎಂದು ವಿರಾಟ್ ಹೆಮ್ಮೆಯಿಂದ ಹೇಳಿದ್ದಾರೆ. ಮಳೆಯಿಂದಾಗಿ ನಾಲ್ಕನೇ ಟೆಸ್ಟ್ ಡ್ರಾ ಆಗಿದ್ದರಿಂದ, ಮುಕ್ತಾಯವಾದ ಸರಣಿಯನ್ನು ವಿರಾಟ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ 2-1 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ನಾಲ್ಕನೇ ಟೆಸ್ಟ್ ನಲ್ಲಿ ಮಳೆಯ ಆಟ ನಡೆಯದಿದ್ದರೆ, ಫಾಲೋ ಆನ್ ಹೇರಿದ್ದ ಭಾರತ ಖಂಡಿತ ಗೆಲ್ಲುವ ಅವಕಾಶ ಪಡೆದಿತ್ತು.
ಒಂದೇ ಓವರ್‌ನಲ್ಲಿ 5 ಸಿಕ್ಸ್‌ ಚಚ್ಚಿದ ಕಿವೀಸ್ ಆಲ್‌ ರೌಂಡರ್ ನೀಶಮ್

ಒಂದೇ ಓವರ್‌ನಲ್ಲಿ 5 ಸಿಕ್ಸ್‌ ಚಚ್ಚಿದ ಕಿವೀಸ್ ಆಲ್‌ ರೌಂಡರ್ ನೀಶಮ್

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಮೌಂಟ್‌ ಮಾಂಗನ್ಯುಯಿಯಲ್ಲಿರುವ ಬೇ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯವನ್ನಾಡುತ್ತಿದೆ. ಮೊದಲ ಏಕದಿನ ಪಂದ್ಯದ ವೇಳೆ ನ್ಯೂಜಿಲ್ಯಾಂಡ್ ಆಟಗಾರ ಜೇಮ್ಸ್ ನೀಶಮ್ ಓವರ್‌ನಲ್ಲಿ 5 ಸಿಕ್ಸ್‌ ಚಚ್ಚಿ ಗಮನ ಸೆಳೆದಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ (ಜನವರಿ 3) ನಡೆಯಿತು. ನೀಶಮ್ ಸತತ 5 ಸಿಕ್ಸ್ ಬಾರಿಸುವ ಮೂಲಕ ತಾನು ಫಾರ್ಮ್‌ಗೆ ಮರಳಿರುವುದನ್ನು ಸಾರಿದರು. 28ರ ಹರೆಯದ ಜೇಮ್ಸ್ ಜೂನ್ 2017ರ ಬಳಿಕ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯವಿದು.  
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more