Automobile Short News

ಒಳ್ಳೆ ರಸ್ತೆಗಳೆ ಅಪಘಾತಕ್ಕೆ ಕಾರಣವಂತೆ ಈ ಸಚಿವರಿಗೆ..!

ಒಳ್ಳೆ ರಸ್ತೆಗಳೆ ಅಪಘಾತಕ್ಕೆ ಕಾರಣವಂತೆ ಈ ಸಚಿವರಿಗೆ..!

ಹೊಸ ಮೋಟಾರ್ ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಭಾರೀ ಪ್ರಮಾಣದ ದಂಡವನ್ನು ದೇಶಾದ್ಯಂತ ವಿಧಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಕುಡಿದು ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ರೂ.17,000 ದಂಡ ವಿಧಿಸಲಾಗಿತ್ತು. ಈ ಭಾರೀ ಪ್ರಮಾಣದ ದಂಡದಿಂದಾಗಿ ಜನರು ಕಂಗಾಲಾಗಿದ್ದಾರೆ. ಆದ ಕಾರಣ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ನಿನ್ನೆಯಷ್ಟೇ ಸಾರಿಗೆ ಇಲಾಖೆಗೆ ಈ ಭಾರೀ ಪ್ರಮಾಣದ ದಂಡದ ಮೊತ್ತವನ್ನು ಕಡಿಮೆಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಗುಜರಾತ್‍ ಮಾದರಿಯಂತೆ ದಂಡದ ಮೊತ್ತವನ್ನು ಕರ್ನಾಟಕದಲ್ಲಿಯೂ ಕಡಿಮೆಗೊಳಿಸಲಾಗುವುದೆಂದು ಹೇಳಿದ್ದಾರೆ.

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ವಾಹನ ಉದ್ಯಮ ಕುಸಿತ ಸಣ್ಣ ಸಮಸ್ಯೆಯೆಂದ ಕೇಂದ್ರ ಸಚಿವ

ಭಾರತದ ಆಟೊ ಮೊಬೈಲ್ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ನಿಧಾನಗತಿಯ ಪ್ರಗತಿಯನ್ನು ದಾಖಲಿಸಿ ನಷ್ಟವನ್ನು ಅನುಭವಿಸುತ್ತಿದೆ. 2018ರ ಕೊನೆಯ ಭಾಗದಲ್ಲಿ ಆರಂಭವಾದ ನಿಧಾನಗತಿಯ ಪ್ರಗತಿಯು ಇಂದಿನವರೆಗೂ ಮುಂದುವರೆದಿದೆ. ನಿಧಾನಗತಿಯ ಕಾರಣದಿಂದಾಗಿ ಆರ್ಥಿಕ ಹಿಂಜರಿತದ ಭೀತಿಯನ್ನು ಎದುರಿಸುತ್ತಿದೆ. ಇದು ನಿರುದ್ಯೋಗ ಸಮಸ್ಯೆಗೂ ಕಾರಣವಾಗುವ ಸಾಧ್ಯತೆಗಳಿವೆ. ಮಾರಾಟದಲ್ಲಿನ ಕುಸಿತದ ಪರಿಣಾಮವಾಗಿ ಬಹುತೇಕ ವಾಹನ ಕಂಪನಿಗಳು ಆರ್ಥಿಕ ನಷ್ಟವನ್ನು ಎದುರಿಸುತ್ತಿವೆ. ಅನೇಕ ಕಂಪನಿಗಳ ಮಾರಾಟ ಪ್ರಮಾಣ ಕುಸಿದಿರುವ ಕಾರಣ ಅನೇಕ ಡೀಲರ್‍‍ಗಳು ತಮ್ಮ ಡೀಲರ್‍‍ಶಿಪ್‍‍ಗಳನ್ನು ಮುಚ್ಚುತ್ತಿದ್ದಾರೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿರುವ ಕಾರುಗಳಿವು

ಭಾರತದ ಆಟೋ ಮೊಬೈಲ್ ಉದ್ಯಮವು ನಿರಂತರವಾಗಿ ಕುಸಿತವನ್ನು ಕಾಣುತ್ತಿದೆ. ಕಾರು ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿವೆ. ಹಳೆಯ ವಾಹನಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿವೆ. ಹಬ್ಬಗಳ ಈ ಸಮಯದಲ್ಲಿ ಹಲವು ಕಂಪನಿಗಳು ವಿಶೇಷ ರಿಯಾಯಿತಿಯನ್ನು ನೀಡುತ್ತಿವೆ. ಈ ತಿಂಗಳು ಹ್ಯುಂಡೈ ಗ್ರಾಂಡ್ ಐ10 ನಿಯೊಸ್, ಮಾರುತಿ ಸುಜುಕಿ ಎಕ್ಸ್ ಎಲ್ 6, ಕಿಯಾ ಸೆಲ್ಟೋಸ್, ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಸೇರಿದಂತೆ ಹಲವಾರು ಕಾರುಗಳನ್ನು ಬಿಡುಗಡೆಗೊಳಿಸಲಾಯಿತು.

ಡೀಲರ್ ಯಾರ್ಡ್ ತಲುಪುತ್ತಿರುವ ಹ್ಯುಂಡೈ ಗ್ರಾಂಡ್ ಐ10 ನಿಯೋಸ್

ಡೀಲರ್ ಯಾರ್ಡ್ ತಲುಪುತ್ತಿರುವ ಹ್ಯುಂಡೈ ಗ್ರಾಂಡ್ ಐ10 ನಿಯೋಸ್

ಮೊದಲಿಗೆ ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ಕಾರ್ ಅನ್ನು ಕೊರಿಯಾ ಸೇರಿದಂತೆ ಉಳಿದ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಅನಾವರಣದೊಂದಿಗೆ ಹ್ಯುಂಡೈ ಕಂಪನಿಯು ಹೊಸ ಹ್ಯಾಚ್‍‍ಬ್ಯಾಕ್‍‍ನ ಬುಕ್ಕಿಂಗ್‍ ಶುರುವಾಗಿರುವುದರ ಬಗ್ಗೆ ಘೋಷಿಸಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಅನ್ನು ಕಂಪನಿಯ ಡೀಲರ್‍‍‍ಗಳ ಬಳಿ ಹಾಗೂ ಆನ್‌ಲೈನ್‌ನಲ್ಲಿ ರೂ.11,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.