Technology Short News

ಇಂಟೆಲ್ ನಿಂದ 5G ಮೋಡೆಮ್ ಬಿಡುಗಡೆ: ಭವಿಷ್ಯದ ತಂತ್ರಜ್ಞಾನ..!

ಇಂಟೆಲ್ ನಿಂದ 5G ಮೋಡೆಮ್ ಬಿಡುಗಡೆ: ಭವಿಷ್ಯದ ತಂತ್ರಜ್ಞಾನ..!

ಕಂಪ್ಯೂಟರ್ ಪ್ರೋಸೆಸರ್ ತಯಾರಿಕೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಇಂಟೆಲ್ ಈ ಬಾರಿ ಸ್ಮಾರ್ಟ್‌ಫೋನ್ ಮೋಡೆಮ್ ಗಳನ್ನು ತಯಾರಿಸಲು ಮುಂದಾಗಿದೆ. ಹೊಸದಾಗಿ 5G ಮತ್ತು 4G ಮೋಡೆಮ್ ಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಿಲು ಮುಂದಾಗಿದೆ. ಇಂಟೆಲ್ 5G ಮೋಡೆಮ್ 6GHz ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ ಎನ್ನಲಾಗಿದೆ. ಅತೀ ವೇಗದ ಕಾರ್ಯಚರಣೆಯನ್ನು ಈ 5G ಮೋಡೆಮ್ ನಲ್ಲಿ ಕಾಣುವ ಸಾಧ್ಯತೆ ಇದೆ.

ಅಮೆಜಾನ್ ಅಲೆಕ್ಸಾ ಸ್ಪರ್ಧೆ ನೀಡಲು ಬರಲಿದೆ ಆಪಲ್ ಹೋಮ್ ಪೊಡ್..!

ಅಮೆಜಾನ್ ಅಲೆಕ್ಸಾ ಸ್ಪರ್ಧೆ ನೀಡಲು ಬರಲಿದೆ ಆಪಲ್ ಹೋಮ್ ಪೊಡ್..!

ಆಪಲ್ ಹೋಮ್ ಪೊಡ್ ಸ್ಪೀಕರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಸ್ವೀಕರ್ ಮಾರುಕಟ್ಟೆಯಲ್ಲ ಮಾರಾಟವಾಗಲಿದೆ. ಇದಕ್ಕಾಗಿ ಆಪಲ್ ಭಾರೀ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಲಿದೆ. ಆಪಲ್ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್ ಹೋಮ್ ಪೊಡ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪಲ್ ಸಿರಿಯೊಂದಿಗೆ ಕಾರ್ಯಚರಣೆಯನ್ನು ನಡೆಸಲಿದೆ. ಆಪಲ್ ಇದಕ್ಕಾಗಿಯೇ ಸಿರಿಯನ್ನು ಮತ್ತಷ್ಟು ಸುಧಾರಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

2030ರ ವೇಳೆಗೆ ಭಾರತದಲ್ಲಿರುವ ಪ್ರತಿಯೊಂದು ವಾಹನವನ್ನೂ ಸಹ ಎಲೆಕ್ಟ್ರಿಕ್ ಎಂಜಿನ್ ಹೊಂದುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ಸರ್ಕಾರದ ಹೊಂದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಹೊಸ ಕ್ರಾಂತಿಗೆ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಮತ್ತು ಸುಜುಕಿ ಕೈ ಜೋಡಿಸಿವೆ. ಹೌದು, ಟೊಯೊಟಾ ಮತ್ತು ಸುಜುಕಿ 2020ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಜಂಟಿ ಸಹಭಾಗಿತ್ವದಲ್ಲಿ ವಿದ್ಯುತ್ ವಾಹನಗಳನ್ನು ಪ್ರಾರಂಭಿಸಲು ತಿಳುವಳಿಕೆ ಪತ್ರ(MoU)ಕ್ಕೆ ಸಹಿ ಹಾಕಿವೆ.

ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!

ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!

ಹಾಂಕಾಂಗ್ ಮೂಲದ ಮೊಬೈಲ್ ತಯಾರಿಕ ಸಂಸ್ಥೆ ಇನ್ಫಿನಿಕ್ಸ್ 'ಇನ್ಫಿನಿಕ್ಸ್ ಝೀರೋ 5' ಎಂಬ ಸ್ಮಾರ್ಟ್‌ಫೋನ್ ಪರಿಚಯಿಸಿದ್ದು, ಈ ಫೋನ್ ಫೀಚರ್ಸ್ ಎಲ್ಲರಿಗೂ ಒಮ್ಮೆ ಶಾಕ್ ನೀಡಿದೆ.
6GB RAM, ಡ್ಯಯಲ್ ಕ್ಯಾಮೆರಾ ಮತ್ತು 4350mAh ಬ್ಯಾಟರಿಯಂತಹ ಅತ್ಯಾಧನಿಕ ಫೀಚರ್‌ಗಳನ್ನು ಹೊತ್ತು 'ಇನ್ಫಿನಿಕ್ಸ್ ಝೀರೋ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. 64GB ವೆರಿಯಂಟ್ ಬೆಲೆ 17,999 ರೂ. ಆದರೆ, 128GB ವೆರಿಯಂಟ್ ಬೆಲೆ ಕೇವಲ 19,999 ರೂ.